For the best experience, open
https://m.hosakannada.com
on your mobile browser.
Advertisement

Budget: ರಾಜ್ಯ ಬಜೆಟ್‌; ಈ ದಿನದಂದು ಬಜೆಟ್‌ ಮಂಡನೆ!!!

11:47 AM Jan 17, 2024 IST | ಅಶ್ವಿನಿ ಹೆಬ್ಬಾರ್
UpdateAt: 11:52 AM Jan 17, 2024 IST
budget  ರಾಜ್ಯ ಬಜೆಟ್‌  ಈ ದಿನದಂದು ಬಜೆಟ್‌ ಮಂಡನೆ
Advertisement

Union Budget: ರಾಜ್ಯ ಸರ್ಕಾರ ಮುಖ್ಯ ಬಜೆಟ್ (budget) ಎಂದು ನಡೆಯಲಿದೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಫೆಬ್ರವರಿ 16ರಂದು ಉತ್ತರ ಲಭಿಸುವ ನಿರೀಕ್ಷೆಯಿದ್ದು, ಸಿಎಂ ಸಿದ್ದರಾಮಯ್ಯ (Cm siddaramayya)ಬಜೆಟ್ (Budget 2024)ಸಿದ್ಧತೆ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.

Advertisement

ಫೆ. 12ರಿಂದ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ, ನಾಲ್ಕು ದಿನಗಳ ಕಾಲ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ಫೆ.16 ಇಲ್ಲವೇ 17ರಂದು ಸಿಎಂ ಸಿದ್ದರಾಮಯ್ಯನವರು ತಮ್ಮ 15ನೇ ಆಯವ್ಯಯವನ್ನು ಮಂಡಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: K N Rajanna: ಟೆಂಟ್ ಒಳಗೆ ಗೊಂಬೆ ಕೂರಿಸಿ ರಾಮ, ರಾಮ ಅಂತಿದ್ರು !! ಅಯೋಧ್ಯೆ ಶ್ರೀರಾಮನ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕಾಂಗ್ರೆಸ್ ಸಚಿವ

Advertisement

ಫೆ.12ರಿಂದ 23ರವರೆಗೆ ಅಧಿವೇಶನ ನಡೆಯಲಿದೆ ಎನ್ನಲಾಗಿದೆ. ಗ್ಯಾರಂಟಿಗಳಿಗೆ ಈ ಬಾರಿಯ ಬಜೆಟ್ನಲ್ಲಿ ಸುಮಾರು 75000 ಕೋಟಿ ರೂ. ಖರ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸುವುದಕ್ಕೆ ಸಿದ್ದರಾಮಯ್ಯ ಅವರಿಗೆ ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಈ ಬಾರಿ ಬಜೆಟ್ ಗಾತ್ರ ಮೂರೂವರೆ ಲಕ್ಷ ಕೋಟಿ ರೂ.ಗೆ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ.

Advertisement
Advertisement
Advertisement