Latest News: ವಿನಾಶ ಕಾಲೇ ವಿಪರೀತ ಬುದ್ಧಿ Or ಮಾಲ್ಡೀವ್ಸ್ : ಬೇಲ್ ಔಟ್
'ವಿನಾಶ ಕಾಲೇ ವಿಪರೀತ ಬುದ್ಧಿ' ಎಂಬ ನುಡಿಗಟ್ಟು ಮಾಲ್ಡೀವ್ಸ್ ಗೆ ಭಾಗಶಃ ಅನ್ವಯವಾಗುತ್ತದೆ. ಭಾರತದ ಜೊತೆಗಿನ ಸಂಬಂಧವನ್ನು ಕೆಡಿಸಿಕೊಂಡ ಮುಯಿಝು ಸರ್ಕಾರ ಮಾಲ್ಡೀವ್ಸ್ ನನ್ನು ದಿವಾಳಿಯ ಸ್ಥಿತಿಗೆ ತಂದು ನಿಲ್ಲಿಸಿರುವುದು ದುರಂತವೇ ಸರಿ.
ಚೈನಾದ ಮಾತು ಕೇಳಿ ಪಕ್ಕದ ಭಾರತವನ್ನು ದೂರ ಮಾಡಿಕೊಂಡ ಮಾಲ್ಡೀವ್ಸ್ ನ ಆರ್ಥಿಕತೆ ಹಳ್ಳ ಹಿಡಿದಿದೆ. ಇಂಡಿಯಾ ಔಟ್ ಕ್ಯಾಂಪೇನ್ ಮಾಡಿದ ಮಾಲ್ಡೀವ್ಸ್ ಗೆ ಭಾರತ ಪ್ರತ್ಯುತ್ತರವಾಗಿ, ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಲಕ್ಷ ದ್ವೀಪವನ್ನು ಅಭಿವೃದ್ಧಿ ಪಡಿಸುವ ಕಡೆಗೆ ಗಮನವಹಿಸಿತು. ಇದು ಎಲ್ಲಿಯ ವರೆಗೂ ತಲೂಪಿತೆಂದರೆ, ಮುಯಿಝು ರವರ ಪದಚ್ಯುತಿಯ ವರೆಗೂ ವಿಸ್ತಾರಿಸಿತು.
ಈ ಹಿಂದೆ ಭಾರತ ಮತ್ತು ಮಾಲ್ಡೀವ್ಸ್ ನ ನಡುವೆ ಉತ್ತಮ ಸ್ನೇಹ ಸಂಬಂಧಗಳಿದ್ದವು. ಭಾರತವು 2022 -23 ರ ಕೇಂದ್ರ ಬಜೆಟ್ ನಲ್ಲಿ ಮಾಲ್ಡೀವ್ಸ್ ಗೆ 183 ಕೋಟಿ ಅನುದಾನವನ್ನು ನೀಡಿತ್ತು. ನಂತರದ ವರ್ಷ ಅಂದರೆ 2023 -24 ರ ಬಜೆಟ್ ನಲ್ಲಿ ಈ ಹಿಂದಿನ ಬಜೆಟ್ ಗಿಂತ 4 ರಷ್ಟು ಹೆಚ್ಚಿಸಿ ಒಟ್ಟು 770.3 ಕೋಟಿ ಅನುದಾನ ನೀಡಿತ್ತು. ಮಾಲ್ಡೀವ್ಸ್ ನ ಭಾರತ ವಿರೋಧಿ ನಡೆಯನ್ನು ಗಮನಿಸಿದ ಭಾರತ ತನ್ನ ಅನುದಾನಕ್ಕೆ ಕತ್ತರಿ ಹಾಕುವ ಮೂಲಕ ಮಾಲ್ಡೀವ್ಸ್ ಗೆ ಬುದ್ಧಿ ಕಲಿಸಿದೆ. 2024 ರ ಮಧ್ಯಂತರ ಬಜೆಟ್ ನಲ್ಲಿ ಮಾಲ್ಡೀವ್ಸ್ ಗೆ ನೀಡಬೇಕಿದ್ದ ಅನುದಾನದಲ್ಲಿ ಶೇ. 25 ರಷ್ಟು ಅನುದಾನವನ್ನು ಕಡಿತಗೊಳಿಸಿದೆ. ಮತ್ತೊಂದೆಡೆ ಮಾಲ್ಡೀವ್ಸ್ ನ ಪ್ರವಾಸೋದ್ಯಮವು ಆ ದೇಶದ ಆರ್ಥಿಕತೆಗೆ ಶೇ. 28 ರಷ್ಟು ಕೊಡುಗೆಯನ್ನು ನೀಡುತ್ತದೆ. ಆ ಪೈಕಿ ಭಾರತೀಯ ಪ್ರವಾಸಿಗರ ಕೊಡುಗೆ ಅಪಾರವಾದದ್ದು. ಆದರೆ ಸದ್ಯದ ಅಂಕಿ ಅಂಶಗಳ ಪ್ರಕಾರ ಜನವರಿ 28 ರ. ವರೆಗೆ ಕೇವಲ 13,889 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಮೂಲಕ ಮಾಲ್ಡೀವ್ಸ್ ಪ್ರವಾಸದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ಕುಸಿದಿದೆ. ಇದು ಮಾಲ್ಡೀವ್ಸ್ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಮಾಲ್ಡೀವ್ಸ್ ಸರ್ಕಾರ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಐಎಂಎಫ್ ನ ಮೊರೆ ಹೋಗಿದೆ. ದಿವಾಳಿ ಹಂತ ತಲುಪಿರುವ ಮಾಲ್ಡೀವ್ಸ್ ಆರ್ಥಿಕ ಕುಸಿತವನ್ನು ಮೇಲೆತ್ತುವ ಸಲುವಾಗಿ ಬೇಲ್ ಔಟ್ ಸಾಲವನ್ನು ಕೋರಿ ಐಎಂಎಫ್ ನತ್ತ ಕೈ ಚಾಚಿದೆ. ಮುಯಿಝು ಸರ್ಕಾರದ ಭಾರತ ವಿರೋಧಿ ನಿಲುವು,ಭಾರತೀಯ ಸೇನೆಯನ್ನು ಹೊರ ಹಾಕಲು ನಡೆಸಿದ ಪ್ರಯತ್ನಗಳು ಹಾಗೂ ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು ಎರಡು. ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಹದಗೆಡೆಸಿವೆ.
ಭಾರತ ಮಾಲ್ಡೀವ್ಸ್ ಗೆ ತನ್ನ ಶಕ್ತಿ ಮೀರಿ ಸಹಾಯ ಮಾಡಿದ್ದಿದೆ. ಬಂಡುಕೋರರ ಆಕ್ರಮಣದಿಂದ ಮಾಲ್ಡೀವ್ಸ್ ಅನ್ನು ರಕ್ಷಿಸಿದ್ದು ಭಾರತ. ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನೀರು ಸರಬರಾಜು ಮಾಡಿದ್ದು ಭಾರತ, ಮಾಲ್ಡೀವ್ಸ್ ನ ಕಡಲ ತೀರದ ಕಾವಲಿಗೆ ಡಾರ್ನಿಯಾರ್ ವಿಮಾನ ಹಾಗೂ 88 ಮಂದಿ ಸೈನಿಕರನ್ನು ಕೊಟ್ಟಿದ್ದು ಭಾರತ, ಚೀನಾ ವೈರಾಣುವಿನ ಸಂದರ್ಭದಲ್ಲಿ ಲಸಿಕೆ ನೀಡಿದ್ದು ಭಾರತ, ಅಲ್ಲಿನ ಜನರಿಗೆ ಆರೋಗ್ಯ ಸಮಸ್ಯೆಯಾಗದಂತೆ ಆಸ್ಪತ್ರೆಗಳನ್ನು ನಿರ್ಮಿಸಿ ಭಾರತದಿಂದಲೇ ವೈದ್ಯರನ್ನು ಕೊಟ್ಟಿದ್ದು ಭಾರತವೇ ಆಗಿದೆ. ಈಗೆ ಒಂದಲ್ಲ ಎರಡಲ್ಲ, ಮಾಲ್ಡೀವ್ಸ್ ಸಹಾಯ ಬಯಸಿದಾಗಲೆಲ್ಲ ಭಾರತ ಧಾವಿಸಿ ಬಂದಿದೆ. ಆದರೆ ಮಾಲ್ಡೀವ್ಸ್ ಸರ್ಕಾರ ತನ್ನ ವಿರೋಧಿ ನಡೆಯಿಂದ ಅನ್ನ ತಿಂದ ಮನೆಗೆ ದ್ರೋಹ ಬಗೆಯುತ್ತಿದೆ.