For the best experience, open
https://m.hosakannada.com
on your mobile browser.
Advertisement

Parliment Attack: ಸಂಸತ್ ಅಟ್ಯಾಕ್ ಪ್ರಕರಣ - ಸ್ಮೋಕ್ ದಾಳಿಯ ಸ್ಪೋಟಕ ಕಾರಣ ಬಿಚ್ಚಿಟ್ಟ ದುಷ್ಕರ್ಮಿಗಳು !!

09:27 AM Dec 14, 2023 IST | ಹೊಸ ಕನ್ನಡ
UpdateAt: 09:35 AM Dec 14, 2023 IST
parliment attack  ಸಂಸತ್ ಅಟ್ಯಾಕ್ ಪ್ರಕರಣ    ಸ್ಮೋಕ್ ದಾಳಿಯ ಸ್ಪೋಟಕ ಕಾರಣ ಬಿಚ್ಚಿಟ್ಟ ದುಷ್ಕರ್ಮಿಗಳು
Advertisement

Parliment attack: ದೆಹಲಿಯಲ್ಲಿ ಸಂಸತ್ ಭವನದೊಳಗೆ ನಡೆದ ಸ್ಮೋಕ್ ದಾಳಿಯು ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಆಗಂತುಕರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದೀಗ ಈ ಸ್ಮೋಕ್ ದಾಳಿ ಹಿಂದಿನ ರೋಚಕ ಸತ್ಯವನ್ನು ದುಷ್ಕರ್ಮಿಗಳು ತೆರೆದಿಟ್ಟಿದ್ದಾರೆ.

Advertisement

ಈ ಆರೋಪಿಗಳೆಲ್ಲರೂ ಭಗತ್ ಸಿಂಗ್(Bhagath singh) ಅವರ ಫ್ಯಾನ್ಸ್ ಕ್ಲಬ್ ಸದಸ್ಯರು. ಸುಮಾರು ಒಂದೂವರೆ ವರ್ಷದ ಹಿಂದೆ ಎಲ್ಲರೂ ಮೈಸೂರಿನಲ್ಲಿ ಭೇಟಿಮಾಡಿದ್ದಾರೆ. ಚಳಿಗಾಲದ ಅಧಿವೇಶನ ಶುರುವಾದ ಬಳಿಕ ಡಿಸೆಂಬರ್ 10 ರಂದು ದೆಹಲಿಗೆ ಬಂದು ಗುರುಗ್ರಾಮದ ವಿಕ್ಕಿ, ವೃಂದಾ ನಿವಾಸದಲ್ಲಿ ವಾಸವಾಗಿದ್ದಾರೆ. ಬಳಿಕ ಅಮೋಘ್ ಶಿಂಧೆ ಎಂಬಾತ ಮಹಾರಾಷ್ಟ್ರದಿಂದ ಕಲರ್ ಬ್ಲಾಸ್ಟ್ ಪಟಾಕಿಯನ್ನು ತಂದು ಹಂಚಿದ್ದಾನೆ. ಬಳಿಕ ಸಂಸತ್(Parliament) ಪ್ರವೇಶಿಸುವ ಮುನ್ನ ಎಲ್ಲಾ ಆರೋಪಿಗಳ ಇಂಡಿಯಾ ಗೇಟ್ ಬಳಿ ಮೀಟ್ ಆಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಅಲ್ಲದೆ ದಾಳಿಯ ದಿನ ಬೆಳಿಗ್ಗೆ 11.45ಕ್ಕೆ ಮನೋರಂಜನ್(Manoranjan) ಮತ್ತು ಸಾಗರ್ ಶರ್ಮ (Sagar sharma) ಸಂಸತ್ತಿನೊಳಗೆ ಪ್ರವೇಶಿಸಿದ್ದಾರೆ. ನಂತರ ಮಧ್ಯಾಹ್ನದ ವೇಳೆ ವೀಕ್ಷಕರ ಗ್ಯಾಲರಿಯಿಂದ ಕಲಾಪದ ಸ್ಥಳಕ್ಕೆ ಜಿಗಿದು ಕಲರ್ ಸ್ಮೋಕ್ ಪಟಾಕಿಯನ್ನು ಸಿಡಿಸಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಮುಂದಿನ ಬೆಳವಣಿಗೆಗಳು ಏನೆಂಬುದು ಎಲ್ಲರಿಗೂ ತಿಳಿದಿದೆ. ಸದ್ಯ ಇನ್ನೂ ಕೂಡ ಪ್ರಕರಣದ ತನಿಖೆ ನಡೆಯುತ್ತಿದ್ದು, ಯಾಕೆ ಹೀಗೆ ದಾಳಿ ಮಾಡಲಾಯಿತು ಎಂಬುದು ತಿಳಿಯಬೇಕಿದೆ. ಸದ್ಯ 5ನೇ ಶಂಕಿತ ವಿಶಾಲ್ ಶರ್ಮಾ ಅವರನ್ನು ಕೂಡ ಪೋಲಿಸರು ಈಗಷ್ಟೇ ಬಂಧಿಸಿದ್ದು ಯೋಜನೆ ರೂಪಿಸಿದ ನಾಲ್ವರಿಗೆ ಆಶ್ರಯ ನೀಡಿದ್ದಾನೆ ಎಂದು ತಿಳಿದುಬಂದಿದೆ.

Advertisement

ಇದನ್ನು ಓದಿ: ಗಿಡ್ಡಗೆ, ಕುಳ್ಳಗೆ ಇದ್ದೇನೆ ಎಂಬ ಚಿಂತೆಯೇ ?! ಡೋಂಟ್ ವರಿ, ಈ 3 ಸುಲಭ ವ್ಯಾಯಾಮ ಮಾಡಿ ಒಂದೇ ತಿಂಗಳಲ್ಲಿ ಉದ್ದ ಆಗ್ತೀರಾ !!

Advertisement
Advertisement
Advertisement