ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Agricultural loan: ರೈತರೇ ನೀವು ಕೃಷಿ ಸಾಲ ಮಾಡಿದ್ದೀರಾ? ಹಾಗಿದ್ರೆ ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ !!

10:11 PM Dec 14, 2023 IST | ಹೊಸ ಕನ್ನಡ
UpdateAt: 10:19 PM Dec 14, 2023 IST
Advertisement

Agricultural loan: ರೈತರ ಜೀವನವೇ ಹಾಗೆ. ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಸಾಲ ಎಂಬ ಶೂಲದಲ್ಲಿ ಸಿಲುಕೇಯ ಸಿಲುಕುತ್ತಾರೆ. ರೈತರ ಈ ಕಷ್ಟಗಳನ್ನು ಅರಿತುಕೊಂಡ ಸರ್ಕಾರ ರೈತರಿಗಾಗಿಯೇ ವಿವಿಧ ಸಾಲ ಸೌಲಭ್ಯ ಸೌಲಭ್ಯಗಳನ್ನು ನೀಡುತ್ತದೆ ಅದರಲ್ಲಿ ಕೃಷಿ ಸಾಲವು ಒಂದು. ಆದರೆ ಬೆಳೆದ ಬೆಳೆ ಕೈಗೆ ಬಾರದೆ ಇದ್ದಾಗ ಅದನ್ನು ಕಟ್ಟಲೂ ಕಷ್ಟವಾಗುತ್ತದೆ. ಆದರೀಗ ರಾಜ್ಯ ಸರ್ಕಾರವು ರೈತರ ಈ ಸಮಸ್ಯೆಗೆ ನೆರವಾಗಲು ಮುಂದಾಗಿದ್ದು ಕೃಷಿ ಸಾಲದ(Agricultural loan) ಕುರಿತು ಮಹತ್ವದ ಕ್ರಮಕ್ಕೆ ಮುಂದಾಗಿದೆ.

Advertisement

 

ಹೌದು, ರೈತರು ಪಡೆದ ಸಾಲದ ಅವಧಿ ಮುಗಿದಾಗ ಬ್ಯಾಂಕ್ ಗಳು ರೈತರ ಮನೆಗೆ ನೋಟಿ ಕಳಿಸಿಯೋ ಅಥವಾ ಅಧಿಕಾರಿಗಳಿಂದ ಭೇಟಿ ನೀಡಿಯೋ ಸಾಲ ವಸೂಲಾತಿಗೆ ಮುಂದಾಗುತ್ತದೆ. ಇದರಿಂದಾಗಿ ಪರಿಪರಿಯಾಗಿ ನೋವುಣ್ಣುವ ರೈತ ಅಸಹಾಯಕನಾಗಿ ಕಂಗಾಲಾಗುತ್ತಾನೆ. ಅಲ್ಲದೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತುವುದೂ ಉಂಟು. ಆದರೀಗ ಇದೆಲ್ಲವನ್ನು ತಪ್ಪಿಸಿ ರೈತರಿಗೆ ನೆರವಾಗಲು ಮುಂದಾಗಿರುವ ರಾಜ್ಯ ಸರ್ಕಾರ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಮರು ಪಾವತಿ ಅವಧಿ ವಿಸ್ತರಣೆ ಮಾಡುವ ಕುರಿತು ಚಿಂತನೆ ನಡೆಸಿದೆ. ಈ ಕುರಿತಂತೆ ಕಂದಾಯ ಸಚಿವ ಕೃಷಿ ಬೈರೇಗೌಡರವರು ಸಾಲ ಮರು ಪಾವತಿಗೆ ನೂತನ ಕ್ರಮ ಜಾರಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Advertisement

 

ಅಂದಹಾಗೆ ಸಚಿವ ಕೃಷ್ಣ ಬೈರೇಗೌಡ(Krishne bhyregouda) ಅವರು ತಿಳಿಸಿರುವ ಮಾಹಿತಿಯಂತೆ ಬ್ಯಾಂಕ್ ಗಳು, ರೈತರು ತೆಗೆದುಕೊಂಡ ಅಲ್ಪಾವಧಿ ಸಾಲವನ್ನು ಮಧ್ಯಮ ಅವಧಿಗೆ ಹಾಗೂ ಮಧ್ಯಮಾವಧಿಗೆ ಸಾಲವನ್ನು ದೀರ್ಘಾವಧಿಗೆ ವಿಸ್ತರಿಸಬೇಕು ಎಂದು ತಿಳಿಸಿದೆ. ಇದರಿಂದಾಗಿ ರೈತರಿಗೆ ಸಾಲ ತೀರಿಸಲು ಹೆಚ್ಚು ಸಮಯ ಲಭ್ಯವಾಗುತ್ತದೆ. ವರ್ಷದ ಬೆಳೆ ಬಂದ ನಂತರವೇ ರೈತರು ಸಾಲ ತೀರಿಸಬಹುದು. ಈ ಮೂಲಕ ಸಾಲವನ್ನು ಕಟ್ಟಲು ರೈತರು ತೊಂದರೆಗೊಳಗಾಗಬೇಕಿಲ್ಲ. ಒಟ್ಟಿನಲ್ಲಿ ರೈತರಿಗೆ ಅನುಕೂಲಕರವಾದ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿರುವುದು ಶ್ಲಾಘನೀಯ.

ಇದನ್ನು ಓದಿ: K S Eshwarappa: ಪ್ರತಾಪ್ ಸಿಂಹ ಬಗ್ಗೆ ಕೆ ಎಸ್ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್ !!

Advertisement
Advertisement