ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Women's Day: “ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”

11:03 AM Mar 08, 2024 IST | ಹೊಸ ಕನ್ನಡ
UpdateAt: 02:05 PM Mar 08, 2024 IST
Advertisement

ಮಾರ್ಚ್ 8 ರಂದು ಆಚರಿಸುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಪಂಚದ ಎಲ್ಲಾ ಮಹಿಳೆಯರ ಸ್ಥಾನಮಾನ ಹೆಚ್ಚಿಸುವತ್ತ ಹಾಗೂ ಹಾಗೂ ಅವರು - ಅವರ ಕುಟುಂಬದ ಬಗೆಗಿನ ಆರೋಗ್ಯ ರಕ್ಷಣೆಯತ್ತ ಒತ್ತುಕೊಡುತ್ತಿದ್ದಾರೆ. ಈ ನಮ್ಮ ದೇಶದಲ್ಲಿ “ ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವ್ವನೇ, ರಕ್ಷಂತೆ ಸ್ಥಾವರೇ ಪುತ್ರ, ನಾ ಸ್ತ್ರೀ ಸ್ವಾತಂತ್ರ್ಯ ಮರ್ಹತೀ”. ಅಂದರೆ ಇಲ್ಲಿ ಬಾಲಕಿಯಾಗಿದ್ದಾಗ ತಂದೆ, ಯವ್ವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಗ ಮಹಿಳೆಯನ್ನು ಕಾಪಾಡುವನು. ಸ್ತ್ರೀಗೆ ಸ್ವಾತಂತ್ರ್ಯವು ಬೇಕಿಲ್ಲ. ಈ ಮಾತು ಶತಮಾನದಲ್ಲಿ ಹಾಸ್ಯಸ್ಪದವಾಗಿ ಕಾಣಿಸುತ್ತದೆ.

Advertisement

ಇದನ್ನೂ ಓದಿ: Vitla: ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿದ ಅನ್ಯಕೋಮಿನ ವ್ಯಕ್ತಿ; ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ

ಈ ಮಹಿಳಾ ದಿನಾಚರಣೆ ಎಂದಾಕ್ಷಣ ನೆನಪಿನಂಗಳದಲ್ಲಿ ಬರುವುದು ನಮ್ಮ ಮನೆಯಲ್ಲಿ ಏನು ಪ್ರತಿಫಲ ಅಪೇಕ್ಷೆಯಿಲ್ಲದೆ ಕೆಲಸ ಮಾಡುವ ಅಮ್ಮಂದಿರು. ಆದರೆ ಸಾಮಾನ್ಯವಾಗಿ ಹೇಳುವುದು ಇವತ್ತೊಂದು ಮಹಿಳೆಯರ ದಿನ. ಉಳಿದ ದಿನಗಳು ಪುರುಷರಿಗೆ ಎಂದು. ಇದು ಸರಿಯಲ್ಲ ಪ್ರತಿದಿನ ನಮ್ಮದೇ. ಸ್ತ್ರೀ ಅಮೂಲ್ಯವಾದ ಸೃಷ್ಟಿ. ಹೆಣ್ಣು ಎಂಬವಳು ಎಲ್ಲ ಕೆಲಸವನ್ನು ಮಾಡುವಳು ಅಂದರೆ ಇವರು ಬೈಕ್, ರಿಕ್ಷಾ, ಟ್ಯಾಕ್ಸಿಗಳನ್ನು ಚಲಾಯಿಸುವುದರಲ್ಲದೆ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕೆಲಸವನ್ನು ಕೂಡ ಹೆಂಗಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಜಾತ್ರೆಯ ಸಂದರ್ಭದಲ್ಲಿಯೂ ಕೇರಳದ ಚೆಂಡೆ ವಾದಕರಂತೆ, ಮಹಿಳಾ ಚೆಂಡೆ ವಾದ್ಯದ ತಂಡವನ್ನು ರಚಿಸಿ ತಾವೇನು ಕಮ್ಮಿ ಯಿಲ್ಲ ಎಂಬಂತೆ ಸೈ ಎನಿಸಿಕೊಂಡಿದ್ದಾರೆ.. ಆದರೆ ಹೆಣ್ಣನ್ನು ಪುರುಷನ ನಂತರದ ಸ್ಥಾನದಲ್ಲಿ ಕಾಣುವ ಕಾಲವೊಂದಿತ್ತು. ಆದರೆ ಈಗ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಪುರುಷರಿಗಿಂತ ಕಡಿಮೆಯಿಲ್ಲ, ಅವರಿಗೆ ಸರಿಸಮಾನವಾಗಿ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅವಳು ಅಸಮರ್ಥಳು ಎಂಬುದಕ್ಕೆ ಲಕ್ಷಾಂತರ ಬಗೆಯ ಹಲವು ನಿದರ್ಶನಗಳು ಇಂದು ನಮ್ಮ ಕಣ್ಣ ಮುಂದಿವೆ ಹೇಳಿದರೆ ತಪ್ಪಾಗಲಾರದು.

Advertisement

“ ನಾನು ಹೆಣ್ಣು ನನ್ನಿಂದ ಯಾವುದು ಸಾಧ್ಯವಿಲ್ಲ”. ಎಂಬ ಕೀಳರಿಮೆ ಮನೋಭಾವದಿಂದ ಹೊರಬನ್ನಿ. ಹೆಣ್ಣು ಇಂದು ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ, ಅಬಲೆಯರಲ್ಲ, ಏನನ್ನು ಸಾಧಿಸ ಬಲ್ಲಳು. ಸ್ತ್ರೀ ಪುರುಷರಿಬ್ಬರೂ ಸರಿಸಮಾನರು ಎಂಬುದನ್ನರಿತು ಮಹಿಳೆಯರನ್ನು ಗೌರವಿಸೋಣ.

“.. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು..

Advertisement
Advertisement