ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Health Tips For Menstrual Days: ಮಹಿಳೆಯರೇ ಮುಟ್ಟಿನ ನೋವಿಗೆ ಮನೆಯಲ್ಲಿರೋ 8 ಎಂಟು ಆಹಾರಗಳೇ ರಾಮಬಾಣ !!

04:59 PM Nov 16, 2023 IST | ಕಾವ್ಯ ವಾಣಿ
UpdateAt: 08:06 AM Mar 28, 2024 IST
Advertisement

Health Tips For Menstrual Days: ಋತುಚಕ್ರದ ಸಮಯದಲ್ಲಿ (periods time), ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ದೇಹವನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿಡಲು ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳು ಅಗತ್ಯ. ಈ ಸಮಯ ಭೂರಿ ಭೋಜನದ ಬದಲು, ಹಗುರವಾದ ಸೌಮ್ಯ ಆಹಾರದ ಸೇವನೆ (Health Tips For Menstrual Days) ಅನುಕೂಲಕರವಾಗಿರುತ್ತವೆ.

Advertisement

ಅಂತಹ ಸರಳ ಆಹಾರದ ಪಟ್ಟಿ ಇಲ್ಲಿದೆ :
ಗ್ರೀನ್ ಟೀ ಕುಡಿಯುವುದು ಉತ್ತಮ. ಆದ್ರೆ ಕಾಫಿ ಮತ್ತು ಮದ್ಯ ಕುಡಿಯದಿರಿ. ಮುಟ್ಟಿನ ಸಮಯದಲ್ಲಿ ಆಲ್ಕೋಹಾಲ್ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರ ಪರಿಣಾಮವಾಗಿ ತಲೆನೋವು, ಹೊಟ್ಟೆ ಉಬ್ಬುವುದು, ಅತಿಸಾರ ಮತ್ತು ವಾಕರಿಕೆ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಜೀರ್ಣ ಕ್ರಿಯೆಗೆ ಸಹಾಯವಾಗಲು ಬಾಳೆಹಣ್ಣು ತಿನ್ನಿ, ಆದ್ರೆ ಫಾಸ್ಟ್ ಫುಡ್ ತಿನ್ನಬೇಡಿ ಇದರಿಂದ ನಿಮಗೆ ಅಜೀರ್ಣ ಸಮಸ್ಯೆ ಎದುರಾಗಬಹುದು.

Advertisement

Cristiano Ronaldo: ಸೌದಿಯಲ್ಲಿ ಫುಟ್ಬಾಲ್ ಆಟದ ಸಂದರ್ಭ ಅಸಭ್ಯ ಸನ್ನೆ ಹಿನ್ನೆಲೆ, ಕ್ರಿಸ್ಟಿಯಾನೊ ರೊನಾಲ್ಡೊಗೆ…

ಆದಷ್ಟು ಮೊಸರು ಸೇವಿಸಿ. ಮೊಸರಿನಲ್ಲಿ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದ್ರೆ ಉಳಿದ ಡೈರಿ ಪದಾರ್ಥ ಸೇವಿಸಬೇಡಿ.

ಇನ್ನು ಡಾರ್ಕ್ ಚಾಕೋಲೇಟ್ ತಿನ್ನಿ, ಉಳಿದ ಸಿಹಿ ಪದಾರ್ಥ ಸೇವನೆ ಒಳ್ಳೆಯದಲ್ಲ. ಸಿಹಿತಿಂಡಿಗಳನ್ನು ತಿನ್ನುವ ಬದಲು, ನೀವು ಹಣ್ಣುಗಳನ್ನು ತಿನ್ನಬಹುದು.

ಆದಷ್ಟು ಬೆಚ್ಚಗಿನ ನೀರು ಕುಡಿಯಿರಿ. ತೀರಾ ಕೋಲ್ಡ್ ವಾಟರ್ ಕುಡಿಯಬೇಡಿ.

ಶುಂಠಿ ನೀರು ಸೇವನೆ. ನೀವು ನೀರಿಗೆ ಕತ್ತರಿಸಿದ ಶುಂಠಿ ಚೂರುಗಳನ್ನು ಹಾಕಿ ಕುದಿಸಿ ಕುಡಿಯಿರಿ. ಶುಂಠಿ ಉರಿಯೂತದ ಪರಿಣಾಮಗಳನ್ನು ಹೊಂದಿದೆ, ಇದು ನೋವು ಸ್ನಾಯುಗಳನ್ನು ಶಮನಗೊಳಿಸುತ್ತದೆ.

Heart Attack: ಹೃದಯಘಾತಕ್ಕೆ ಮೈದಾನದಲ್ಲೇ ಕರ್ನಾಟಕದ ಕ್ರಿಕೆಟಿಗ ಸಾವು !!

ಇನ್ನು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದು ಕೂಡಾ ಉತ್ತಮ.

ಇದರ ಹೊರತು ನೀರಿಗೆ ಶುಂಠಿ ಚೂರುಗಳು, ಜೇನುತುಪ್ಪ ಮತ್ತು ನಿಂಬೆ ರಸ ಹಾಕಿ ಕುದಿಸಿ ಕಪ್ ಗೆ ಸೋಸಿಕೊಂಡು ಟೀ ಬ್ಯಾಗ್ ಅದ್ದಿ ಕುಡಿಯಿರಿ.

 

ಇದನ್ನು ಓದಿ: Fastest Internet: ಚೀನಾದಲ್ಲಿ ಬಂದಿದೆ ಹೈ ಸ್ಪೀಡ್ ಇಂಟರ್ನೆಟ್ !! ಅಬ್ಬಬ್ಬಾ.. ಪ್ರತಿ ಸೆಕೆಂಡ್'ಗೆ ಇಷ್ಟೊಂದು ಮೂವಿ ಡೌನ್ಲೋಡ್ ಮಾಡ್ಬೋದು!!

Advertisement
Advertisement