For the best experience, open
https://m.hosakannada.com
on your mobile browser.
Advertisement

CET Exam: ಸಿಇಟಿ ಶುಲ್ಕ ಪಾವತಿ & ಪರೀಕ್ಷೆ ಆಯ್ಕೆಗೆ ಏಪ್ರಿಲ್ 12ರವರೆಗೆ ಗಡುವು

CET Exam: ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಕೆಲವು ಷರತ್ತುಗಳೊಂದಿಗೆ ಏ.12ರವರೆಗೆ ಅನುಮತಿ ನೀಡಲಾಗಿದೆ
08:50 AM Apr 11, 2024 IST | ಸುದರ್ಶನ್
UpdateAt: 09:13 AM Apr 11, 2024 IST
cet exam  ಸಿಇಟಿ ಶುಲ್ಕ ಪಾವತಿ   ಪರೀಕ್ಷೆ ಆಯ್ಕೆಗೆ ಏಪ್ರಿಲ್ 12ರವರೆಗೆ ಗಡುವು
Advertisement

CET Exam: ಏ. 18 ಮತ್ತು 19ರಂದು ನಡೆಯಲಿರುವ ಸಿಇಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮನವಿ ಮೇರೆಗೆ ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಕೆಲವು ಷರತ್ತುಗಳೊಂದಿಗೆ ಏ.12ರವರೆಗೆ ಅನುಮತಿ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿ ಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Karnataka Rain: ಇಂದಿನಿಂದ ಮಳೆಯ ಸಿಂಚನ: ಗುಡುಗು ಮಿಂಚು ಸಹಿತ ಮಳೆ

ಈವರೆಗೂ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ಏ.12ರ ಸಂಜೆ 5 ಗಂಟೆವರೆಗೆ ಶುಲ್ಕ ಪಾವತಿಸಬಹುದಾಗಿದೆ. ಇಂತಹ ಅಭ್ಯರ್ಥಿಗಳು 'ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು' ಇವರ ಹೆಸರಿಗೆ 600 ರೂ. ಮೊತ್ತದ ಡಿ.ಡಿ. ತೆಗೆಸಿಕೊಂಡು, ಸಿಇಟಿ ಅರ್ಜಿ ನಮೂನೆ ಸಹಿತ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಗಂಟೆವರೆಗೆ ಶುಲ್ಕ ಅವರು ತಿಳಿಸಿದ್ದಾರೆ.ಅಭ್ಯರ್ಥಿಗಳು ಇನ್ನು ಅರ್ಜಿಯಲ್ಲಿ ಕೆಲವರು ಕೇವಲ ನೀಟ್ , ಆಯ್ಕೆ ಮಾಡಿಕೊಂಡಿದ್ದು, ಅಂತಹವರು ಈಗ ಸಿಇಟಿ ' ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

Advertisement

ಇದನ್ನೂ ಓದಿ: Gruhalakshmi Amount: ಅಮ್ಮನ 'ಗೃಹಲಕ್ಷ್ಮೀ' ದುಡ್ಡು ನನ್ನ ಓದಿಗೆ ನೆರವಾಯಿತು- ಕಲಾ ವಿಭಾಗದ ಸ್ಟೇಟ್ ಟಾಪರ್ ವಿದ್ಯಾರ್ಥಿ !!

ಅಂತಹ ಅಭ್ಯರ್ಥಿಗಳು ಕೂಡ ಏ.12ರ ಸಂಜೆ 5 ಗಂಟೆಯೊಳಗೆ ಪ್ರಾಧಿಕಾರಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಆದರೆ, ಹೀಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಜ್ಯದ ಯಾವುದೇ ಭಾಗದಲ್ಲಿ ಖಾಲಿ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಕೊಡಲಾಗುವುದು. ಅಭ್ಯರ್ಥಿಗಳು ಇದಕ್ಕೆ ಸಿದ್ದರಿರಬೇಕು ಮತ್ತು ಈ ಹಂತದಲ್ಲಿ ಅರ್ಜಿ ಪರಿಗಣಿಸುವುದರಿಂದ ದತ್ತಾಂಶ ಗಳಲ್ಲಾಗಲಿರುವ ವ್ಯತ್ಯಾಸದ ಬಗ್ಗೆ ಆಕ್ಷೇಪಿಸಲು ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement
Advertisement