For the best experience, open
https://m.hosakannada.com
on your mobile browser.
Advertisement

Mumbai Airport: ಮುಂಬೈನಲ್ಲಿ ವಿಮಾನ ರನ್‌ವೇಯಲ್ಲಿ ಏಕಕಾಲದಲ್ಲಿ ಲ್ಯಾಂಡಿಂಗ್‌, ಟೇಕಾಫ್‌ - ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ !!

Mumbai Airport: ನಿನ್ನೆ ಶನಿವಾರ, ಜೂನ್ 8ರಂದು ಸಂಜೆ ಒಂದೇ ರನ್‌ವೇಯಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದರೆ, ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿರುವ ಘಟನೆಯೊಂದು ನಡೆದಿದೆ.
08:34 AM Jun 10, 2024 IST | ಸುದರ್ಶನ್
UpdateAt: 08:34 AM Jun 10, 2024 IST
mumbai airport  ಮುಂಬೈನಲ್ಲಿ ವಿಮಾನ ರನ್‌ವೇಯಲ್ಲಿ ಏಕಕಾಲದಲ್ಲಿ ಲ್ಯಾಂಡಿಂಗ್‌  ಟೇಕಾಫ್‌   ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ
Advertisement

Mumbai Airport: ಬಹು ದೊಡ್ಡ ದುರಂತವೊಂದು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Chatrapati Shivaji international airport) ಸ್ವಲ್ಪದರಲ್ಲಿ ತಪ್ಪಿದೆ. ನಿನ್ನೆ ಶನಿವಾರ, ಜೂನ್ 8ರಂದು ಸಂಜೆ ಒಂದೇ ರನ್‌ವೇಯಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದರೆ, ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿದೆ. (Air India take off birth at the same time)

Advertisement

NEET Scam: ನೀಟ್ ಹೋರಾಟಕ್ಕೆ ರಾಹುಲ್ ಗಾಂಧಿ ಎಂಟ್ರಿ; ವಿದ್ಯಾರ್ಥಿಗಳಿಗೆ ಸಂಸತ್ ನಲ್ಲೇ ದನಿಯಾಗುವೆ ಎಂದ ನಾಯಕ !

ಮುಂಬೈನಲ್ಲಿ ಏರ್‌ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್‌ ಆಗುತ್ತಿತ್ತು. ಸರಿಯಾಗಿ ಆ ಸಮಯದಲ್ಲಿ ಇಂದೋರ್‌ನಿಂದ ಇಂಡಿಗೋ ವಿಮಾನ ಆಗಮಿಸಿದೆ. ಇಂಡಿಗೋ ವಿಮಾನಕ್ಕೆ ಕೂಡ ಲ್ಯಾಂಡಿಂಗ್ ಆಗಲು ಅನುಮತಿ ಸಿಕ್ಕಿದೆ. ಅನುಮತಿ ಸಿಕ್ಕಿದ ಕಾರಣ ಪೈಲಟ್‌ ರನ್‌ವೇಯಲ್ಲಿ ಇಳಿಸಿ ಅದರ ಚಕ್ರಗಳು ಭೂ ಸ್ಪರ್ಶ ಆಗುತ್ತಿದ್ದಾಗ ಏರ್‌ ಇಂಡಿಯಾ ವಿಮಾನ ಆಗ ತಾನೇ ಜಸ್ಟ್‌ ಟೇಕಾಫ್‌ ಆಗಿತ್ತು. ಅದೇ ಒಂದು ವೇಳೆ ಏರ್‌ ಇಂಡಿಯಾ ಟೇಕಾಫ್‌ ಕೆಲ ಸೆಕೆಂಡ್‌ ವಿಳಂಬವಾಗಿದ್ದರೆ ದುರಂತ ನಡೆದು ಹೋಗಿರುತ್ತಿತ್ತು. ಕ್ಷಣಗಳ ಅಂತರ ಇಲ್ಲದೆ ಹೋಗಿದ್ದರೆ ಹಿಂದಿನಿಂದ ಏರ್‌ ಇಂಡಿಯಾ ವಿಮಾನ ಕ್ರಾಶ್ ಹೊಡೆಯುವ ಸಾಧ್ಯತೆ ಇತ್ತು.

Advertisement

ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್‌ ಮಾಡಲು ಅನುಮತಿ ನೀಡಿದ್ದ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯನ್ನು (ATC) ಸಿಬ್ಬಂದಿಯನ್ನು ತನಿಖಾ ಕಾರ್ಯ ಮುಗಿಯುವವರೆಗೂ ಕೆಲಸದಿಂದ ಕಿತ್ತು ಹಾಕಲಾಗಿದೆ.

Karnataka Rains: ರಾಜ್ಯದ ಹಲವೆಡೆ ರೆಡ್ ಅಲರ್ಟ್, ಉಡುಪಿ ಸೇರಿ ಹಲವೆಡೆ ಆರೆಂಜ್, ದಕ್ಷಿಣ ಕನ್ನಡ, ಕೆಲವೆಡೆ ಯಲ್ಲೋ !

Advertisement
Advertisement
Advertisement