For the best experience, open
https://m.hosakannada.com
on your mobile browser.
Advertisement

Land Purchase Rules: ರಾಜ್ಯದಲ್ಲಿ ಇನ್ನೂ ಹೊರ ರಾಜ್ಯದವರು ಭೂಮಿ ಖರೀದಿಸುವಂತಿಲ್ಲ : ಮುಖ್ಯಮಂತ್ರಿಯಿಂದ ಹೊಸ ಆದೇಶ!!

11:01 AM Jan 02, 2024 IST | ಅಶ್ವಿನಿ ಹೆಬ್ಬಾರ್
UpdateAt: 11:08 AM Jan 02, 2024 IST
land purchase rules  ರಾಜ್ಯದಲ್ಲಿ ಇನ್ನೂ ಹೊರ ರಾಜ್ಯದವರು ಭೂಮಿ ಖರೀದಿಸುವಂತಿಲ್ಲ   ಮುಖ್ಯಮಂತ್ರಿಯಿಂದ ಹೊಸ ಆದೇಶ

Land Purchase Rules: ಸರ್ಕಾರ ಭೂ ಕಾನೂನಿನ ನಿಯಮಗಳಲ್ಲಿ (Land Purchase Rules) ಮಹತ್ವದ ಬದಲಾವಣೆ ಮಾಡಿದೆ. ಉತ್ತರಖಾಂಡ (UTTARAKHAND)ರಾಜ್ಯದ ನಿವಾಸಿಗಳಲ್ಲದೆ ಹೊರಗಿನವರು ಭೂಮಿ ಖರೀದಿಸುವುದನ್ನು ಸರ್ಕಾರ ನಿಷೇಧ ಹೇರಿದೆ. ಮುಖ್ಯಮಂತ್ರಿ ನಿವಾಸದಲ್ಲಿ ಭೂ ಕಾನೂನಿಗೆ ಸಂಬಂಧಿಸಿದಂತೆ ಸಿಎಂ ಧಾಮಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಸಭೆಯಲ್ಲಿ ಭೂ ಕಾಯಿದೆ(LAND) ರೂಪಿಸಿರುವ ಕುರಿತು ಉತ್ತರಾಖಂಡ ಮುಖ್ಯಮಂತ್ರಿ(UTTARKHAND GOVT) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಉತ್ತರಾಖಂಡದಲ್ಲಿ ಭೂ ಕಾನೂನು ಮತ್ತು ಸ್ಥಳೀಯ ನಿವಾಸ(LAND PURCHASE RULES) ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಧಮಿ ಸರ್ಕಾರವು ಮಹತ್ವದ ಬದಲಾವಣೆ ಮಾಡಿದೆ. ಉತ್ತರಾಖಂಡದಲ್ಲಿ ಹೊರಗಿನವರು ಭೂಮಿ ಖರೀದಿಸುವುದನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ನಿಷೇಧ ಹೇರಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ರವರು ಮುಂದಿನ ಆದೇಶದವರೆಗೆ ಕೃಷಿ ಮತ್ತು ತೋಟಗಾರಿಕೆಯ ಸಲುವಾಗಿ ಉತ್ತರಾಖಂಡದ ಹೊರಗಿನ ವ್ಯಕ್ತಿಗಳಿಗೆ ಭೂಮಿ ಖರೀದಿಸಲು ಅನುವು ಮಾಡಿಕೊಡದಂತೆ ಧಾಮಿ ಆದೇಶಿಸಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಹೊರಗಿನವರು ಭೂಮಿ ಖರೀದಿಸುವ ಬಗ್ಗೆ ಮಧ್ಯಂತರ ನಿಷೇಧವನ್ನು ಹೇರಲಾಗಿದೆ.

Advertisement

ಇದನ್ನು ಓದಿ: Viral Video: ನಡು ರಸ್ತೆಯಲ್ಲಿಯೇ ಯುವಕನೋರ್ವನ ಅಸಭ್ಯ ಕೃತ್ಯ; ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತಬ್ಬಿ ಮುತ್ತಿಟ್ಟ ವೀಡಿಯೋ ವೈರಲ್‌!

ಉತ್ತರ ಪ್ರದೇಶ ಜಮೀನ್ದಾರಿ ಮತ್ತು ಭೂ ವ್ಯವಸ್ಥೆ ಕಾಯಿದೆ 1950 ರ ಸೆಕ್ಷನ್ 154 ರಲ್ಲಿ 2004 ರಲ್ಲಿ ಮಾಡಿದ ತಿದ್ದುಪಡಿಯ ಅನುಸಾರ ಸೆಪ್ಟೆಂಬರ್ 12, 2003 ರ ಮೊದಲು ಉತ್ತರಾಖಂಡ ರಾಜ್ಯದಲ್ಲಿ ಸ್ಥಿರ ಆಸ್ತಿಯನ್ನು ಹೊಂದಿರದ ವ್ಯಕ್ತಿಗಳು, ಕೃಷಿ ಮತ್ತು ತೋಟಗಾರಿಕೆ ಉದ್ದೇಶಕ್ಕಾಗಿ ಜಮೀನು ಖರೀದಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿ ನೀಡಲು ಅವಕಾಶ ಪಡೆದಿದ್ದಾರೆ.

Advertisement
Advertisement