R Ashok: ಮುಡಾ ಹಗರಣ ವಿರುದ್ಧದ BJPಯ ಮೈಸೂರು ಪಾದಯಾತ್ರೆಗೆ ಕುಮಾರಸ್ವಾಮಿ ವಿರೋಧ- ಆರ್ ಅಶೋಕ್ ಹೇಳಿದ್ದಿಷ್ಟು !!
R Ashok: ಮುಡಾ ಹಗರಣದಲ್ಲಿ(Muda Scam) ಸಿಎಂ ಸಿದ್ದರಾಮಯ್ಯ(CM Siddaramaiah) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ, ಇದನ್ನು ವಿರೋಧಿಸಿದ H D ಕುಮಾರಸ್ವಾಮಿ(H D kumarswamy) ಅವರು, ಈ ಪಾದಯಾತ್ರೆಗೆ ಜೆಡಿಎಸ್(JDs) ಬೆಂಬಲ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಇದಕ್ಕೀಗ ಪ್ರತಿಪಕ್ಷ ನಾಯಕ, ಬಿಜೆಪಿ ಲೀಡರ್ ಆರ್ ಅಶೋಕ್(R Ashok) ಅವರು ಪ್ರತಿಕ್ರಿಯಿಸಿದ್ದಾರೆ.
ಆರ್ ಅಶೋಕ್ ಹೇಳಿದ್ದೇನು?
ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿರುವದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಆರ್. ಅಶೋಕ್ ಹೇಳಿದರು. ಬಳಿಕ ಮಾತನಾಡಿದ ಅವರು ಕುಮಾರಸ್ವಾಮಿ 'ಕರೆ ಮಾಡಿದ್ರು, ಮತ್ತೆ ಮಾತನಾಡುತ್ತೇನೆ, ನಮ್ಮ ಉದ್ದೇಶ ಈ ಬಿಸಿಯಲ್ಲೇ ಹೋರಾಟ ಆಗಬೇಕು ಅನ್ನೋದು, ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ, ಸಂವಿಧಾನ ಕಾಪಾಡೋ ಸ್ಥಾನದಲ್ಲಿ ಸಿಎಂ ಇದಾರೆ, ನಾವು ಅನ್ಯಾಯ ಮಾಡಲ್ಲ ಅಂತೆಲ್ಲಾ ಪ್ರಮಾಣ ವಚನ ಸ್ವೀಕರಿಸ್ತಾರೆ, ಆದರೆ ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣ ಲೂಟಿ ಮಾಡಿದ್ದಾರೆ ಸದನದ ಒಳಗೂ ಎಲ್ಲರ ಜೊತೆಗೂ ಮಾತನಾಡಿ ಹೋರಾಟ ಆಗಿದೆ, ಕಾಂಗ್ರೆಸ್ ನವರು ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ ಆಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಅಂದಿದ್ದಾರೆ, ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡ್ತೀವಿ, ಜೆಡಿಎಸ್ ಕೂಡ ಎನ್ ಡಿಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು, ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ ನಿರ್ಧಾರಕ್ಕೆ ಬರ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ ಜೊತೆಗೆ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಆದರೆ ಯಾವಾಗ ಪಾದಯಾತ್ರೆ ಆಗುತ್ತೆ ಅನ್ನೋದಷ್ಟೇ ಈಗಿರುವುದು. ಅದು ದಲಿತರೊಬ್ಬರ ಭೂಮಿ, ಆತ ಸತ್ತು 25 ವರ್ಷಗಳಾಗಿದೆ. ಅದು ಅಲ್ಲದೇ ಆತ ಸತ್ತು ಹೋದ. ಬದುಕಿದ್ದರೆ ಅದು ಆತನ ಸ್ವಯಾರ್ಜಿತ ಆಸ್ತಿ. ಆದರೆ, ಅದು ಆತನ ಹೆಂಡತಿ ಹೆಸರಿಗೆ ಬಂದು ಪಿತ್ರಾರ್ಜಿತ ಆಸ್ತಿಯಾಗಿದೆ.ಅದನ್ನ ಮಾರಾಟ ಮಾಡಲು ಹೆಂಡತಿ, ಮಕ್ಕಳು ಎಲ್ಲರ ಒಪ್ಪಿಗೆ ಬೇಕು. ಪಹಣಿ ಯಾವುದೇ ದಾಖಲೆ ಆಗಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನಿಂಗ ಒಬ್ಬ ಅನಕ್ಷರಸ್ಥ, ಹೀಗಿರೋವಾಗ ಡೀನೋಟಿಫಿಕೇಶನ್ ಹೇಗೆ ಆಗಿದೆ. ಕೃಷಿ ಭೂಮಿಯಿಂದ ಅದು ಭೂ ಪರಿವರ್ತನೆ ಕೂಡ ಆಗಿದೆ. 2002-03ರಲ್ಲಿ ಮೂಡಾದಿಂದ ಲೇಔಟ್ ಅಪ್ರೂವ್ ಆಗಿ ಅಲ್ಲಿ ಲೇಔಟ್ ಆಗಿದೆ. 12 ಸೈಟ್ ಸಿದ್ದರಾಮಯ್ಯ ಪತ್ನಿಯ ಹೆಸರಿನಲ್ಲಿ ರಿಜಿಸ್ಟರ್ ಕೂಡ ಆಗಿದೆ. ದಲಿತರ ಜಮೀನನ್ನ ಇವರು ಒಳಗೆ ಹಾಕಿದ್ದಾರೆ. ಜಮೀನು ಕಬಳಿಕೆ ಆಗಿದ್ದರೆ ಸರ್ಕಾರ ಅದನ್ನ ರಕ್ಷಣೆ ಮಾಡಬೇಕು. ನಾವು ಪಾದಯಾತ್ರೆ ನಿರ್ಧಾರ ಮಾಡಿದಾಗ ವೈನಾಡ್ ಅಥವಾ ಬೇರೆ ಪ್ರಕೃತಿ ವಿಕೋಪ ಆಗಿರಲಿಲ್ಲ. ಈಗ ಅದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡ್ತೇವೆ ಎಂದರು.
ಕುಮಾರಸ್ವಾಮಿ ಹೇಳಿದ್ದೇನು?
ಪಾದಯಾತ್ರೆ ವಿಚಾರದಲ್ಲಿ ನಮ್ಮನ್ನು (ಜೆಡಿಎಸ್) ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ. ಹೀಗಾಗಿ ಇದರಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ. ನಾವು ನೈತಿಕ ಬೆಂಬಲವೂ ಕೊಡಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು? ಬೆಂಗಳೂರು ಮೈಸೂರು ವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸದಿದ್ದರೆ ಹೇಗೆ? ನನ್ನ ಮನಸ್ಸಿಗೆ ನೋವಾಗಿದೆ, ಯಾಕೆ ಬೆಂಬಲ ಕೊಡಬೇಕು? ಹಿಂದೆ ಸರಿದಿದ್ದೇವೆ ಎಂದು ಹೇಳಿದ್ದರು.