ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC ಸಾರಿಗೆ ಇಲಾಖೆಯಿಂದ ಶಾಕಿಂಗ್ ನ್ಯೂಸ್! KSRTC ಈ ಸೇವೆಯಲ್ಲಿ ವಿಫಲ!

KSRTC: ಕೆಎಸ್ಆರ್‌ಟಿಸಿ ಸಾರಿಗೆ ವ್ಯವಸ್ಥೆ ಪಾರ್ಸೆಲ್ ಮತ್ತು ಕೊರಿಯರ್ ಕ್ಷೇತ್ರದಲ್ಲಿ ಅಧಿಕ ಆದಾಯ ಪಡೆಯುತ್ತದೆ ಎಂದು ಇಟ್ಟುಕೊಂಡ ನಿರೀಕ್ಷೆ ಸುಳ್ಳಾಗಿದೆ.
10:18 AM Jun 16, 2024 IST | ಕಾವ್ಯ ವಾಣಿ
UpdateAt: 10:18 AM Jun 16, 2024 IST
Advertisement

KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಾರಿಗೆ ಇಲಾಖೆಯು ಜನರ ಹಿತದೃಷ್ಟಿಯಿಂದ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ಕೆಎಸ್ಆರ್‌ಟಿಸಿ ಇಲಾಖೆಯಿಂದ ಪಾರ್ಸೆಲ್ ಹಾಗೂ ಕೊರಿಯರ್ ಸೇವೆಯನ್ನು ಕೂಡ ಆರಂಭ ಮಾಡಿರುವ ವಿಚಾರ ಈಗಾಗಲೇ ನಮಗೆ ತಿಳಿದಿದೆ. ಆದರೆ ಕೆಎಸ್ಆರ್‌ಟಿಸಿ ಸಾರಿಗೆ ವ್ಯವಸ್ಥೆ ಪಾರ್ಸೆಲ್ ಮತ್ತು ಕೊರಿಯರ್ ಕ್ಷೇತ್ರದಲ್ಲಿ ಅಧಿಕ ಆದಾಯ ಪಡೆಯುತ್ತದೆ ಎಂದು ಇಟ್ಟುಕೊಂಡ ನಿರೀಕ್ಷೆ ಸುಳ್ಳಾಗಿದೆ.

Advertisement

ಮೊಟ್ಟ ಮೊದಲು ಆಂಧ್ರಪ್ರದೇಶದಲ್ಲಿ ಕಾರ್ಗೋ ಸೇವೆ ಜಾರಿಗೆ ಬಂದಿದ್ದು ಆ ಸಂದರ್ಭದಲ್ಲಿ ಆಂಧ್ರಪ್ರದೇಶ 150 ಕೋಟಿ ರೂಪಾಯಿ ಆದಾಯ ಪಡೆದಿದೆ. ಈ ಹಿನ್ನೆಲೆ ಸರಕಾರವು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಧೀನದಲ್ಲಿ ಕಾರ್ಪೋರೇಷನ್ ಬಸ್ ಅನ್ನು ಬಳಸಿಕೊಂಡು ಸಾರಿಗೆ ಇಲಾಖೆಯು 2021ರಲ್ಲಿ KSRTC ಅಧೀನದಲ್ಲಿ ನಮ್ಮ ಕಾರ್ಗೋ ಸೇವೆಗಳನ್ನು ಪ್ರಾರಂಭ ಮಾಡಲಾಗಿದೆ. ಇದನ್ನು ಜಾರಿಗೆ ತಂದ ಆರಂಭದಲ್ಲಿ ಅತ್ಯುತ್ತಮ ಪ್ರಚಾರ ಪಡೆದಿತ್ತು. 2021ರಲ್ಲಿಯೇ ಪಾರ್ಸೆಲ್ ಹಾಗೂ ಕೊರಿಯರ್ ಸರ್ವಿಸ್ ನಿಂದ 10ಕೋಟಿ ರೂಪಾಯಿ ಆದಾಯ ಪಡೆದಿತ್ತು. ಅಂತೆಯೇ 2025ರ ಹೊತ್ತಿಗೆ 100 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುವ ನಿರೀಕ್ಷೆ ಇತ್ತು. ಆದರೆ ಖಾಸಗಿಯಾಗಿ ಅನೇಕ ಕೊರಿಯರ್ ಹಾಗೂ ಪಾರ್ಸೆಲ್ ನೀಡುವ ಸಂಸ್ಥೆ ತಲೆ ಎತ್ತುತ್ತಿದ್ದು, ಅವರು ನೀಡುವ ಅತ್ಯಧಿಕ ಸೇವಾ ಸೌಲಭ್ಯ ಸರಕಾರದ KSRTC ನಮ್ಮ ಕಾರ್ಗೋ ಸೇವೆಯಲ್ಲಿ ಲಭ್ಯ ಇರದೇ ಇದ್ದು, ಜೊತೆಗೆ ಸರಕುಗಳು ಲೋಡರ್ ಹಾಗೂ ಅನ್ ಲೋಡರ್ ವ್ಯವಸ್ಥೆ ಸರಿಯಿಲ್ಲದೇ ಇರುವ ಕಾರಣ ಜನರಿಗೆ ಕಾರ್ಗೋ ಸೇವೆ ಮೇಲೆ ಭರವಸೆ ದೂರದ ಮಾತಾಗಿದೆ.

ಒಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಅತ್ಯಾಧುನಿಕ ಸೇವೆಯೊಂದಿಗೆ,  ಕಾರ್ಗೋ ಸೇವೆಗೆ ಪೈಪೋಟಿ ನೀಡುತ್ತಲಿರುವ ಕಾರಣ 2025ರಲ್ಲಿ 100 ಕೋಟಿ ಆದಾಯ ಗಳಿಕೆ ಮಾಡುವ ಗುರಿ ಹೊಂದಿದ್ದ KSRTC ಕಾರ್ಗೋ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಮಾಡಲು ವಿಫಲವಾಗುತ್ತಿದೆ.

Advertisement

Advertisement
Advertisement