For the best experience, open
https://m.hosakannada.com
on your mobile browser.
Advertisement

KSRTC: ಸರ್ಕಾರಿ ಬಸ್ ಚಾಲಕರಿಗೆ ಹೊಸ ನಿಯಮ ಜಾರಿ!

KSRTC: ರಸ್ತೆ ಅಪಘಾತವನ್ನು ತಡೆಯಲು ಲಕ್ಕೋ ಸರ್ಕಾರ ಪ್ರಯತ್ನಿಸುತ್ತಿದ್ದು, ಅದೇ ರೀತಿ ಮೊದಲ ಹಂತದಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ತಂದಿರುವ ಈ ಹೊಸ ಕ್ರಮ ಏನೆಂದರೆ ಡ್ಯಾಶ್‌ಬೋರ್ಡ್‌ನಲ್ಲಿ ಕುಟುಂಬದ ಫೋಟೋ ಇಡಲು ಯುಪಿ ಬಸ್ ಚಾಲಕರಿಗೆ ತಿಳಿಸಲಾಗಿದೆ.
11:32 AM Jun 05, 2024 IST | ಸುದರ್ಶನ್
UpdateAt: 11:32 AM Jun 05, 2024 IST
ksrtc  ಸರ್ಕಾರಿ ಬಸ್ ಚಾಲಕರಿಗೆ ಹೊಸ ನಿಯಮ ಜಾರಿ
Advertisement

KSRTC: ರಸ್ತೆ ಅಪಘಾತ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಪರಿಚಯಿಸುತ್ತಿವೆ. ಇದೀಗ ಉತ್ತರ ಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಹೌದು, ರಸ್ತೆ ಅಪಘಾತವನ್ನು ತಡೆಯಲು ಲಕ್ಕೋ ಸರ್ಕಾರ ಪ್ರಯತ್ನಿಸುತ್ತಿದ್ದು, ಅದೇ ರೀತಿ ಮೊದಲ ಹಂತದಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ತಂದಿರುವ ಈ ಹೊಸ ಕ್ರಮ ಏನೆಂದರೆ ಡ್ಯಾಶ್‌ಬೋರ್ಡ್‌ನಲ್ಲಿ ಕುಟುಂಬದ ಫೋಟೋ ಇಡಲು ಯುಪಿ ಬಸ್ ಚಾಲಕರಿಗೆ ತಿಳಿಸಲಾಗಿದೆ.

Advertisement

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಗ್ರಾಚ್ಯುಟಿ ಹೆಚ್ಚಳ!

ಹೌದು, ಬಸ್ (KSRTC) ಚಾಲಕರು ತಮ್ಮ ಬಸ್‌ ನ ಡ್ಯಾಶ್ ಬೋರ್ಡ್ ಮುಂಭಾಗದಲ್ಲಿ ತಮ್ಮ ಕುಟುಂಬದ ಫೋಟೋವನ್ನು ಕಡ್ಡಾಯವಾಗಿ ಅಂಟಿಸಬೇಕು ಎಂಬ ನಿಯಮವಿದೆ. ಆ ಪ್ರಕಾರ ಫ್ಯಾಮಿಲಿ ಫೋಟೋ ಅಂಟಿಸಿದರೆ ಅದೊಂದು ರೀತಿಯ ಭಾವನಾತ್ಮಕ ಸಂಬಂಧ, ಪ್ರಯಾಣದ ವೇಳೆ ಎಚ್ಚರಿಕೆ ವಹಿಸುತ್ತಾರೆ ಎಂಬ ನಿಲುವು ಕಾಣಬಹುದು. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಇಲಾಖೆಯ ಆಯುಕ್ತ ಚಂದ್ರಭೂಷಣ್ ಸಿಂಗ್ ಅವರು ಸರ್ಕಾರದ ಪರವಾಗಿ ಅಧಿಕೃತ ಆದೇಶ ನೀಡಿದ್ದಾರೆ. ಈ ಆದೇಶದಲ್ಲಿ ಸರ್ಕಾರಿ ಸಾರಿಗೆ ವಾಹನ ಚಾಲಕರು ಮಾತ್ರವಲ್ಲದೆ ಖಾಸಗಿ ವಾಹನ ಮತ್ತು ಬಸ್‌ ಚಾಲಕರು ಕೂಡ ತಮ್ಮ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಕುಟುಂಬದ ಫೋಟೋವನ್ನು ಅಂಟಿಸಲು ತಿಳಿಸಲಾಗಿದೆ. ಒಂದು ವೇಳೆ ಈ ನಿಯಮ ಯಶಸ್ವಿಯಾದಲ್ಲಿ ಬೇರೆ ರಾಜ್ಯಗಳಲ್ಲೂ ಇದೇ ನಿಯಮ ಜಾರಿಗೆ ಬರಲಿದೆ.

Advertisement

ಹೌದು, ಉತ್ತರ ಪ್ರದೇಶ ಸರ್ಕಾರ ಈ ಆದೇಶ ಹೊರಡಿಸಿದ್ದು, ಅಲ್ಲಿನ ಜನರ ಅಪಘಾತ ಪ್ರಮಾಣ ಕಡಿಮೆ ಮಾಡಲು ಬೇರೆ ರಾಜ್ಯಗಳಿಗೆ ಮಾರ್ಗದರ್ಶಕವಾಗಿದೆ. ಸದ್ಯ ಇದೇ ಮಾದರಿಯನ್ನು ಆಂಧ್ರಪ್ರದೇಶದಲ್ಲಿ ಪ್ರಯೋಗಿಸಲಾಗಿದ್ದು, ಅಲ್ಲಿ ಸಾರಿಗೆ ಬಸ್ ಅಪಘಾತಗಳ ಪ್ರಮಾಣ ಕಡಿಮೆ ಇರುವುದರಿಂದ ಉತ್ತರಪ್ರದೇಶವೂ ಇದೇ ಮಾದರಿಯನ್ನು ಜಾರಿಗೆ ತರುತ್ತಿದ್ದು, ಮುಂದೆ ಕರ್ನಾಟಕದಲ್ಲೂ ಇದೇ ಮಾದರಿಯನ್ನು ಜಾರಿಗೆ ತರಲಾಗುವುದು.

ಇದನ್ನೂ ಓದಿ: iPhone ಕೊಂಡುಕೊಳ್ಳುವವರಿಗೆ ಗುಡ್ ನ್ಯೂಸ್! ಈ ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ

Advertisement
Advertisement
Advertisement