For the best experience, open
https://m.hosakannada.com
on your mobile browser.
Advertisement

KSRTCಗೆ ಹೈಕೋರ್ಟ್ ನಲ್ಲಿ ಮತ್ತೊಂದು ಭರ್ಜರಿ ಗೆಲುವು - ಇದು ರಾಜ್ಯವೇ ಖುಷಿ ಪಡುವ ಸುದ್ದಿ !!

11:48 AM Dec 16, 2023 IST | ಅಶ್ವಿನಿ ಹೆಬ್ಬಾರ್
UpdateAt: 11:48 AM Dec 16, 2023 IST
ksrtcಗೆ ಹೈಕೋರ್ಟ್ ನಲ್ಲಿ ಮತ್ತೊಂದು ಭರ್ಜರಿ ಗೆಲುವು   ಇದು ರಾಜ್ಯವೇ ಖುಷಿ ಪಡುವ ಸುದ್ದಿ
Image source: Blog.ipleaders.in
Advertisement

KSRTC Logo : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆ‌ಎಸ್ಆರ್‌ಟಿಸಿ ಹೆಸರು‌ ಬಳಕೆಗೆ ಇದ್ದ ಕಾನೂನು ಅಡಚಣೆ (KSRTC Logo) ಇದೀಗ ಕೊನೆಗೊಂಡಿದೆ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ(KSRTC)ಹೆಸರನ್ನು ಬಳಸಲು ಇನ್ನು ಮುಂದೆ ಯಾವುದೇ ಸಮಸ್ಯೆಯಿಲ್ಲ. ಈ ವಿಚಾರದ ಕುರಿತಾಗಿ ಕೇರಳ RTC ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌(Madras High Court) ವಜಾ ಮಾಡಿದೆ.

Advertisement

KSRTC

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆ ಎಸ್ ಆರ್ ಟಿ ಸಿ’ ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ನೀಡಲು ಅರ್ಜಿ ಸಲ್ಲಿಸಿತ್ತು. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್‌ನಿಂದ KSRTC ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಯ ಸಲುವಾಗಿ ಕಾಪಿ ರೈಟ್‌ ಅನ್ನು ಪಡೆದುಕೊಂಡಿದೆ. ಹೀಗಾಗಿ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (Intellectual Property Appellate Board) ಮುಂದೆ ಪ್ರಶ್ನೆ ಮಾಡಿತ್ತು.

Advertisement

2021ರಲ್ಲಿ ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಹೆಸರು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೆಂಡ್‌ ಮಾರ್ಕ್‌ ರಿಜಿಸ್ಟ್ರಾರ್‌ನಿಂದ ಆದೇಶ ಹೊರಡಿಸಿತ್ತು. ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ ಮಾರ್ಕ್‌ ಕೇರಳ ಪಾಲಾಗಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೋರ್ಟ್‌ ಮೆಟ್ಟಿಲೇರಿತ್ತು.ಈ ವಿಚಾರದ ಕುರಿತಾಗಿ ಕೇರಳ RTC ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌(Madras High Court) ವಜಾ ಮಾಡಿದ್ದು, ಈ ಮೂಲಕ KSRTC ಗೆ ಗೆಲುವು ಸಿಕ್ಕಿದೆ. ಕಳೆದ 27 ವರ್ಷಗಳಿಂದಲೂ ಕೇರಳ ಹಾಗೂ ಕರ್ನಾಟಕದ ನಡುವೆ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್‌ನ ಕಾನೂನು ಹೋರಾಟ ನಡೆಯುತ್ತಿದೆ. ಇದೀಗ ಎರಡು ರಾಜ್ಯಗಳ ಟ್ರೇಡ್‌ ಮಾರ್ಕ್‌ ಹೋರಾಟದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ.

ಇದನ್ನು ಓದಿ: Dhiraj Sahu: IT ದಾಳಿಯಲ್ಲಿ ಪತ್ತೆಯಾದ 351 ಕೋಟಿಯಲ್ಲಿ 1ರೂ ಕೂಡ ನನ್ನದಲ್ಲ, ಎಲ್ಲಾ ಅವರದ್ದು! ಸ್ಫೋಟಕ ಸತ್ಯ ಹೊರಹಾಕಿದ ಕಾಂಗ್ರೆಸ್ ಸಂಸದ!

Advertisement
Advertisement
Advertisement