KSRTC Driver: ಡ್ರೈವರ್‌ಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್‌ಆರ್‌ಟಿಸಿ
KSRTC Driver: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಡ್ರೈವರ್‌ಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಹೌದು ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದಲ್ಲಿ ವಿಶ್ರಾಂತಿ ಕಡ್ಡಾಯ ಎಂದು ನಿಯಮ ಮಾಡಿದೆ. ಹಾಗಾಗಿ ಡ್ರೈವರ್‌ಗಳಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ದೊರಕಲಿದೆ. ಹಾಗಾಗಿ ಇನ್ಮುಂದೆ 8 ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡುವಂತಿಲ್ಲ ಎಂಬ ನಿಯಮ ಮಾಡಲಾಗಿದೆ.
ಇದನ್ನೂ ಓದಿ: Parliment Election : ರಾಜ್ಯದಲ್ಲಿ ಕಾಂಗ್ರೆಸ್'ಗೆ ಎರಡಂಕಿ ಫಲಿತಾಂಶ ಪಕ್ಕಾ?! ಕಾರಣ ಹೀಗಿವೆ
ಆಕ್ಸಿಡೆಂಟ್ ಪ್ರಕರಣಗಳು ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಹೆಚ್ಚು ನಡೆಯುತ್ತಿದೆ ಎಂಬ ಕಾರಣದಿಂದ ಇದಕ್ಕೆ ಕಾರಣ ಪತ್ತೆ ಹಚ್ಚಲು ಸಮಿತಿಯನ್ನು ರಚನೆ ಮಾಡಲಾಗಿದೆ. ಆಕ್ಸಿಡೆಂಟ್‌ನ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಿದ ಸಮಿತಿ ವಿಶ್ರಾಂತಿ ನೀಡದಿರೋದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದೆ. ಹಾಗಾಗಿ ನಿದ್ದೆಗೆಟ್ಟು ಡ್ರೈವರ್‌ಗಳು ಬಸ್ ಚಲಾಯಿಸಲು ಸಾಧ್ಯವಾಗದೆ ಆಕ್ಸಿಡೆಂಟ್ ಹೆಚ್ಚಳ ಆಗುವುದರಿಂದ ನಿಗಮ ಸಮಿತಿಗೆ ರಿಪೋರ್ಟ್ ನೀಡಿದೆ.
ಇದನ್ನೂ ಓದಿ: Man entered the Ladies Hostel: ಹುಡುಗಿ ವೇಷದಲ್ಲಿ ಲೇಡಿಸ್ ಹಾಸ್ಟೆಲ್‌ಗೆ ನುಗ್ಗಿದ ವಿದ್ಯಾರ್ಥಿ
ಆದೇಶದಲ್ಲಿರುವ ಪ್ರಕಾರ, ಕೆಎಸ್‌ಆರ್‌ಟಿಸಿ ಡ್ರೈವರ್‌ಗಳಿಗೆ ವಿಶ್ರಾಂತಿ ಕಡ್ಡಾಯ, ಇಂದಿನಿಂದ ಡಬಲ್ ಡ್ಯೂಟಿ ಮಾಡಿಸುವಂತಿಲ್ಲ, 8ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ, 8 ಗಂಟೆ ಮತ್ತು ರಾತ್ರಿ ವೇಳೆಯಲ್ಲಿ ಹೆಚ್ಚು ಡ್ಯೂಟಿ ಡ್ರೈವರ್‌ಗಳಿಗೆ ನಿದ್ರೆ ಮತ್ತು ವಿಶ್ರಾಂತಿ ಮಾಡಲು ನಾಲ್ಕೈದು ಗಂಟೆಗಳ ಅವಕಾಶ ನೀಡುವುದರಿಂದ ಅಪಘಾತ ಕಡಿಮೆಯಾಗಲಿದೆ. ಈ ಮೂಲಕ ನೂರಾರು ಅಮಾಯಕರ ಪ್ರಾಣ ಉಳಿಸಲು ಸಾಧ್ಯ ಎಂದು ಆದೇಶದಲ್ಲಿ ಬರೆಯಲಾಗಿದೆ.