ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC: ಫ್ರೀ ಪ್ರಯಾಣ ಆಯ್ತು, ಇನ್ನು KSRTC ಬಸ್‌ ಅವಘಡ ಸಂಭವಿಸಿದರೆ ಪ್ರಯಾಣಿಕರಿಗೆ ಸಿಗಲಿದೆ ಲಕ್ಷ ಲಕ್ಷ ಪರಿಹಾರ!!!

12:40 PM Dec 27, 2023 IST | ಅಶ್ವಿನಿ ಹೆಬ್ಬಾರ್
UpdateAt: 12:40 PM Dec 27, 2023 IST
Image source: Abhi bus
Advertisement

KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಅಪಘಾತಕ್ಕೀಡಾದ (Accident)ಸಂದರ್ಭ ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ನಿಧನರಾದರೆ (Death)ಮೃತಪಟ್ಟ ಪ್ರಯಾಣಿಕರ ಅವಲಂಬಿತರಿಗೆ ನೆರವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ಹೀಗಾಗಿ, ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ರೂ.1,00,000/-(ರೂ ಮೂರು ಲಕ್ಷ ಮಾತ್ರ) ಪರಿಹಾರ ಒದಗಿಸಲಾಗುತ್ತಿದೆ.

Advertisement

ಈ ಪರಿಹಾರದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗದ ಈ ಹಿನ್ನೆಲೆಯಲ್ಲಿ 31.10.2023 ರಂದು 29ನೇ ಅಪಘಾತ ಸಂಹಾರ ನಿಧಿ ಸಭೆ ನಡೆದಿದ್ದು, ಈ ಸಂದರ್ಭ ಚರ್ಚಿಸಿ, ಪರಿಹಾರ ಮೊತ್ತವನ್ನು ರೂ.1,00,000/-(ರೂ.ಮೂರು ಲಕ್ಷ ಮಾತ್ರ) ದಿಂದ ರೂ.10,00,000/-(ರೂ.ಹತ್ತು ಲಕ್ಷ ಮಾತ್ರ) ಗಳಿಗೆ ಹೆಚ್ಚಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Advertisement

ಇದನ್ನು ಓದಿ: Mangaluru: ಮಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ಬಲಿ!

ಪರಿಷ್ಕೃತ ಪರಿಹಾರ ಮೊತ್ತ ರೂ.10,00,000/-ಗಳಲ್ಲಿ (ರೂ. ಹತ್ತು ಲಕ್ಷ ಮಾತ್ರ) ತಕ್ಷಣದ ಪರಿಹಾರವಾಗಿ ರೂ.25,000/-ವನ್ನು (ರೂ.ಇಪ್ಪತ್ತೈದು ಸಾವಿರ ಮಾತ್ರ) ಕ.ರಾ.ರ.ಸಾ.ನಿಗಮದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. 08.12.1998 ರ ಅನುಸಾರ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿಸಿ, ಇದಾದ ಬಳಿಕ, ಅಪನಿ ಟ್ರಸ್ಟ್‌ನಿಂದ ರೂ.25,000/-ವನ್ನು (ಡೊ.ಇಪ್ಪತ್ತೈದು ಸಾವಿರ ಮಾತ್ರ) ಸಂಬಂಧಪಟ್ಟ ವಿಭಾಗಗಳಿಗೆ ಮರುಪಾವತಿಸಿ, ಬಾಕಿ ಮೊತ್ತ ರೂ.9,75,000/-(ರೂ. ಒಂಭತ್ತು ಲಕ್ಷದ ಎಪ್ಪತ್ತೈದು ಸಾವಿರ ಮಾತ್ರ) ಗಳನ್ನು ಮೃತಪಟ್ಟ ವಾರಸುದಾರರಿಗೆ ಪಾವತಿಸಲು ತಿಳಿಸಲಾಗಿದೆ.
ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು ರೂ.10.00 ಲಕ್ಷ (ರೂ. ಮತ್ತು ಲಕ್ಷ ಮಾತ್ರ) ಹೆಚ್ಚಿಸಿರುವ ಹಿನ್ನೆಲೆ ಕಾಲ ಕ್ರಮೇಣ ಅಪಘಾತ ಪರಿಹಾರ ನಿಧಿಯ ಒಟ್ಟಾರೆ ಖರ್ಚು ಆದಾಯಕ್ಕಿಂತ ಅಧಿಕವಾಗುವ ಹಿನ್ನೆಲೆಯಲ್ಲಿ ವಂತಿಕೆ ಸಂಗ್ರಹಣೆಯನ್ನು ಹೆಚ್ಚಿಸಲು ಸಹ ಸಭೆಯು ಅನುಮೋದನೆ ನೀಡಿದೆ. ಈ ಸುತ್ತೋಲೆಯು 01.01.2014 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

Advertisement
Advertisement