For the best experience, open
https://m.hosakannada.com
on your mobile browser.
Advertisement

Tour Package: ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದೋರಿಗೆ ಸಿಹಿ ಸುದ್ದಿ- ಇಲ್ಲಿದೆ ನೋಡಿ ಭರ್ಜರಿ ಪ್ಯಾಕೇಜ್ !! ಎಲ್ಲಿಗೆಲ್ಲಾ ಹೋಗ್ಬೋದು ಗೊತ್ತಾ?

06:02 PM Dec 12, 2023 IST | ಅಶ್ವಿನಿ ಹೆಬ್ಬಾರ್
UpdateAt: 06:02 PM Dec 12, 2023 IST
tour package  ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದೋರಿಗೆ ಸಿಹಿ ಸುದ್ದಿ  ಇಲ್ಲಿದೆ ನೋಡಿ ಭರ್ಜರಿ ಪ್ಯಾಕೇಜ್    ಎಲ್ಲಿಗೆಲ್ಲಾ ಹೋಗ್ಬೋದು ಗೊತ್ತಾ

Tour packages: ಡಿಸೆಂಬರ್ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ತಿಂಗಳ ಕೊನೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆ ಸಾಲು ಸಾಲು ರಜೆಗಳಿರುವ ಹಿನ್ನೆಲೆ ಕ್ರಿಸ್ಮಸ್ ವೇಳೆ ಪ್ರವಾಸ ಪ್ರಿಯರಿಗೆ (Tour packages)KSRTC ಸಿಹಿಸುದ್ದಿಯೊಂದನ್ನು ನೀಡಿದೆ.

Advertisement

ಬಜೆಟ್ ಟೂರಿಸಂ ಸೆಲ್ ಈ ಹಬ್ಬದ ಸೀಸನ್‌ಗಾಗಿ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದು, ಇದನ್ನು ವಿಶೇಷವಾಗಿ 'ಜಂಗಲ್ ಬೆಲ್ಸ್' ಎಂದು ಕರೆಯಲಾಗಿದೆ. ಈ ಪ್ರವಾಸ ಪ್ಯಾಕೇಜ್‌ ಅನ್ನು ಕೇರಳದ ಕೆಎಸ್‌ಆರ್‌ಟಿಸಿ ಘೋಷಣೆ ಮಾಡಿದೆ. ಅದರ ಜೊತೆಗೆ ಜಾತ್ರೆಗಳು, ವಿಶೇಷ ಆಚರಣೆಯ ನಡುವೆ ಕರ್ನಾಟಕದ ಕೆಎಸ್‌ಆರ್‌ಟಿಸಿಯು ಕೂಡ ಪ್ರವಾಸಿಗರ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ಗವಿ, ಪರುಂತುಂಪಾರ, ವಾಗಮೋನ್, ವಯನಾಡ್, ಮುನ್ನಾರ್, ಅತಿರಪಲ್ಲಿ ಮತ್ತು ಮಲಕಪ್ಪರ ಸೇರಿದಂತೆ ಕೇರಳದ ಪ್ರಮುಖ ಪ್ರವಾಸಿ ತಾಣಗಳನ್ನು ಭೇಟಿ ಮಾಡಬಹುದು.

ಇದನ್ನು ಓದಿ: Mohith panday : ಅಯೋಧ್ಯೆ ರಾಮ ಮಂದಿರದ ಅರ್ಚಕನಾಗಿ ಆಯ್ಕೆಯೋ ವಿದ್ಯಾರ್ಥಿಯ ಅಶ್ಲೀಲ ವಿಡಿಯೋ ವೈರಲ್ !!

Advertisement

ಪ್ರವಾಸಿ ತಾಣಗಳು ಹಾಗೂ ದಿನಾಂಕಗಳ ವಿವರ ಹೀಗಿದೆ:
* ಡಿಸೆಂಬರ್ 3, 24, ಮತ್ತು 31 ರಂದು ಒಂದು ದಿನದ ಪ್ರವಾಸ- ಗವಿ ಮತ್ತು ಪರುತುಂಪಾರ
* ಡಿಸೆಂಬರ್ 27 & 28- ವಾಗಮನ್ ಎರಡು ದಿನಗಳ ಪ್ರವಾಸ
* ಡಿಸೆಂಬರ್ 30, 31, ಜನವರಿ 1 & 2 (2024)- ವಯನಾಡ್ ಪ್ರವಾಸ
* ಡಿಸೆಂಬರ್ 23, 24 ಮತ್ತು 25 - ಕ್ರಿಸ್ಮಸ್ ವಿಶೇಷ ಸಂಪೂರ್ಣ ಮುನ್ನಾರ್ ಯಾತ್ರೆ
* ಡಿಸೆಂಬರ್ 9, 17, 24 ಮತ್ತು 31 - ಒಂದು ದಿನದ ಪ್ರವಾಸ- ಕಪ್ಪುಕ್ಕಾಡು ಮತ್ತು ಪೊನ್ಮುಡಿ
* ಡಿಸೆಂಬರ್ 27, 30 ಮತ್ತು ಜನವರಿ 2 (2024)- ತಿರುವೈರಾಣಿಕುಲಂ ಭಕ್ತಿ ತೀರ್ಥಯಾತ್ರೆ
* ಡಿಸೆಂಬರ್ 28: ವಂಡರ್ಲಾ ವಿಶೇಷ ಯಾತ್ರೆ
* ಡಿಸೆಂಬರ್ 30 ಮತ್ತು 31- ಅತಿರಪಳ್ಳಿ, ವಜಚಲ್ ಮತ್ತು ಮಲಕಪ್ಪಾರಕ್ಕೆ ಹೊಸ ವರ್ಷದ ಪ್ರವಾಸ

Advertisement
Advertisement