For the best experience, open
https://m.hosakannada.com
on your mobile browser.
Advertisement

KSE Exam 2023: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಸ್ಥಳಾಂತರ - ಎಲ್ಲಿಂದ ಎಲ್ಲಿಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

02:51 PM Dec 14, 2023 IST | ಅಶ್ವಿನಿ ಹೆಬ್ಬಾರ್
UpdateAt: 02:51 PM Dec 14, 2023 IST
kse exam 2023  ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಸ್ಥಳಾಂತರ   ಎಲ್ಲಿಂದ ಎಲ್ಲಿಗೆ  ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Advertisement

KSE Exam 2023:ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಗೆ (KSE Exam 2023)ಸಂಬಂಧಿಸಿದ ಸರಣಿ ಅಕ್ರಮಗಳು ವರದಿಯಾದ ಬೆನ್ನಲ್ಲೇ ಕಲಬುರಗಿಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಂದಿದೆ ಎನ್ನಲಾಗಿದೆ. ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ ಕಲಬುರಗಿಯ ಬದಲಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೆಇಎ (KEA)ತಿಳಿಸಿದೆ. ಕಲಬುರಗಿ ಮಾತ್ರವಲ್ಲದೆ, ವಿಜಯಪುರ ಜಿಲ್ಲೆಯಲ್ಲಿ ನಡೆಯಬೇಕಿರುವ ಪರೀಕ್ಷೆಗಳನ್ನೂ ಸ್ಥಳಾಂತರಿಸಲಾಗಿದೆ.

Advertisement

ಡಿಸೆಂಬರ್ 31 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಜನವರಿ 13 ಕ್ಕೆ ಮುಂದೂಡಲಾಗಿದೆ. ಕಲಬುರಗಿಯಲ್ಲಿ ಪರೀಕ್ಷೆ ನಡೆಸಿದರೆ ಅಕ್ರಮ ನಡೆಯುವ ಶಂಕೆಯಿಂದ ಪಿಎಸ್ಐ ಮರು ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಲು ಇತ್ತೀಚೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪರೀಕ್ಷೆಗೆ ಕಲಬುರಗಿ ಸೆಂಟರ್ ಅನ್ನು ಬದಲಿಸಿ ಬೆಂಗಳೂರಿನಲ್ಲಿ ನಿಗದಿ ಮಾಡಲಾಗಿದೆ. ವಿಜಯಪುರದಲ್ಲಿ ನಡೆಯಬೇಕಿದ್ದ ಅರ್ಹತಾ ಪರೀಕ್ಷೆಯನ್ನು ತುಮಕೂರಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನು ಓದಿ: Security Breach: ಸಂಸತ್ತಿನಲ್ಲಿ ಆಗಂತುಕರ ಒಳನುಸುಳುವಿಕೆ ಪ್ರಕರಣ- ಭದ್ರತಾ ಲೋಪದಡಿ 8 ಸಿಬ್ಬಂದಿಗಳ ಅಮಾನತು!

Advertisement

Advertisement
Advertisement
Advertisement