ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

K S Eshwarappa: ಬಂಡಾಯ ಸ್ಪರ್ಧೆ ಆಯ್ತು, ಈಗ ಮತ್ತೊಂದು ವಿಚಾರದಲ್ಲಿ ಬಿಜೆಪಿಗೆ ಮಗ್ಗಲು ಮುಳ್ಳಾಗಲು ರೆಡಿಯಾದ ಈಶ್ವರಪ್ಪ !!

K S Eshwarappa: ಕೆ ಎಸ್ ಈಶ್ವರಪ್ಪ(K S Eshwarappa) ನವರು ಇದೀಗ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.
02:00 PM May 29, 2024 IST | ಸುದರ್ಶನ್
UpdateAt: 02:01 PM May 29, 2024 IST
Advertisement

K S Eshwarappa: ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ನೀಡಲಿಲ್ಲ ಹಾಗೂ ಇದಕ್ಕೆ ಯಡಿಯೂರಪ್ಪನವರ ಕುಟುಂಬ ರಾಜಕಾರಣವೇ ಕಾರಣ ಎಂದು ಶಿವಮೊಗ್ಗ(Shivamogga) ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೆಚ್ಚೆದೆಯಿಂದ ಚುನಾವಣೆ ಎದುರಿಸಿ ಬಿಜೆಪಿಗೆ ಬಿಸಿ ಮುಟ್ಟಿಸಿದ ಕೆ ಎಸ್ ಈಶ್ವರಪ್ಪ(K S Eshwarappa) ನವರು ಇದೀಗ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ: Women Topless Dress: ಇನ್ಮುಂದೆ ಪಬ್ಲಿಕ್ ಪ್ಲೇಸ್ ನಲ್ಲೂ ಮಹಿಳೆಯರು ಪುರುಷರಂತೆ 'ಟಾಪ್‌ಲೆಸ್' ಆಗಲು ಅನುಮತಿ!

ಬಹುಶಃ ಎಲ್ಲರಿಗೂ ನೆನಪಿರಬಹುದು 2018ರ ವಿಧಾನಸಭೆ ಚುನಾವಣೆಗೂ(Assembly Election) ಮುನ್ನ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು 'ಸಂಗೊಳ್ಳಿ ರಾಯಣ್ಣ ಬ್ರಿಗೇಡ್'. ಇದರ ನಿರ್ಮಾತೃವೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು. ಈ ರಾಯಣ್ಣ ಬ್ರಿಗೇಡ್(Sangolli Rayanna Brigade) ಅಂದು ರಾಜ್ಯಬಿಜೆಪಿಗೆ ಮಗ್ಗಲು ಮುಳ್ಳಾಗಿತ್ತು. ಇದನ್ನರಿತ ಯಡಿಯೂರಪ್ಪನವರು ಹಾಗೂ ಅಮಿತ್ ಶಾ ಅವರು ಅಂದು ಈಶ್ವರಪ್ಪನವರಿಗೆ ಇದನ್ನು ನಿಲ್ಲಿಸಿ ಎಂದು ಬೇಡಿದ್ದರು. ಇಬ್ಬರು ನಾಯಕರ ಮಾತಿಗೆ ಈಶ್ವರಪ್ಪನವರ ಎದುರಾಡದೆ ಬ್ರೀಗೇಡ್ ಅನ್ನು ನಿಲ್ಲಿಸಿದ್ದರು. ಆದರೀಗ ಪಕ್ಷದಿಂದ ಉಚ್ಛಾಟನೆಗೊಂಡು, ಗಾಯಗೊಂಡ ಸಿಂಹದಂತೆ ರೋಷದಿಂದ ಕುದಿಯುತ್ತಿರುವ ಈಶ್ವರಪ್ಪನವರು ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ: Goa New Rules: ಗೋವಾಕ್ಕೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದೀರಾ? ಈ ನ್ಯೂ ರೂಲ್ಸ್ ಗಳ ಬಗ್ಗೆ ಎಚ್ಚರವಿರಲಿ!

ಹೌದು ಕೆ ಎಸ್ ಈಶ್ವರಪ್ಪನವರು ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ರಾಜ್ಯಾದ್ಯಂತ ರಾಯಣ್ಣ ಬ್ರಿಗೇಡ್‌ ಪುನಾರಂಭಿಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಲೋಕಸಭೆ ಚುನಾವಣೆ ಫ‌ಲಿತಾಂಶದ ಬಳಿಕ ಕಾರ್ಯಾರಂಭಿಸಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಸಮಾಜಗಳ ಸಾಮಾಜಿಕ ನ್ಯಾಯಕ್ಕಾಗಿ ರಾಯಣ್ಣ ಬ್ರಿಗೇಡ್ ಪುನರ್ ಸಂಘಟನೆ ಮಾಡಲು ಹಲವರು ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ನಾನೊಬ್ಬನೇ ತೀರ್ಮಾನ ತಗೆದುಕೊಳ್ಳುವುದಿಲ್ಲ. ಚುನಾವಣೆ ನಿಲ್ಲುವ ನಿರ್ಧಾರವನ್ನೂ ನಾನೊಬ್ಬನೇ ತೆಗೆದುಕೊಂಡದ್ದಲ್ಲ. ಫಲಿತಾಂಶ ಬಂದ ಮರು ದಿನವೇ ತೀರ್ಮಾನ ಆಗಲ್ಲ. ರಾಜ್ಯದಲ್ಲಿನ ಎಲ್ಲ ಹಿತೈಷಿಗಳನ್ನು ಕರೆದು ಚರ್ಚೆ ಮಾಡುತ್ತೇನೆ. ಅಪ್ಪ, ಮಕ್ಕಳಿಂದ ಬಿಜೆಪಿ ಮುಕ್ತವಾಗಬೇಕು. ಹಿಂದುತ್ವದ ಪಕ್ಷವಾಗಿ ಉಳಿಯಬೇಕು ಎನ್ನುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

Related News

Advertisement
Advertisement