KPSC: ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ!!!
KPSC: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮೀಸಲಾತಿ ನಿಯಮಗಳಂತೆ ವರ್ಗೀಕರಿಸಿ ಪ್ರಸ್ತಾವನೆಯನ್ನು ಶುಕ್ರವಾರ ಕರ್ನಾಟಕ ಲೋಕಸೇವಾ ಆಯೋಗ (KPSC) ಕ್ಕೆ ಕಳುಹಿಸಿದೆ.
ಇದನ್ನೂ ಓದಿ: Gnanavapi Mosque: ಹಿಂದೂಗಳಿಗೆ ಪೂಜೆಗೆ ಅವಕಾಶ - ಜ್ಞಾನವಾಪಿ ಮಸೀದಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮುಸ್ಲಿಮರಿಂದ ನಮಾಜ್
ಗ್ರೂಪ್ ʼಎʼ ಮತ್ತು ಗ್ರೂಪ್ ʼಬಿʼ ಯಲ್ಲಿನ 384 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಆಯ್ಕೆ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕೆಪಿಎಸ್ಸಿಗೆ ಪ್ರಸ್ತಾವನೆ ಕಳುಹಿಸಿರುವುದಾಗಿ ವರದಿಯಾಗಿದೆ.
ವಾಣಿಜ್ಯ ತೆರಿಗೆ, ಖಜಾನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕಂದಾಯ, ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ಮಿಕ, ಸಹಕಾರ, ಉದ್ಯಮಶೀಲತೆ ಮತ್ತು ಜೀವನೋಪಾಯ, ಯುವ ಸಬಲೀಕರಣ ಮತ್ತು ಕ್ರೀಡಾ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಚಿವಾಲಯ, ಪ್ರವಾಸೋದ್ಯಮ ಸೇರೊ ʼಎʼ ನಲ್ಲಿ 159 ಗ್ರೂಪ್ ʼಬಿʼ ನಲ್ಲಿ 225 ಹುದ್ದೆಗಳ ನೇಮಕಾತಿ (ಕಲ್ಯಾಣ ಕರ್ನಾಟಕ ಸೇರಿ) ಗೆ ಸೂಚನೆ ನೀಡಲಾಗಿದೆ.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಈ ಮೂಲಕ ಚಾಲನೆ ದೊರಕುವ ಎಲ್ಲಾ ಸಂಭವನೀಯತೆ ಇದೆ.