KPSC: ಕೆಎಎಸ್ ನೇಮಕದ 384 ಹುದ್ದೆಗಳ ಅರ್ಜಿಗೆ ಆನ್ ಲೈನ್ ಲಿಂಕ್ ಬಿಡುಗಡೆ
08:02 AM Mar 05, 2024 IST
|
ಹೊಸ ಕನ್ನಡ
UpdateAt: 09:16 AM Mar 05, 2024 IST
Advertisement
384 ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ, ಸೋಮವಾರ ಅರ್ಜಿ ಸಲ್ಲಿಕೆಗೆ ಆನ್ ಲೈನ್ ಲಿಂಕ್ ಬಿಡುಗಡೆ ಮಾಡಿದೆ.
Advertisement
ಇದನ್ನೂ ಓದಿ: Guest Lecture: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ; ಜ.1 ರಿಂದಲೇ ಅನ್ವಯ
ಇದರಿಂದಾಗಿ ಅರ್ಜಿ ಸಲ್ಲಿಕೆ ಅಧಿಕೃತವಾಗಿ ಆರಂಭವಾಗಿದೆ. ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಒಂದು ತಿಂಗಳ ಸಮಯ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ಏ.3 ಕಡೆಯ ದಿನವಾಗಿದೆ.
Advertisement
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆಗಳು ಎದುರಾದರಲ್ಲಿ ಸಹಾಯವಾಣಿ ಸಂಖ್ಯೆ 080-30574957/30574901 ಸಂಪರ್ಕಿಸಬಹುದು.
159 ಗ್ರೂಪ್ 'ಎ' ಹುದ್ದೆಗಳು ಹಾಗೂ 225 ಗ್ರೂಪ್ 'ಬಿ' ಹುದ್ದೆಗಳ ಭರ್ತಿಗೆ ಆಯೋಗ ಫೆ. 26ರಂದು ಅಧಿಸೂಚನೆ ಪ್ರಕಟಿಸಿತ್ತು. ಹೆಚ್ಚಿನ ವಿವರಗಳು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯ.
Advertisement