For the best experience, open
https://m.hosakannada.com
on your mobile browser.
Advertisement

KPSC: ಕೆಎಎಸ್ ನೇಮಕದ 384 ಹುದ್ದೆಗಳ ಅರ್ಜಿಗೆ ಆನ್ ಲೈನ್ ಲಿಂಕ್ ಬಿಡುಗಡೆ

08:02 AM Mar 05, 2024 IST | ಹೊಸ ಕನ್ನಡ
UpdateAt: 09:16 AM Mar 05, 2024 IST
kpsc  ಕೆಎಎಸ್ ನೇಮಕದ 384 ಹುದ್ದೆಗಳ ಅರ್ಜಿಗೆ ಆನ್ ಲೈನ್ ಲಿಂಕ್ ಬಿಡುಗಡೆ
Advertisement

384 ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗ, ಸೋಮವಾರ ಅರ್ಜಿ ಸಲ್ಲಿಕೆಗೆ ಆನ್‌ ಲೈನ್ ಲಿಂಕ್ ಬಿಡುಗಡೆ ಮಾಡಿದೆ.

Advertisement

ಇದನ್ನೂ ಓದಿ: Guest Lecture: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ; ಜ.1 ರಿಂದಲೇ ಅನ್ವಯ

ಇದರಿಂದಾಗಿ ಅರ್ಜಿ ಸಲ್ಲಿಕೆ ಅಧಿಕೃತವಾಗಿ ಆರಂಭವಾಗಿದೆ. ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಒಂದು ತಿಂಗಳ ಸಮಯ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ಏ.3 ಕಡೆಯ ದಿನವಾಗಿದೆ.

Advertisement

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆಗಳು ಎದುರಾದರಲ್ಲಿ ಸಹಾಯವಾಣಿ ಸಂಖ್ಯೆ 080-30574957/30574901 ಸಂಪರ್ಕಿಸಬಹುದು.

159 ಗ್ರೂಪ್ 'ಎ' ಹುದ್ದೆಗಳು ಹಾಗೂ 225 ಗ್ರೂಪ್ 'ಬಿ' ಹುದ್ದೆಗಳ ಭರ್ತಿಗೆ ಆಯೋಗ ಫೆ. 26ರಂದು ಅಧಿಸೂಚನೆ ಪ್ರಕಟಿಸಿತ್ತು. ಹೆಚ್ಚಿನ ವಿವರಗಳು ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯ.

Advertisement
Advertisement
Advertisement