ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KPSC: ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿದ KPSC : ಏಪ್ರಿಲ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ

KPSC: ಇದೀಗ ವಿವಿಧ ಕಾರಣಗಳಿಂದ ದಿನಾಂಕವನ್ನು ಏಪ್ರಿಲ್ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
07:19 AM Apr 04, 2024 IST | ಸುದರ್ಶನ್
UpdateAt: 07:29 AM Apr 04, 2024 IST
Advertisement

KPSC ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಆಹ್ವಾನಿಸಿದೆ. ಈ ಬಾರಿ ಕೆಪಿಎಸ್ಸಿ ತನ್ನ ಪ್ರಕಟಣೆಯಲ್ಲಿ ಒಟ್ಟಾರೆ 384 ಹುದ್ದೆಗಳನ್ನು ಪ್ರಕಟಿಸಿದ್ದು, ಅದರಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಮುಂಚೆ ಅರ್ಜಿ ಸಲ್ಲಿಸಲು ಏಪ್ರಿಲ್ 3 ನ್ನು ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ ಇದೀಗ ವಿವಿಧ ಕಾರಣಗಳಿಂದ ದಿನಾಂಕವನ್ನು ಏಪ್ರಿಲ್ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಇದನ್ನೂ ಓದಿ: Mysore : ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಎಚ್ ಡಿ ದೇವೇಗೌಡ- ಕಾಂಗ್ರೆಸ್ ಸಚಿವ ಆರೋಪ !!

ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಪ್ರಸ್ತುತ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಮತ್ತು

Advertisement

ಚುನಾವಣಾ ಸಂಬಂಧಿತ ಕೆಲಸಗಳಿರುವುದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಏ.15ರ ವರೆಗೂ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Sumalatha Ambrish: ಚುನಾವಣೆಗೆ ನಿಲ್ಲಲ್ಲ, ಮಂಡ್ಯ ಬಿಡಲ್ಲ, ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ - ಸಂಸದೆ ಸುಮಲತಾ ಅಂಬರೀಷ್ !!

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ಬೇಕಾಗಿರುವ ವಯೋಮಿತಿ, ಸಂಬಳ, ಅರ್ಜಿ ಶುಲ್ಕ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ,  ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ವಯೋಮಿತಿ ನಿಗದಿ:

KPSC ನೇಮಕಾತಿಯ ಅಧಿಸೂಚನೆಯಂತೆ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 38 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ವಯೋಮಿತಿಯಲ್ಲಿ ಸಡಿಲಿಕೆ :

SC-ST, ಪ್ರವರ್ಗ-1ಕ ಅಭ್ಯರ್ಥಿಗಳಿಗೆ : 5 ವರ್ಷಗಳು

 

2A, 2B, 3A, 3B ಅಭ್ಯರ್ಥಿಗಳಿಗೆ : 3ವರ್ಷಗಳು

 

PWD ಅಭ್ಯರ್ಥಿಗಳಿಗೆ : 10 ವರ್ಷಗಳು

 

ಅರ್ಜಿ ಶುಲ್ಕಗಳು :

 

ಸಾಮಾನ್ಯ ಅಭ್ಯರ್ಥಿಗಳಿಗೆ : ರು. 600/-

 

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ : ರು. 2.300/-

 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರು. 50/-

 

SC/ ST, ಪ್ರವರ್ಗ-1, PWD ಅಭ್ಯರ್ಥಿಗಳಿಗೆ : ಉಚಿತ

ಪರೀಕ್ಷಾ ವಿಧಾನ :

ಮೂರು ಹಂತಗಳಲ್ಲಿ ಪರೀಕ್ಷೆ

1-ಪೂರ್ವಭಾವಿ ಪರೀಕ್ಷೆ

2-ಮುಖ್ಯ ಪರೀಕ್ಷೆ

3-ಸಂದರ್ಶನ

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಎರಡು ದಿನಾಂಕಗಳನ್ನು ಮರೆಯದಿರಿ :

1) ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 15, 2024

2) ಪೂರ್ವಭಾವಿ ಪರೀಕ್ಷೆ ನಡೆಯುವ ದಿನ: ಜುಲೈ 7, 2024

ಒಟ್ಟಾರೆ ಗೆಜೆಟೆಡ್ ಹುದ್ದೆಗಳು :

ಗ್ರೂಪ್ ಎ - 159

ಗ್ರೂಪ್ ಬಿ - 225

ಒಟ್ಟು ಹುದ್ದೆಗಳು - 384

ಗ್ರೂಪ್ ಎ ಹುದ್ದೆಗಳು : 

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು- ವಾಣಿಜ್ಯ ತೆರಿಗೆ ಇಲಾಖೆ- 41, ಸಹಾಯಕ ಆಯುಕ್ತರು- ಸಿಬ್ಬಂದಿ & ಆಡಳಿತ ಸುಧಾರಣೆ- 40,ಸಹಾಯಕ ನಿರ್ದೇಶಕರು- ಖಜಾನೆ ಇಲಾಖೆ- 2,ಡಿವೈಎಸ್‌ಪಿ- ಒಳಾಡಳಿತ ಇಲಾಖೆ-9, ಸಹಾಯಕ ನಿರ್ದೇಶಕರುಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ- 20, ಕಾರ್ಯ ನಿರ್ವಾಹಕ ಅಧಿಕಾರಿ/ಸಹಾಯ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ-40, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು/PETC- ಹಿಂದುಳಿದ ವರ್ಗಗಳ ಇಲಾಖೆಗೆ-7 ಹುದ್ದೆಗಳಾಗಿವೆ.

ಗ್ರೂಪ್ ಬಿ ದರ್ಜೆ ಹುದ್ದೆಗಳು:

ತಹಶೀಲ್ದಾರ್, ಗ್ರೇಡ್ 2-ಕಂದಾಯ ಇಲಾಖೆ- 51, ಯುವ ಸಬಲೀಕರಣ & ಕ್ರೀಡಾ ಇಲಾಖೆ- 4, ಮುಖ್ಯಾಧಿಕಾರಿ ಗ್ರೇಡ್-1, ನಗರಾಭಿವೃದ್ಧಿ ಇಲಾಖೆ-1,

ಸಹಕಾರ ಸಂಘಗಳ ಸಹಾಯಕ ನಿಬಂಧ- ಸಹಕಾರ ಇಲಾಖೆ 12, ಸಹಾಯಕ ನಿರ್ದೇಶಕರು-ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ-9 ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ(ಅಬಕಾರಿ)- 10,

ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ- 3, ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ -9, ಸಹಾಯಕ ನಿರ್ದೇಶಕರು,

ವಾಣಿಜ್ಯ ತೆರಿಗೆ ಅಧಿಕಾರಿ - 59, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ -2, ಕಾರ್ಮಿಕ ಅಧಿಕಾರಿ- ಕಾರ್ಮಿಕ ಇಲಾಖೆ- 4, ಸಹಾಯಕ ಅಧೀಕ್ಷಕರು- ಒಳಾಡಳಿತ ಇಲಾಖೆ (ಬಂಧೀಖಾನೆ)- 3, ಹುದ್ದೆಗಳಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ.

Related News

Advertisement
Advertisement