Koppala Murder Case: ಕೊಪ್ಪಳ ಒಂದೇ ಕುಟುಂಬದ ಮೂವರ ನಿಗೂಢ ಸಾವಿನ ಪ್ರಕರಣ; ಮೂವರನ್ನು ಕೊಲೆ ಮಾಡಿದ ಭಗ್ನ ಪ್ರೇಮಿ
Koppal Murder Case: ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಮೇ.28 ರಂದು ಒಂದೇ ಮನೆಯಲ್ಲಿ ಮೂವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಮೂವರ ಸಾವು ಆತ್ಮಹತ್ಯೆ ರೀತಿ ಇತ್ತು. ಆದರೆ ಇದೀಗ ಪೊಲೀಸರ ತನಿಖೆಯಿಂದ ಬೆಚ್ಚಿ ಬೀಳುವಂತಹ ಕೊಲೆ ರಹಸ್ಯ ಬಹಿರಂಗಗೊಂಡಿದೆ.
ಮೂವರದ್ದೂ ಆತ್ಮಹತ್ಯೆಯಲ್ಲಿ ಇದೊಂದು ಕೊಲೆ ಎಂದು ತನಿಖೆ ಮೂಲಕ ಗೊತ್ತಾಗಿದೆ. ತನ್ನನ್ನು ಬಿಟ್ಟು ಸಹೋದರನನ್ನು ಮದುವೆಯಾಗಿದ್ದಕ್ಕೆ ಸಿಟ್ಟುಗೊಂಡ ವ್ಯಕ್ತಿ ಮೂವರನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಬರೀ 24 ಗಂಟೆಯಲ್ಲೇ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದರು. ರಾಜೇಶ್ವರಿ (50 ವರ್ಷ), ರಾಜೇಶ್ವರಿ ಅವರ ಪುತ್ರಿ ವಸಂತಾ (28 ವರ್ಷ), ವಸಂತಾ ಅವರ ಮಗ ಸಾಯಿಧರ್ಮತೇಜ್ (5 ವರ್ಷ) ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರ ನಿಗೂಢ ಸಾವು ಇಡೀ ಗ್ರಾಮಕ್ಕೆ ಬೆಚ್ಚಿಬೀಳಿಸಿತ್ತು.
ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿದ ರೀತಿ ಇತ್ತು ಎಂದು ಎಲ್ಲರೂ ಊಹೆ ಮಾಡಿದ್ದರು. ಈ ಘಟನೆ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರೇ ಶಾಕ್;
ಪೊಲೀಸರು ಕೂಡಾ ಈ ಮೂವರ ಶವಗಳನ್ನು ನೋಡಿದಾಗ ಇದೊಂದು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ತನಿಖೆ ಪ್ರಾರಂಭ ಮಾಡಿದಾಗ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೆ ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಸಿದಾಗ, ಪೊಲೀಸರೇ ಶಾಕ್‌ಗೊಳಗಾಗಿದ್ದಾರೆ. ಏಕೆಂದರೆ ಇದೊಂದು ಆತ್ಮಹತ್ಯೆಯಲ್ಲ, ಇದೊಂದು ಕೊಲೆ ಎನ್ನುವುದು ಗೊತ್ತಾಗಿದೆ.
ಮೂವರನ್ನು ಕೂಡಾ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಕೊಲೆ ಮಾಡಿದವರು ಯಾರು? ಎಂದು ತನಿಖೆ ಪ್ರಾರಂಭ ಮಾಡಿದಾಗ, ಕೊಲೆ ಮಾಡಿದವರು ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್‌ನ ಸಹೋದರ ಆಸೀಫ್. 28 ವರ್ಷದ ಆಸೀಫ್ ಮೂವರನ್ನು ಕೊಲೆ ಮಾಡಿದ್ದಾನೆ.
ಕೊಲೆಯಾದ ವಸಂತಾಳಿಗೆ ಈ ಮೊದಲು ಆಂಧ್ರಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಸಾಯಿಧರ್ಮತೇಜ್ ಎನ್ನುವ ಮಗ ಇದ್ದ. ಕೌಟುಂಬಿಕ ಕಲಹದಿಂದ ವಸಂತ ಗಂಡನಿಂದ ಬೇರೆಯಾದರು. ನಂತರ ಹೊಸಲಿಂಗಾಪುರ ಗ್ರಾಮದಲ್ಲಿ ತನ್ನ ತಾಯಿ ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು, ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ವಸಂತಳಿಗೆ ಅಲ್ಲೇ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್‌ನ ಪರಿಚಯವಾಗಿದ್ದು, ನಂತರ ಅದು ಪ್ರೀತಿಗೆ ಬದಲಾಗಿದೆ. ನಂತರ ಆರೀಫ್ ಮತ್ತು ವಸಂತಾ ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಅನಂತರ ಆರೀಫ್ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುವುದು ಮಾಡುತ್ತಿದ್ದ. ಆದರೆ ಆರೀಫ್‌ಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಹೆಂಡತಿಯಿಂದ ಮಕ್ಕಳು ಇದ್ದವು.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ ಆರೀಫ್‌ನನ್ನು ಪ್ರೀತಿಸುವ ಮೊದಲು ವಸಂತ ಆಸಿಫ್‌ನ (ಆರೀಫನ ಸಹೋದರ) ಪ್ರೀತಿಸುತ್ತಿದ್ದಳಂತೆ. ಆದರೆ ಬರ ಬರುತ್ತಾ, ಆಸಿಫ್‌ನನ್ನು ಬಿಟ್ಟು, ಈಕೆ ಆರೀಫ್‌ನ ಪ್ರೀತಿಯ ಮೋಹಪಾಶದಲ್ಲಿ ಬಿದ್ದಳು. ಆದರೆ ಆಸಿಫ್‌ಗೆ ಇವರಿಬ್ಬರು ಮದುವೆಯಾದ ವಿಷಯ ತಿಳಿದ ನಂತರ ಸಿಟ್ಟು ಹೆಚ್ಚಾಗಿತ್ತು. ಈ ಸಿಟ್ಟಿನಲ್ಲಿಯೇ ಮೆ.27 ರಂದು ಸಂಜೆ ಐದರಿಂದ ಆರು ಗಂಟೆ ಸಮಯದಲ್ಲಿ ವಸಂತಾಳ ಮನೆಗೆ ಬಂದಿದ್ದ ಈತ ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಂದು, ನಂತರ ಸಾಯಿಧರ್ಮತೇಜ್‌ನನ್ನು ಕೊಲೆ ಮಾಡಿದ್ದ. ನಂತರ ಕೆಲಸ ಮುಗಿಸಿ ಮನೆಗೆ ಬಂದ ವಸಂತಾಳನ್ನು ಕೂಡಾ ಉಸಿರುಗಟ್ಟಿಸಿ ಕೊಂದಿದ್ದಾನೆ.
ಇದನ್ನೂ ಓದಿ: Daskhina Kannada: ಮಂಗಳೂರಿನಲ್ಲಿ ಪೈಲ್ಸ್ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ರೇಪ್