For the best experience, open
https://m.hosakannada.com
on your mobile browser.
Advertisement

Muslim man beaten in Koppal: ಕೊಪ್ಪಳ ವೃದ್ಧನಿಗೆ ಹಲ್ಲೆ ನಡೆಸಿ ಜೈ ಶ್ರೀರಾಮ ಹೇಳಿಸಲು ಒತ್ತಾಯ: ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್!

04:39 PM Dec 06, 2023 IST | ಅಶ್ವಿನಿ ಹೆಬ್ಬಾರ್
UpdateAt: 05:09 PM Dec 06, 2023 IST
muslim man beaten in koppal  ಕೊಪ್ಪಳ ವೃದ್ಧನಿಗೆ ಹಲ್ಲೆ ನಡೆಸಿ ಜೈ ಶ್ರೀರಾಮ ಹೇಳಿಸಲು ಒತ್ತಾಯ   ಪ್ರಕರಣಕ್ಕೆ ಸಿಕ್ತು ರೋಚಕ ಟ್ವಿಸ್ಟ್
image source: Asianet Suvarna
Advertisement

Gangavati Crime: ಕೊಪ್ಪಳ ಜಿಲ್ಲೆಯ ಗಂಗಾವತಿ(Gangavati) ಪಟ್ಟಣದಲ್ಲಿ ಕಳೆದ ನವಂಬರ್ 25 ರಂದು ಮುಸ್ಲಿಂ ಅಂಧ ವೃದ್ದರೊಬ್ಬರ ಮೇಲೆ ಮತ್ತೊಂದು ಧರ್ಮದ ದುಷ್ಕರ್ಮಿಗಳು(Gangavati Crime) ಹಲ್ಲೆ ಮಾಡಿ, ಜೈ ಶ್ರೀರಾಮ ಘೋಷಣೆ ಕೂಗಿಸಿ, ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ರಾಜ್ಯಾದ್ಯಂತ ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿ ಹೊರಬಿದ್ದಿದೆ.

Advertisement

ಕೊಪ್ಪಳ ಜಿಲ್ಲೆಯಲ್ಲಿ ನವೆಂಬರ್ 25 ರಂದು ವೃದ್ದ ಹುಸೇನಸಾಬ್ ಅವರನ್ನು ಮನೆಗೆ ಡ್ರಾಪ್ ಮಾಡಲು ಇಬ್ಬರು ಒಪ್ಪಿಕೊಂಡಿದ್ದಾರೆ. ಆದರೆ, ಆರೋಪಿಗಳಿಬ್ಬರು ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ. ಹೀಗಾಗಿ,ನಡುವೆ ಕುಳಿತಿದ್ದ ಹಸನಸಾಬ್ ಅವರ ಟೋಪಿಯನ್ನು ಆರೋಪಿ ಸಾಗರ್ ಎಂಬ ವ್ಯಕ್ತಿ ಎಳೆದಿದ್ದಾರೆ. ಈ ಸಂದರ್ಭ ಕುಪಿತರಾದ ವೃದ್ದ ಅವಾಚ್ಯ ಶಬ್ದಗಳಿಂದ ಆರೋಪಿಗಳಿಬ್ಬರಿಗೆ ಬೈದಿದ್ದಾರಂತೆ. ತಮಗೆ ಅವಾಚ್ಯ ಶಬ್ದಗಳಿಂದ ವೃದ್ದ ಬೈದರು ಎಂದು ಸಿಟ್ಟಿಗೆದ್ದು ಆರೋಪಿಗಳು ವೃದ್ದನ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ಇನ್ನೂರಾ ಐವತ್ತು ರೂಪಾಯಿ ತಗೆದುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.

Advertisement

ಇದನ್ನು ಓದಿ: Water Heater: ಚಳಿಗಾಲದಲ್ಲಿ ಗೀಸರ್ ನಲ್ಲಿ ಇಷ್ಟಿರಬೇಕು ಟೆಂಪರೇಚರ್ - ನೀರಲ್ಲಿರೋ ಬ್ಯಾಕ್ಟೀರಿಯಾವೆಲ್ಲ ಸಾಯುತ್ತೆ !!

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರದ ಕುವೆಂಪು ಬಡಾವಣೆಯ ನಿವಾಸಿಯಾಗಿರುವ ಸಾಗರ್ ಮತ್ತು ನರಸಪ್ಪ ಇಬ್ಬರನ್ನೂ ಬಂಧಿಸಿದ್ದಾರೆ. ವೃದ್ದನ ಮೇಲೆ ಬೀಯರ್ ಬಾಟಲ್ನಿಂದ ಹಲ್ಲೆ ಮಾಡಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಆತನ ಗಡ್ಡವನ್ನು ಗ್ಲಾಸ್ನಿಂದ ಕತ್ತರಿಸಿದ್ದು ಕೂಡ ನಡೆದಿಲ್ಲ ಎನ್ನಲಾಗಿದೆ. ಇದೆಲ್ಲದರ ನಡುವೆ, ಕೋಮು ದ್ವೇಷದಿಂದ ಕೂಡ ಮಾಡಿಲ್ಲ ಎನ್ನಲಾಗಿದ್ದು, ಬದಲಿಗೆ ಕುಡಿದ ಅಮಲಿನಲ್ಲಿ ಆರೋಪಿಗಳು ವೃದ್ದನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಹಿಂದೆ ಯಾವುದೇ ಸಂಘ-ಪರಿವಾರವಾಗಲಿ ಇಲ್ಲವೇ ಹಿಂದೂ ಧರ್ಮದ ಯಾವುದೇ ಸಂಘಟನೆಗಳ ಕೈವಾಡ ಇಲ್ಲ ಎನ್ನುವುದನ್ನು ಪೊಲೀಸರು ತನಿಖೆ ವೇಳೆ ಬೆಳಕಿಗೆ ಬಂದಿದೆ.

Advertisement
Advertisement
Advertisement