For the best experience, open
https://m.hosakannada.com
on your mobile browser.
Advertisement

Kolara: ಆಸ್ತಿಗಾಗಿ ಸ್ವಾಮೀಜಿಗಳಿಂದಲೇ ಸ್ವಾಮೀಜಿಯೊಬ್ಬರ ಬರ್ಬರ ಹತ್ಯೆ !!

Kolara: ರಾಜ್ಯದಲ್ಲಿ ನಂಬಲಾಗದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ತಿ ವಿಚರಕ್ಕಾಗಿ ಸ್ವಾಮೀಜಿಗಳೇ ಸೇರಿ ಸ್ವಾಮೀಜಿಯೊಬ್ಬರ ಬರ್ಬರ ಹತ್ಯೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
03:48 PM Jun 23, 2024 IST | ಸುದರ್ಶನ್
UpdateAt: 03:48 PM Jun 23, 2024 IST
kolara  ಆಸ್ತಿಗಾಗಿ ಸ್ವಾಮೀಜಿಗಳಿಂದಲೇ ಸ್ವಾಮೀಜಿಯೊಬ್ಬರ ಬರ್ಬರ ಹತ್ಯೆ

Kolara: ರಾಜ್ಯದಲ್ಲಿ ನಂಬಲಾಗದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ತಿ ವಿಚರಕ್ಕಾಗಿ ಸ್ವಾಮೀಜಿಗಳೇ ಸೇರಿ ಸ್ವಾಮೀಜಿಯೊಬ್ಬರ ಬರ್ಬರ ಹತ್ಯೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

Advertisement

Basavangouda Patil Yatnal: ದೇಶದಲ್ಲಿರೋ 12 ಲಕ್ಷ ಎಕರೆ ವಕ್ಫ್ ಜಮೀನು ಬಡವರಿಗೆ ಹಂಚಿಕೆ ?! ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಹೌದು, ಲೌಕಿಕ ಜೀವನದ ಭೋಗ, ವೈಭೋಗ ತೊರೆದು, ವೈರಾಗ್ಯ ತಾಳಿ ಸನ್ಯಾಸತ್ವ ಸ್ವೀಕರಿಸಿದವರೂ ಹೆಣ್ಣು, ಹೊನ್ನು, ಮಣ್ಣಿಗಾಗಿ ಬಡಿದಾಡಿಕೊಳ್ಳುತ್ತಿರುವ ಅಘಾತಕಾರಿ ಹಾಗೂ ನಂಬಲಾಗದ ಘಟನೆಗಳು ಇಂದು ನಡೆಯುತ್ತಿವೆ. ಹಿಂದೂಗಳು ಗುರುಗಳ ಸ್ಥಾನದಲ್ಲಿರಿಸುವ ಕಾವಿಗಳಿಗೆ ರಕ್ತದ ಕಲೆ ಅಂಟುತ್ತಿದೆ. ಅಂತೆಯೇ ಇದೀಗ ಕೋಲಾರದ(Kolara) ಮಾಲೂರು(Maluru) ತಾಲೂಕಿನ ಸಂತಹಳ್ಳಿ ಗ್ರಾಮದಲ್ಲಿನ ಆನಂದಮಾರ್ಗ ಆಶ್ರಮದಲ್ಲಿ ಸ್ವಾಮೀಜಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಆಚಾರ್ಯ ಚಿನ್ಮಯಾನಂದ ಅವಧೂತ ಸ್ವಾಮೀಜಿ(Chinmayananda Avadhoota Swamy) ಯವರನ್ನು ಕೊಲೆ ಮಾಡಲಾಗಿದೆ.

Advertisement

ಏನಿದು ಪ್ರಕರಣ?
ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹಾಗೂ ಧರ್ಮ ಪ್ರಾಣಾನಂದ ಸ್ವಾಮೀಜಿ, ಅರುಣ್ ಕುಮಾರ್, ಆಡಳಿತ ಮತ್ತು ಜಮೀನು ವಿಚಾರವಾಗಿ ಆಶ್ರಮದ ಎರಡು ಗುಂಪುಗಳ ನಡುವೆ ಅನೇಕ ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತಿತ್ತು. ಅಲ್ಲದೆ, ಜಮೀನು ವಿಚಾರವಾಗಿ ಇಬ್ಬರು ಸ್ವಾಮೀಜಿಗಳ ನಡುವೆ ಹಲವು ವರ್ಷಗಳಿಂದಲೂ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿತ್ತು. ಅದರಂತೆ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಸ್ವಾಮೀಜಿ ಅವರನ್ನ ಆರೋಪಿಗಳು ಹೊರಗೆ ಎಳೆದು ತಂದಿದ್ದಾರೆ. ಬಳಿಕ ಮುಖಕ್ಕೆ ಸ್ಪ್ರೆ ಸಿಂಪಡಿಸಿದ್ದಾರೆ. ಬಳಿಕ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಅಂದಹಾಗೆ ಕೋಲಾರದ ತಾಲ್ಲೂಕು ಕಿತ್ತಂಡೂರು ಗ್ರಾಮದ ಆನಂದ ಮಾರ್ಗ ಆಶ್ರಮದಲ್ಲಿಂದು ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅಪಾರ ಸಂಖ್ಯೆಯ ಬಂಧು-ಬಳಗ ಹಾಗೂ ಶಿಷ್ಯ ವೃಂದದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೊಲೆ ಮಾಡಿದವರು ಆಶ್ರಮದ ಇಬ್ಬರೂ ಸ್ವಾಮಿಗಳು ಎಂಬುದೇ ಆಶ್ಚರ್ಯ. ಇದೀಗ ಆರೋಪಿಗಳಾದ ಆಶ್ರಮದ ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ (45), ಪ್ರಾಣೇಶ್ವರಾನಂದ ಸ್ವಾಮೀಜಿ (48) ಹಾಗೂ ಆಶ್ರಮದ ಮಾಜಿ ಸಿಬ್ಬಂದಿ ಅರುಣ್ ಕುಮಾರ್ (55) ಬಂಧಿತ ಆರೋಪಿಗಳಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.

ಕೋಲಾರ ಜಿಲ್ಲಾ ಎಸ್ಪಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವಿಶಂಕರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಲೂರು ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಸಂತ್‌, ಸಬ್‌ ಇನ್ಸ್‌ಪೆಕ್ಟರ್‌ ವರಲಕ್ಷ್ಮೀ ಸೇರಿದಂತೆ ಸಿಬ್ಬಂದಿ ಹಾಜರಿದ್ದರು. ಮಾಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DSP Demoted to Constable: ಸಹೋದ್ಯೋಗಿಯೊಂದಿಗೆ ಹೋಟೆಲ್ನಲ್ಲಿ ಸರಸ! DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!

Advertisement
Advertisement
Advertisement