ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hypnotize:ಸಾರ್ವಜನಿಕರೇ ಎಚ್ಚರ!! ಇಲ್ಲಿದ್ದಾರೆ ಮಾಡ್ರನ್ ಸ್ವಾಮೀಜಿಗಳು; ಹೂ ನೀಡಿ ಸಮ್ಮೋಹನಗೊಳಿಸಿ ನಿಮ್ಮ ಖಾತೆಗೆ ಹಾಕುತ್ತಾರೆ ಕನ್ನಾ!!

01:30 PM Jan 10, 2024 IST | ಅಶ್ವಿನಿ ಹೆಬ್ಬಾರ್
UpdateAt: 01:59 PM Jan 10, 2024 IST
Advertisement

Hypnotize : ಕೊಡಗು(Kodagu)ಜಿಲ್ಲೆಯಲ್ಲಿ ಸ್ವಾಮೀಜಿ ವೇಷಧಾರಿಯಾಗಿ ಬಂದ ಆಗಂತುಕರಿಬ್ಬರೂ ಸಮ್ಮೋಹನಗೊಳಿಸಿ ಹಲವರಿಂದ ಹಣ(Money)ದೋಚಿರುವ ಆರೋಪ ಕೇಳಿ ಬಂದಿದೆ.

Advertisement

ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಮನೆಗೆ ಬಂದ ಸ್ವಾಮೀಜಿಯೊಬ್ಬರು (Swamiji) ಕಾರು(Car)ಚಾಲಕನೊಬ್ಬನ ಮನೆಯಲ್ಲಿ ಹಲವು ಸಮಸ್ಯೆಗಳಿದ್ದು ಅದನ್ನು ಪರಿಹರಿಸುವ ಸಲುವಾಗಿ ಅದಕ್ಕೆ ಹಣ ನೀಡುವಂತೆ ಕೇಳಿದ್ದಾರಂತೆ. ಆಗ ಮನೆಯವರು ಪರಿಹಾರವೇನು ಬೇಕಾಗಿಲ್ಲ ಎಂದು ನೂರು ರೂಪಾಯಿ ಕೊಡಲು ಮುಂದಾಗಿದ್ದು, ಅದಕ್ಕೆ ಒಪ್ಪದ ಆಗಂತುಕರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭ ಮನೆ ಮಾಲೀಕ ಒಂದು ಸಾವಿರ ರೂ ಕೊಟ್ಟು ಕಳುಹಿಸಿದ್ದಾರಂತೆ.

ಇದನ್ನೂ ಓದಿ: Killer CEO case: ತಾಯಿಯೇ ಮಗುವನ್ನು ಕೊಂದ ಪ್ರಕರಣ - ವೈದ್ಯರಿಂದ ಸ್ಪೋಟಕ ಸತ್ಯ ಬಹಿರಂಗ !!

Advertisement

ದಾರಿಯಲ್ಲಿ ಮನೆ ಮಾಲೀಕನ ಮಗ ಎದುರಾಗಿದ್ದು ಆತನಿಗೆ ಸ್ವಾಮೀಜಿ ಆಶೀರ್ವಾದ ಮಾಡುವಂತೆ ಹೂವೊಂದನ್ನು ನೀಡಿದ್ದಾರೆ. ಹೂ ಸ್ವೀಕರಿಸಿದ ವ್ಯಕ್ತಿ ಮಂತ್ರ ಮುಗ್ದನ (Hypnotize)ಹಾಗೆ ತಮ್ಮ ಮೊಬೈಲ್ ಮೂಲಕ 4 ಸಾವಿರ ರೂ ಗೂಗಲ್ ಪೇ(Google Pay) ಮಾಡಿದ್ದಾರಂತೆ.

ಇದೇ ಸ್ವಾಮೀಜಿ ಮತ್ತು ಆತನ ಕಾರು ಚಾಲಕ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಮಹಿಳೆಯೊಬ್ಬರ ಮನೆಗೆ ತೆರಳಿದ್ದಾರಂತೆ. ಅಲ್ಲಿ ಕೂಡ ಆಶೀರ್ವಾದ ಮಾಡುವಂತೆ ಮಹಿಳೆಯ ಕೈಗೆ ಹೂವೊಂದನ್ನು ನೀಡಿದ್ದಾರಂತೆ. ಮಂತ್ರಮುಗ್ದರಾದ ಮಹಿಳೆಯು ಆಕೆಯ ಅರಿವಿಲ್ಲದಂತೆ 50 ಸಾವಿರ ರೂ ಗೂಗಲ್ ಪೇ ಮಾಡಿದ್ದಾರಂತೆ. ಹಣ ಪಡೆದ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲ ಸಮಯದ ಬಳಿಕ ತಾವು ಹೇಗೆ ಅಷ್ಟೊಂದು ಹಣ ಸ್ವಾಮೀಜಿಗೆ ನೀಡಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಆ ಮಹಿಳೆ ಕಣ್ಣೀರು ಹಾಕಿದ್ದಾರೆ.

ಬಿಳಿ ಬಣ್ಣ ಸ್ವಿಫ್ಟ್ ಕಾರಿನಲ್ಲಿ ಬಂದಿರುವ ಆಗಂತುಕರು ದೃಶ್ಯ ಎರಡು ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಎ 02 ಎಹೆಚ್ 3717 ನೋಂದಣಿ ಸಂಖ್ಯೆಯ ಕಾರಿನಲ್ಲಿ ಇವರು ಆಗಮಿಸಿದ್ದು ಜನರು ಎಚ್ಚರದಿಂದ ಇರುವಂತೆ ಮನವಿ ಮಾಡಲಾಗಿದೆ. ಈ ಕಾರು ಮತ್ತು ಗೂಗಲ್ ಪೇ ನಂಬರ್ ಜಾಡು ಹಿಡಿದು ತನಿಖೆ ನಡೆಸುವಂತೆ ಜನರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Advertisement
Advertisement