ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kiccha Sudeep: ಕರ್ನಾಟಕ ಅಲ್ಲದೆ ತುಳುನಾಡು ಅಂತ ಬೇರೆಯೇ ಇದೆಯೇ? ಕಿಚ್ಚ ಸುದೀಪ್ ಪ್ರಶ್ನೆ!!

Kiccha Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಬಿಟ್ಟು, ತುಳುನಾಡು ಅಂತ ಬೇರೆಯೇ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.
07:55 AM May 29, 2024 IST | ಸುದರ್ಶನ್
UpdateAt: 09:26 AM May 29, 2024 IST
Advertisement

Kiccha Sudeep: ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕನ್ನಡ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಬಿಟ್ಟು, ತುಳುನಾಡು ಅಂತ ಬೇರೆಯೇ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

Advertisement

https://x.com/Rakshit_Rakshi_/status/1794968125110206885?s=08

ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್(Kiccha Sudeep) ಅವರು ಮಂಗಳೂರಿಗೆ(Mangaluru) ಭೇಟಿ ನೀಡಿ ತಮ್ಮ ಗೆಳೆಯನ ರೆಸ್ಟೋರೆಂಟ್‌ನ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಅವರು 'ಯಕ್ಷ ಧ್ರುವ ಪಟ್ಲ ಫೌಂಡೇಶನ್' ಆಯೋಜಿಸಿದ್ದ 'ಯಕ್ಷ ಧ್ರುವ ಪಟ್ಲ ಸಂಭ್ರಮ 2024' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರು ವೇದಿಕೆಯಲ್ಲಿರುವಾಗ ಅತಿಥಿ ಗಣ್ಯರ, ನಿರೂಪಕರ ಮಾತು ಕೇಳಿ ಯಾಕೋ ಒಂದು ತರ ಆಗಿಬಿಟ್ಟರು. ಆ ಒಂದು ಮಾತು ಅವರಿಗೆ ತುಂಬಾನೆ ಬೇಸರ ತರಿಸಿತ್ತು. ಆ ಮಾತು ಅವರಿಗೆ ಅದ್ಯಾಕೋ ತಾವು ಹೊರಗಿನವರು ಅನ್ನುವ ಫೀಲ್ ಬರುವಂತೆ ಮಾಡಿತ್ತು. ಕೊನೆಗೆ ಮನದಲ್ಲಿ ಆ ಕೂಡಲೇ ಒಂದು ಪ್ರಶ್ನೆ ಕೂಡ ಹುಟ್ಟಿಕೊಂಡಿತ್ತು. ಅಂತೂ ತಡೆಯಲಾಗದ ಕಿಚ್ಚ 'ತುಳುನಾಡು (Tulu nadu) ಕರ್ನಾಟಕದಲ್ಲಿಯೇ ಇದಿಯಾ..? ಇಲ್ಲ ಇದನ್ನ ಬಿಟ್ಟು ಇದಿಯಾ.? ಮನದಲ್ಲಿ ಮೂಡಿರೋ ಈ ಪ್ರಶ್ನೆಯನ್ನ ತುಂಬಾ ಸುಂದರವಾಗಿಯೆ' ಮೇಲೆ ಕೇಳಿಯೇ ಬಿಟ್ರು

Advertisement

ಇದನ್ನೂ ಓದಿ: Prajwal Revanna: 2 ಸಲ ಟಿಕೆಟ್ ಕ್ಯಾನ್ಸಲ್ ಮಾಡಿದ್ದ ಪ್ರಜ್ವಲ್ ಕೊನೆಗೂ ಮೇ 31ರಂದೇ ಭಾರತದತ್ತ ಹೊರಟಿದ್ದೇಕೆ?

ಹೌದು, 'ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ. ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈ ಕಡೆಯವರು ಎಂದು ನಿರೂಪಕರು ಹೇಳಿದರು. ತುಳುನಾಡು ಬೇರೆ ಅಲ್ಲ. ಕರ್ನಾಟಕ ಬೇರೆ ಅಲ್ಲ ಎರಡೂ ಒಂದೇನೆ ಅಲ್ವೇ..? ತುಳುನಾಡಿನ ನಂಟು ನನಗೂ ಇದೆ. ನಮ್ಮ ತಾಯಿ ತುಳುನಾಡಿನವರೇ ಆಗಿದ್ದಾರೆ. ತುಂಬಾನೆ ಚೆನ್ನಾಗಿಯೇ ಅಮ್ಮ ತುಳು ಮಾತನಾಡುತ್ತಾರೆ. ನನಗೂ ಎರಡೇ ಎರಡು ಪದಗಳನ್ನ ಕಲಿಸಿದ್ದಾರೆ. ನನಗೆ ಎಂಚಿನ ಮಾರಾರ್ರೆ, ಉಣಸಾಂಡ ಅನ್ನುವ ಈ ಎರಡು ಪದಗಳ ಅರ್ಥ ಗೊತ್ತಿದೆ. ಅಮ್ಮ ಮನೆಗೆ ಬರ್ತಿದ್ದ ಅತಿಥಿಗಳ ಜೊತೆಗೆ ಮಾತನಾಡಲು ಈ ಎರಡು ಪದಗಳನ್ನ ಹೇಳಿಕೊಟ್ಟಿದ್ದರು ಅಂತಲೇ ಅಮ್ಮನ ಬಗ್ಗೆ ಕಿಚ್ಚ ಸುದೀಪ್ ಇಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Money Making Tips: ಹೆಣ್ಣು ಮಗು ಹೆತ್ತವರಿಗೆ ಸಿಹಿ ಸುದ್ದಿ!

Related News

Advertisement
Advertisement