Rape on Child: ಮಗಳ ಮೇಲೆ ಪ್ರಿಯಕರನಿಂದ ಲೈಂಗಿಕ ದೌರ್ಜನ್ಯ ಮಾಡಲು ಅವಕಾಶ ಮಾಡಿದ ತಾಯಿಗೆ ಶಿಕ್ಷೆ ಪ್ರಕಟ; ಕೋರ್ಟ್ ನೀಡಿದ ಶಿಕ್ಷೆಯಾದರೂ ಏನು ಗೊತ್ತೇ?
Rape on Child: ತಾನೇ ಹೆತ್ತು, ಹೊತ್ತು ಸಾಕಿದ ಮಗಳ ಮೇಲೆ ತಾಯಿಯೋರ್ವಳು, ತನ್ನ ಪ್ರಿಯತಮನಿಂದ ಅತ್ಯಾಚಾರ(Rape on Child) ಮಾಡಲು ಅವಕಾಶ ಮಾಡಿಕೊಟ್ಟ ಕೆಲಸಕ್ಕೆ ನ್ಯಾಯಾಲಯವು ಇದೀಗ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಂತಹ ಒಂದು ಘಟನೆ ನಡೆದಿರುವುದು ಕೇರಳದಲ್ಲಿ.
2018-19ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಸ್ಪೆಷಲ್ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವು ಮಹಿಳೆಗೆ 40 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ವಿಧಿಸಲು ಮಹಿಳೆಯ ವಿಫಲವಾದರೆ ಆರು ತಿಂಗಳು ಜೈಲುವಾಸ ಮಾಡಬೇಕು ಎಂದು ನ್ಯಾಯಾಲಯವು ಆದೇಶ ನೀಡಿದೆ. ಓರ್ವ ತಾಯಿ ತನ್ನ ಮಕ್ಕಳನ್ನು ರಕ್ಷಿಸಬೇಕು. ಇಂತಹ ಪ್ರಕರಣಗಳು ತಾಯ್ತನಕ್ಕೇ ಕಳಂಕ ಎಂದು ನ್ಯಾಯಾಲವು ಬೇಸರ ವ್ಯಕ್ತಪಡಿಸಿದೆ.
ಕೇರಳದ ಈ ಮಹಿಳೆಯ ಪತಿ ಮಾನಸಿಕ ಅಸ್ವಸ್ಥನಾಗಿದ್ದ. ಇದರಿಂದ ಈ ಮಹಿಳೆ ಆತನನ್ನು ಬಿಟ್ಟು ಶಿಶುಪಾಲನ್ ಎಂಬಾತನ ಜೊತೆ ವಾಸಿಸುತ್ತಿದ್ದಳು. ಈಕೆ ತನ್ನ ಪ್ರಿಯಕರ ಶಿಶುಪಾಲನ್ ಜೊತೆ ವಾಸಿಸುತ್ತಿರುವ ಸಂದರ್ಭದಲ್ಲಿ ತನ್ನ ಏಳು ವರ್ಷದ ಮಗಳನ್ನು ಕೂಡಾ ಕರೆದುಕೊಂಡು ಹೋಗಿದ್ದಳು. ತಾಯಿಯ ಮೇಲೆ ಕಣ್ಣಾಕ್ಕಿದ್ದ ಶಿಶುಪಾಲನ್ ಆಕೆಯ ಮಗಳ ಮೇಲೆ ಕಣ್ಣು ಹಾಕಿದ್ದ. ಇದನ್ನು ಗಮನಿಸಿಯೂ ಮಹಿಳೆ ಸುಮ್ಮನಿದ್ದು, ಮಗಳ ಮೇಲೆ ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಳೆ. ಹಲವು ಬಾರಿ ಆತ ಅತ್ಯಾಚಾರ ಮಾಡಿದರೂ ಈ ಪಾಪಿ ಮಹಿಳೆ ಸುಮ್ಮನಿದ್ದಳು.
ಇದನ್ನು ಓದಿ: UPI Payment ನಿಯಮದಲ್ಲಿ ಮಹತ್ವದ ಬದಲಾವಣೆ ! ಇನ್ನು ಇಷ್ಟು ಹಣ ಮಾತ್ರ ವರ್ಗಾವಣೆ ಸಾಧ್ಯ !!
ಈ ಮಹಿಳೆಗೆ 11 ವರ್ಷದ ಇನ್ನೋರ್ವ ಮಗಳಿದ್ದಾಳೆ. ಆಕೆ ಅಜ್ಜಿ ಮನೆಯಲ್ಲಿದ್ದಳು. ಅದೊಂದು ದಿನ ತಾಯಿಯ ಮನೆಗೆ ಬಂದ ಈಕೆಯ ಮುಂದೆ ಏಳು ವರ್ಷದ ಬಾಲಕಿ ತನ್ನ ಮೇಲಾಗುತ್ತಿರುವ ಅತ್ಯಾಚಾರದ ಕುರಿತು ತಿಳಿಸಿದ್ದಾಳೆ. ಇದರಿಂದ ಭಯಗೊಂಡ ಈಕೆ ತಂಗಿಯನ್ನು ಕರೆದುಕೊಂಡು ಅಜ್ಜಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದ ಕೂಡಲೇ ಅಜ್ಜಿಗೆ ತನ್ನ ತಾಯಿ ಮಾಡಿದ ನೀಚ ಕೆಲಸವನ್ನು ಹೇಳಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇದರಿಂದ ಮಹಿಳೆಯ ನೀಚ ಕೆಲಸ ಬಯಲಿಗೆ ಬಂದಿದೆ.
ಈ ಪಾಪಿ ತಾಯಿಯ ತನ್ನ ಮಗಳ ಮೇಲೆ ಒಬ್ಬನಿಂದ ಇಬ್ಬರು ಗೆಳೆಯರಿಂದ ಅತ್ಯಾಚಾರ ಮಾಡಲು ಬಿಟ್ಟಿದ್ದಾಳೆ ಆಮೇಲೆ ತಿಳಿದು ಬಂದಿದೆ. ಮೊದಲ ಪ್ರಕರಣ ಬಯಲಾದ ನಂತರ ಶಿಶುಪಾಲನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಾದ ನಂತರ ಈಕೆ ಮತ್ತೋರ್ವ ಗೆಳಯನ ಜೊತೆ ಸಂಬಂಧವಿರಿಸಿದ್ದಳು. ಆತನೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: Mangaluru: ಸ್ಕೂಟರ್‌ನಲ್ಲಿ ಭಿನ್ನಕೋಮಿನ ಸಹದ್ಯೋಗಿ ಜೋಡಿ ಪಯಣ; ತಡೆದ ಬಜರಂಗದಳ ಕಾರ್ಯಕರ್ತರು- ಮುಂದೇನಾಯ್ತು?