ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kerala: ಮೋದಿ ಭೇಟಿ ನೀಡಲಿರುವ ಕೇರಳದ ರಾಮ ಮಂದಿರದ ವಿಶೇಷತೆ ಏನು ಗೊತ್ತಾ??

05:08 PM Jan 16, 2024 IST | ಅಶ್ವಿನಿ ಹೆಬ್ಬಾರ್
UpdateAt: 05:10 PM Jan 16, 2024 IST
Advertisement

Kerala: ಪ್ರಧಾನಿ ನರೇಂದ್ರ ಮೋದಿಯವರು (Pm Narendra Modi)ಜನವರಿ 16 ರಿಂದ ಕೇರಳಕ್ಕೆ(Kerala)ಭೇಟಿ ನೀಡಲಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯನ್ನು ಗಮನದಲ್ಲಿರಿಸಿಕೊಂಡು ಕೇರಳಕ್ಕೆ ಭೇಟಿ ನೀಡಲಿದ್ದು, ಈ ಎರಡು ದಿನಗಳಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ ಪ್ರದೇಶದ ಶ್ರೀರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Advertisement

 

ತ್ರಿಪ್ರಯಾರ್ ದೇವಾಲಯವು ಪೂರ್ವಾಭಿಮುಖವಾಗಿ ನಿಂತಿರುವ ಭಂಗಿಯಲ್ಲಿ ಶಂಖ, ಸುದರ್ಶನ ಚಕ್ರ, ಕೋಲು ಮತ್ತು ಜಪಮಾಲೆಯನ್ನು ಹಿಡಿದಿರುವ ಭಗವಂತನ ಆರು ಅಡಿ ಎತ್ತರದ ವಿಗ್ರಹವನ್ನು ಒಳಗೊಂಡಿದೆ. ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನರ ವಿಗ್ರಹಗಳನ್ನು ಸಮುದ್ರದಿಂದ ಹೊರತೆಗೆದು ಅದೇ ಸಮಯದಲ್ಲಿ ಗುಜರಾತ್‌ನ ದ್ವಾರಕಾದಲ್ಲಿ ಭಗವಾನ್ ಕೃಷ್ಣನು ಸ್ಥಾಪಿಸಿದ ಎಂಬ ನಂಬಿಕೆಯಿದೆ.

Advertisement

 

ಕೇರಳದ ನಾಟಿಕಾ ಗ್ರಾಮದ ತ್ರಿಪ್ರಯಾರ್ ಪ್ರದೇಶದ ಶ್ರೀ ರಾಮಸ್ವಾಮಿ ದೇವಾಲಯವು ಕೇರಳ ಸರ್ಕಾರವು ನೇಮಿಸಿದ ಸಾಮಾಜಿಕ-ಧಾರ್ಮಿಕ ಟ್ರಸ್ಟ್ ಕೊಚ್ಚಿನ್ ದೇವಸ್ವಂ ಬೋರ್ಡ್‌ನ ನಿಯಂತ್ರಣದಲ್ಲಿದೆ. ಈ ದೇವಾಲಯ ಗುರುವಾಯೂರಿನಿಂದ ಸುಮಾರು 22 ಕಿಮೀ ಮತ್ತು ಕೊಚ್ಚಿ ವಿಮಾನ ನಿಲ್ದಾಣದಿಂದ 60 ಕಿಮೀ ದೂರದಲ್ಲಿದೆ. ವರದಿಗಳ ಅನುಸಾರ,ಪ್ರಧಾನ ಅರ್ಚಕ ತರನೆಲ್ಲೂರು ಪಡಿಂಜರೆ ಮನ ಪದ್ಮನಾಭನ್ ನಂಬೂತಿರಿಪಾಡ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ದೇವಸ್ಥಾನದಲ್ಲಿ ರಾಮನ ವಿಗ್ರಹವನ್ನು ಪೂಜಿಸಲಾಗುತ್ತದೆ.

Related News

Advertisement
Advertisement