For the best experience, open
https://m.hosakannada.com
on your mobile browser.
Advertisement

Kerala Doctor Couple death: ಅರುಣಾಚಲದ ಹೋಟೆಲ್‌ನಲ್ಲಿ ಕೇರಳದ ವೈದ್ಯ ದಂಪತಿ, ಮಹಿಳೆ ನಿಗೂಢ ಸಾವು

Kerala Doctor Couple death: ಝಿರೋ ಎಂಬಲ್ಲಿನ ಹೋಟೆಲ್‌ವೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕೇರಳದ ಮೂವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ
11:38 AM Apr 03, 2024 IST | ಸುದರ್ಶನ್
UpdateAt: 11:47 AM Apr 03, 2024 IST
kerala doctor couple death  ಅರುಣಾಚಲದ ಹೋಟೆಲ್‌ನಲ್ಲಿ ಕೇರಳದ ವೈದ್ಯ ದಂಪತಿ  ಮಹಿಳೆ ನಿಗೂಢ ಸಾವು
Advertisement

Arunachal Pradesh: ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ಝಿರೋ ಎಂಬಲ್ಲಿನ ಹೋಟೆಲ್‌ವೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಕೇರಳದ ಮೂವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇರಳದ ಕೊಟ್ಟಾಯಂ ಮೂಲದ ನವೀನ್ ಥಾಮಸ್ (39) ಅವರು ಮಾರ್ಚ್ 28 ರಂದು ತಮ್ಮ ಪತ್ನಿ ತಿರುವನಂತಪುರಂ ನಿವಾಸಿ ದೇವಿ ಬಿ (39) ಮತ್ತು ಅವರ ಸ್ನೇಹಿತೆ ಆರ್ಯ ಬಿ ನಾಯರ್ (29) ಅವರೊಂದಿಗೆ ಹೋಟೆಲ್‌ಗೆ ತಂಗಲು ಬಂದಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

Advertisement

ಇದನ್ನೂ ಓದಿ: Arvind Kejriwal: ಬಂಧನದ ನಂತರ 4.5 ಕೆಜಿ ತೂಕ ಕಳೆದುಕೊಂಡ ಕೇಜ್ರಿವಾಲ್ : ಅಸಲಿಗೆ ಕೇಜ್ರಿವಾಲ್ ಅವರಿಗೆ ಏನಾಗಿದೆ?

ಏಪ್ರಿಲ್ 1 ರಿಂದ ಅತಿಥಿಗಳು ಹೊರಗಡೆ ಬಂದಿಲ್ಲದ ಕಾರಣ ಹೋಟೆಲ್ ಸಿಬ್ಬಂದಿ ಮಂಗಳವಾರ ಬೆಳಗ್ಗೆ ಅನುಮಾನಗೊಂಡು ಇವರುಗಳು ತಂಗಿದ್ದ ಕೊಠಡಿಯನ್ನು ಪರಿಶೀಲಿಸಿದಾಗ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ನಂತರ ಸಿಬ್ಬಂದಿಯು ಕೋಣೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾರ ಎಲ್ಲರೂ ಸತ್ತು ಬಿದ್ದಿರುವುದು ಅಲ್ಲಿ ಕಂಡು ಬಂದಿದೆ.

Advertisement

ಇದನ್ನೂ ಓದಿ: Reserve Bank Of India: RBI ಹಣದ ವ್ಯವಹಾರದ ಜೊತೆಗೆ ಈ ಕೆಲಸದಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ; ಯಾವುದೆಲ್ಲ?

ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಕೊಠಡಿಯೊಳಗೆ ಬಂದಿದ್ದು, ಮೂವರೂ ಶವವಾಗಿ ಪತ್ತೆಯಾಗಿದ್ದಾರೆ. ಮೃತ ನವೀನ್ ಥಾಮಸ್ ಮತ್ತು ದೇವಿ ಬಿ ಪತಿ-ಪತ್ನಿಯಾಗಿದ್ದರು. ಪಿಟಿಸಿ ಬಂದೇರ್‌ದೇವಾ ಅವರ ವಿಧಿವಿಜ್ಞಾನ ತಜ್ಞರ ನೆರವಿನೊಂದಿಗೆ ಪೊಲೀಸ್ ತಂಡವು ಹೋಟೆಲ್ ಕೋಣೆಯಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಶೋಧಿಸಿ ವಶಪಡಿಸಿಕೊಂಡಿದೆ.

ನಾಯರ್ ಅವರ ದೇಹವು ಹಾಸಿಗೆಯ ಮೇಲಿದ್ದು, ಅವರ ಮಣಿಕಟ್ಟುಗಳನ್ನು ಬ್ಲೇಡ್‌ನಿಂದ ಕತ್ತರಿಸಿದ್ದರೆ, ದೇವಿ ಬಿ ಅವರ ದೇಹವು ನೆಲದ ಮೇಲೆ ಮಲಗಿತ್ತು ಮತ್ತು ಅವರ ಕುತ್ತಿಗೆಯ ಮೇಲೆ ಮತ್ತು ಮಣಿಕಟ್ಟಿನ ಬಲಭಾಗದಲ್ಲಿ ಕತ್ತರಿಸಿದ ಗುರುತುಗಳಿವೆ.

ಬುಧವಾರದಂದು ಮರಣೋತ್ತರ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ನಿಗೂಢ ಘಟನೆಯನ್ನು ಎಲ್ಲಾ ಸಂಭಾವ್ಯ ಅಂಶಗಳನ್ನು ಪರಿಗಣಿಸಿ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ನಾಯರ್ ವಿರುದ್ಧ ತಿರುವನಂತಪುರಂನಲ್ಲಿ ನಾಪತ್ತೆಯಾಗಿರುವ ಎಫ್‌ಐಆರ್ ದಾಖಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನವೀನ್‌ ಥಾಮಸ್‌ ಹಾಗೂ ದೇವಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾಗಿದ್ದರು. ಆರ್ಯ ಬಿ ನಾಯರ್‌ ತಿರುವನಂತಪುರ ನಿವಾಸಿ ಹಾಗೂ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಸಾವು ಮಾಟಮಂತ್ರದಿಂದಾಗಿ ನಡೆದಿದೆ ಎಂಬ ಊಹಾಪೋಹಾ ಹಬ್ಬಿದ್ದು, ಸದ್ಯಕ್ಕೆ ಏನನ್ನೂ ಹೇಳಲಾಗದು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮೃತರ ನಡವಳಿಗೆ ವಿಲಕ್ಷಣವಾಗಿತ್ತು ಎಂದು ವರದಿಯಾಗಿದೆ.

Advertisement
Advertisement
Advertisement