For the best experience, open
https://m.hosakannada.com
on your mobile browser.
Advertisement

KAS Exam Time Table: ಅಭ್ಯರ್ಥಿಗಳೇ ಗಮನಿಸಿ - 384 ಕೆಎಎಸ್ ಹುದ್ದೆಗಳ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ ಪ್ರಕಟ

08:09 AM Jul 05, 2024 IST | ಸುದರ್ಶನ್
UpdateAt: 08:09 AM Jul 05, 2024 IST
kas exam time table  ಅಭ್ಯರ್ಥಿಗಳೇ ಗಮನಿಸಿ   384 ಕೆಎಎಸ್ ಹುದ್ದೆಗಳ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ ಪ್ರಕಟ

KAS Exam Time Table: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕೆಪಿಎಸ್‌ಸಿ ಕೆಎಎಸ್‌(KAS Exam Time Table) ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ವೇಳಾಪಟ್ಟಿ ಇಲ್ಲಿ ಚೆಕ್‌ ಮಾಡಿಕೊಳ್ಳಿ.

Advertisement

BCCI: T20 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾ – ಆಟಗಾರರಿಗೆ 125 ಕೋಟಿ ರೂ ಚೆಕ್ ನೀಡಿದ ಬಿಸಿಸಿಐ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು, ತಹಸೀಲ್ದಾರ್, ಡಿವೈಎಸ್ಪಿ ಸೇರಿದಂತೆ 159 ‘ಗ್ರೂಪ್ ಎ’ ಹುದ್ದೆಗಳು ಮತ್ತು 225 ‘ಗ್ರೂಪ್ ಬಿ’ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ 77 ಹುದ್ದೆಗಳು ಸೇರಿ ಒಟ್ಟು 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಮಾರ್ಚ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಆ.28ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

Advertisement

ಪರೀಕ್ಷೆ ಅವಧಿ:
25-08-2024ರ ಭಾನುವಾರ ಬೆಳಗ್ಗೆ 10ರಿಂದ 12 ಗಂಟೆವೆರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ ಪತ್ರಿಕೆ-2ರ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕರ್ನಾಟಕ ಲೋಕಸ ಸೇವಾ ಆಯೋಗದಿಂದ ಮಾಹಿತಿ ನೀಡಲಾಗಿದೆ.

ಕೆಎಎಸ್‌ ಪರೀಕ್ಷೆ ಮಾದರಿ
ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯಲ್ಲಿ ಮುಖ್ಯವಾಗಿ 3 ಹಂತದ ಪರೀಕ್ಷೆಗಳು ಇರುತ್ತವೆ.
ಪೂರ್ವಭಾವಿ ಪರೀಕ್ಷೆ : ತಲಾ 200 ಅಂಕಗಳ 2 ಪತ್ರಿಕೆಗಳಿದ್ದು, 400 ಅಂಕಗಳಿಗೆ ಪರೀಕ್ಷೆ
ಮುಖ್ಯ ಪರೀಕ್ಷೆ: ಕಡ್ಡಾಯ ಪತ್ರಿಕೆಗಳು 2, ಐಚ್ಛಿಕ ಪತ್ರಿಕೆಗಳು 5.
ವ್ಯಕ್ತಿತ್ವ ಪರೀಕ್ಷೆ : 50 ಅಂಕಗಳಿಗೆ

Sumalatha Ambarish: ದರ್ಶನ್ ಕೊಲೆಗೈದ ಆರೋಪ ವಿಚಾರ- ಕೊನೆಗೂ ಸುದೀರ್ಘ ಪತ್ರದ ಮೂಲಕ ಮೌನ ಮುರಿದ ಸುಮಲತಾ !!

Advertisement
Advertisement
Advertisement