Karnataka weather Update: ಬೆಂಗಳೂರಿನಲ್ಲಿ ಕುದಿ ಏಳುತ್ತಿರುವ ಹವೆ: ಬೆಳಗಾವಿಯಲ್ಲಿ ಬಿಸಿಲ ಮಧ್ಯೆ ತುಂತುರು ಮಳೆಯ ಸಂಭವ !
Karnataka weather update: ರಾಜ್ಯದಲ್ಲಿ ಬಿಸಿಲಿನ ಕುದಿ ದಿನದಿಂದ ದಿನಕ್ಕೆ ಏರು ಗತಿಯಲ್ಲಿದ್ದು ನಿನ್ನೆ ಗರಿಷ್ಠ ತಾಪಮಾನ ದಾಖಲಾಗಿದೆ. ಇಂದು ಸಹ ಅದೇ ಸನ್ನಿವೇಶ ಇರಲಿದ್ದು, ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ IMD ಮಳೆಯ ಮುನ್ಸೂಚನೆ ನೀಡಿದ್ದು, ಬೆಳಗಾವಿಯಲ್ಲಿ ಬಿಸಿಲಿನ ಜತೆ ಸರಸಕ್ಕೆ ಬರುವಂತೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಕುದಿ ಏಳುತ್ತಿರುವ ಹವೆ: ಬೆಳಗಾವಿಯಲ್ಲಿ ಬಿಸಿಲ ಮಧ್ಯೆ ತುಂತುರು ಮಳೆಯ ಸಂಭವ !
ನಿನ್ನೆ ಬೆಂಗಳೂರಿನಲ್ಲಿ ಕಳೆದ 5 ವರ್ಷಗಳಲ್ಲಿ ಮಾರ್ಚ್ ತಿಂಗಳಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ದಾಖಲಾದ ತಾಪಮಾನ ಹೋಲಿಸಿದರೆ ಇದು 3 ನೇ ಅತಿ ಹೆಚ್ಚು ಉಷ್ಣಾಂಶ. ಇನ್ನು ಕಳೆದ 15 ವರ್ಷಗಳಲ್ಲಿ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಇದು 4 ನೇ ಅತಿ ಹೆಚ್ಚು. HAL ವಿಮಾನ ನಿಲ್ದಾಣದ ಇತಿಹಾಸದಲ್ಲಿ 6 ನೇ ಅತಿ ಹೆಚ್ಚು: 35.5 ° C ( 1.7 ° C) ದಾಖಲಾಗಿದೆ. ಅದೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 36.4°C ( 2°C) ದಾಖಲಾಗಿತ್ತು. 2017 ಮತ್ತು 2019 ರಲ್ಲಿ 37°C ಉಷ್ಣಾಂಶ ದಾಖಲಾಗಿತ್ತು. 29 ನೇ ಮಾರ್ಚ್ 1996 ರಂದು ಇಲ್ಲಿಯತನಕ ದಾಖಲಾದ ಅತ್ಯಂತ ಉಷ್ಣಾಂಶವಾಗಿದ್ದು,ಅಂದು 37.3°C ದಾಖಲಾಗಿತ್ತು.
ಇದನ್ನೂ ಓದಿ: Crime: ತನ್ನ ನಾಲ್ಕು ಜನ ಅಪ್ರಾಪ್ತ ಮಕ್ಕಳು ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪತಿ
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಮೇಲೆಯೇ ಇಂದೂ ಇರಲಿದ್ದು, ದಾಖಲಾಗಿ ವಾತಾವರಣದ ಉಷ್ಣಾಂಶ ದಾಖಲೆ ಸ್ಥಾಪಿಸುತ್ತಿದೆ. ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಬಿಸಿಲು ಅಧಿಕವಾಗಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೀಟ್ ವೇವ್ಸ್ ಜೋರಾಗಿದೆ. ಇದಕ್ಕೆ ಮುಖ್ಯ ಕಾರಣ ಮಳೆ ಕೊರತೆ ಮತ್ತು ಅಂತರ್ಜಲ ಕುಸಿತ ಎಂದು ಹವಾಮಾನ ಇಲಾಖೆ ತಿಳಿಸಿದೆ.