For the best experience, open
https://m.hosakannada.com
on your mobile browser.
Advertisement

Karnataka Weather: ಕಾದ ಇಳೆಗೆ ತಂಪೆರೆಯಲು ಬರ್ತಿದ್ದಾನೆ ವರುಣ; 9 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Karnataka Weather: ಇಂದು ವರುಣನ ಆಗಮನ ಹಲವೆಡೆ ಆಗಮಿಸಲಿದೆ. ಉತ್ತರಕನ್ನಡ, ಚಿಕ್ಕಮಗಳೂರು ಸೇರಿ ಕರ್ನಾಟಕದ 9 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
09:08 AM Apr 09, 2024 IST | ಮಲ್ಲಿಕಾ ಪುತ್ರನ್
UpdateAt: 09:54 AM Apr 09, 2024 IST
karnataka weather  ಕಾದ ಇಳೆಗೆ ತಂಪೆರೆಯಲು ಬರ್ತಿದ್ದಾನೆ ವರುಣ  9  ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
Image Credit Source: Adobe Stock

Karnataka Weather: ಇಂದು ಯುಗಾದಿ ಹಬ್ಬ. ಈ ಖುಷಿಯ ಸಂದರ್ಭದಲ್ಲಿ ಇಂದು ವರುಣನ ಆಗಮನ ಹಲವೆಡೆ ಆಗಮಿಸಲಿದೆ. ಉತ್ತರಕನ್ನಡ, ಚಿಕ್ಕಮಗಳೂರು ಸೇರಿ ಕರ್ನಾಟಕದ 9 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಯೆಲ್ಲೋ ಅಲರ್ಟ್‌ ಉತ್ತರ ಕನ್ನಡಕ್ಕೆ ಹವಾಮಾನ ಇಲಾಖೆ ಘೋಷಣೆ ಮಾಡಿದ್ದು, ಬಳ್ಳಾರಿ, ಯಾದಗಿರಿ, ರಾಯಚೂರು, ಕಲಬುರಗಿ, ಬಾಗಲಕೋಟೆಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಎಪ್ರಿಲ್‌ 13 ರಿಂದ ಮಳೆ ಪ್ರಾರಂಭವಾಗಲಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ವಿಜಯನಗರದಲ್ಲಿ ಮೂರು ದಿನ ಭರ್ಜರಿ ಮಳೆಯಾಗಲಿದೆ.

Advertisement

ಇದನ್ನೂ ಓದಿ: Mangaluru: ದಕ್ಷಿಣ ಕನ್ನಡ; ಕೋಮುದ್ವೇಷದಿಂದ ನಡೆದ ಎರಡು ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಆರೋಪ ಸಾಬೀತು

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಮತ್ತೆ ಬಿಸಿಯ ವಾತಾವರಣವಿರಲಿದೆ. ತಾಪಮಾನದಲ್ಲಿ 2ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ.

ಇದನ್ನೂ ಓದಿ:  Ashwini Punith Rajkumar: ಅವಹೇಳನಕಾರಿ ಪೋಸ್ಟ್ ವಿಚಾರ- ಕೊನೆಗೂ ಮೌನ ಮುರಿದ ಅಶ್ವಿನಿ ಪುನೀತ್ ರಾಜ್ ಕುಮಾರ್

Advertisement
Advertisement