For the best experience, open
https://m.hosakannada.com
on your mobile browser.
Advertisement

Karnataka Weather: ರಾಜ್ಯದಲ್ಲಿ ಇಂದು ಈ ಭಾಗಗಳಲ್ಲಿ ಭಾರೀ ಮಳೆ !!

Karnataka Weather: ಬಿಸಿಲ ಬೇಗೆಗೆ ಬೆಂದ ರಾಜ್ಯಕ್ಕೆ ವರುಣನ ಸಿಂಚನ ಆಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ
12:31 PM May 08, 2024 IST | ಸುದರ್ಶನ್
UpdateAt: 12:33 PM May 08, 2024 IST
karnataka weather  ರಾಜ್ಯದಲ್ಲಿ ಇಂದು ಈ ಭಾಗಗಳಲ್ಲಿ ಭಾರೀ ಮಳೆ

Karnataka Weather: ಬಿಸಿಲ ಬೇಗೆಗೆ ಬೆಂದ ರಾಜ್ಯಕ್ಕೆ ವರುಣನ ಸಿಂಚನ ಆಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಕೆಲ ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇದೀಗ ಹವಾಮಾನ ಇಲಾಖೆಯಿಂದ ಖುಷಿಯ ವಿಚಾರ ಹೊರಬಿದ್ದಿದ್ದು ರಾಜ್ಯದ ಈ ಭಾಗಗಳಲ್ಲಿ ಭಾರೀ ಮಳೆ ಆಗುತ್ತದೆ ಎಂದು ಹೇಳಿದೆ.

Advertisement

ಇದನ್ನೂ ಓದಿ: Ramya Krishna: ಹೀರೋಯಿನ್ ಆಗಬೇಕು ಅಂದರೆ ಎಲ್ಲವನ್ನು ಮತ್ತು ಎಲ್ಲರನ್ನೂ ಒಪ್ಪಿಕೊಂಡು ಸಹಿಸಿಕೊಳ್ಳಲೇಬೇಕು: ರಮ್ಯಾ ಕೃಷ್ಣ ಅಚ್ಚರಿ ಸ್ಟೇಟ್ಮೆಂಟ್

ಹೌದು, ಇಂದು ಸಿಲಿಕಾನ್ ಸಿಟಿ ಬೆಂಗಳೂರು ( Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Advertisement

ಇದನ್ನೂ ಓದಿ: IPL-2024: ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ : ಸ್ಯಾಟ್ಸನ್ ಇನ್ನಿಂಗ್ಸ್ ವ್ಯರ್ಥ

ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿದ್ದು, ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ತಂಪಾದ, ಮೋಡ ಕವಿದ ವಾತಾವರಣ ಇದ್ದು, ವರುಣಾಗಮನದ ಮುನ್ಸೂಚನೆ ಇದೆ ಎನ್ನಲಾಗಿದೆ.

Advertisement
Advertisement