ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Karnataka SSLC and Second Puc Exam: SSLC, 2nd PUC ಪರೀಕ್ಷೆಯ ವೇಳಾಪಟ್ಟಿ ಪ್ರಕಟ - ಇಲ್ಲಿದೆ ನೋಡಿ ಟೈಮ್ ಟೇಬಲ್

03:24 PM Dec 01, 2023 IST | ಅಶ್ವಿನಿ ಹೆಬ್ಬಾರ್
UpdateAt: 04:08 PM Dec 01, 2023 IST
Advertisement

Karnataka SSLC & 2nd PUC Time Table: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023-24 ನೇ ಸಾಲಿನ SSLC ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೂ ಎಸ್ಎಸ್‌ಎಲ್‌ಸಿ ಪರೀಕ್ಷೆ (SSLC Exam)ನಡೆಯಲಿದೆ. ದ್ವಿತೀಯ ಪಿಯುಸಿ ಮಾರ್ಚ್ 2, 2024ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಮಾರ್ಚ್ 22,2024ರವರೆಗೆ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ ಇನ್ನು ಮೂರು ತಿಂಗಳು ಮುಂಚಿತವಾಗಿ 2023-24 ನೇ ಸಾಲಿನ ವಾರ್ಷಿಕ ಪರೀಕ್ಷೆ -1ರ ತಾತ್ಕಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ವೇಳಾಪಟ್ಟಿ ಕುರಿತು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪೋಷಕರ ಆಕ್ಷೇಪಣೆಗೆ ಡಿಸೆಂಬರ್ 1 ರಿಂದ 15 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಆಕ್ಷೇಪಣೆಯನ್ನು ಮಂಡಳಿಯ ಇ-ಮೇಳ್ ವಿಳಾಸ chairpersonkseab@gmail.com ಕ್ಕೆ ಕಳುಹಿಸಬಹುದು. ಇದರ ಜೊತೆಗೆ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ವಿಳಾಸಕ್ಕೆ ಕಳುಹಿಸಬಹುದು. ನಿಗದಿಪಡಿಸಿರುವ ಕೊನೆಯ ದಿನಾಂಕದ ಬಳಿಕ ಬರುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟವಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ವೇಳಾಪಟ್ಟಿ ಇಂತಿದೆ:
ಎಸ್‍ಎಸ್‍ಎಲ್‍ಸಿ:
# ಮಾರ್ಚ್ 25- ಪ್ರಥಮ ಭಾಷೆ (ಕನ್ನಡ)
# ಮಾರ್ಚ್ 27- ಸಮಾಜ ವಿಜ್ಞಾನ
# ಮಾರ್ಚ್ 30- ವಿಜ್ಞಾನ
# ಏಪ್ರಿಲ್ 2- ಗಣಿತ
# ಏಪ್ರಿಲ್ 4- ತೃತೀಯ ಭಾಷೆ (ಹಿಂದಿ)
# ಏಪ್ರಿಲ್ 6- ದ್ವೀತಿಯ ಭಾಷೆ (ಇಂಗ್ಲಿಷ್)

ದ್ವಿತೀಯ ಪಿಯುಸಿ:
# ಮಾರ್ಚ್ 2- ಕನ್ನಡ, ಅರೇಬಿಕ್
# ಮಾರ್ಚ್ 4- ಇತಿಹಾಸ, ಭೌತಶಾಸ್ತ್ರ
# ಮಾರ್ಚ್ 5- ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್
# ಮಾರ್ಚ್ 6- ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
# ಮಾರ್ಚ್ 7- ಹಿಂದಿ
# ಮಾರ್ಚ್ 9- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
# ಮಾರ್ಚ್ 12- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
# ಮಾರ್ಚ್ 13- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
# ಮಾರ್ಚ್ 14- ಗಣಿತ, ಶಿಕ್ಷಣಶಾಸ್ತ್ರ
# ಮಾರ್ಚ್ 16- ಭೂಗೋಳಶಾಸ್ತ್ರ, ಜೀವಶಾಸ್ತ್ರ
# ಮಾರ್ಚ್ 18- ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ, ಹಿಂದೂಸ್ಥಾನಿ ಸಂಗೀತ
# ಮಾರ್ಚ್ 20- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
# ಮಾರ್ಚ್ 22- ಅರ್ಥಶಾಸ್ತ್ರ

ಇದನ್ನು ಓದಿ: Flipkart iphone Sale: Flipkart ನಲ್ಲಿ ಬಂಪರ್ ಆಫರ್- ಕೇವಲ 12,000, 26,000 ಕ್ಕೆ ಸಿಗ್ತಿದೆ ಐಫೋನ್ಸ್ !! ಜಾಸ್ತಿ ಟೈಮಿಲ್ಲ, ಈಗ್ಲೇ ಬುಕ್ ಮಾಡಿ

 

Related News

Advertisement
Advertisement