For the best experience, open
https://m.hosakannada.com
on your mobile browser.
Advertisement

Dr Bro: ಖ್ಯಾತ ಯೂಟ್ಯೂಬರ್ ಡಾ. ಬ್ರೋ ನಾಪತ್ತೆ ?

08:51 AM Dec 11, 2023 IST | ಹೊಸ ಕನ್ನಡ
UpdateAt: 08:51 AM Dec 11, 2023 IST
dr bro  ಖ್ಯಾತ ಯೂಟ್ಯೂಬರ್ ಡಾ  ಬ್ರೋ ನಾಪತ್ತೆ
Advertisement

Dr Bro: ದೇಶ ದೇಶಗಳನ್ನು ಸುತ್ತುತ್ತ, ಅಚ್ಚಗನ್ನಡದಿಂದಲೇ ಎಲ್ಲವನ್ನೂ ಪರಿಚಯಿಸುತ್ತಾ, ಪ್ರತಿಯೊಬ್ಬರನ್ನೂ ರಂಜಿಸುತ್ತ 'ನಮಸ್ಕಾರ ದೇವ್ರೂ' ಎನ್ನುತ್ತ ಕನ್ನಡಿಗರ ಮನ ಗೆದ್ದಿರೋ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ ಬ್ರೋ(Dr Bro) ಅವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಭಾರೀ ಸುದ್ದಿಯಾಗುತ್ತಿದೆ.

Advertisement

ಹೌದು, ದೇಶ ಪರ್ಯಟನೆ ಮಾಡುತ್ತಾ ದಿನಕ್ಕೊಂದು, ವಾರಕ್ಕೆರಡು ವಿಡಿಯೋಗಳನ್ನು ಯೂಟ್ಯೂಬ್ ಗಳಿಗೆ ಹರಿಬಿಡುತ್ತಾ ಎಲ್ಲರ ಕುತೂಹಲ ತಣಿಸುತ್ತಿದ್ದ ಡಾ ಬ್ರೋ ಒಂದು ತಿಂಗಳಿಂದ ತಮ್ಮ ಯೂಟ್ಯೂಬ್ ಗೆ ಯಾವುದೇ ವಿಡಿಯೋಗಳನ್ನು ಅಪ್ಲೋಡ್ ಮಾಡಿಲ್ಲ. ಅಲ್ಲದೆ ಇತರ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಸಕ್ರಿಯತೆಯೂ ಕಂಡು ಬಂದಿಲ್ಲ. ಹೀಗಾಗಿ ನಮ್ಮ ಪ್ರೀತಿಯ ಡಾ. ಬ್ರೋಗೆ ಏನಾಯ್ತು ಎಂದು ಅಭಿಮಾನಿಗಳ ವಲಯದಲ್ಲಿ ಆತಂಕ ಶುರುವಾಗಿದೆ.

ಅಲ್ಲದೆ ಕೆಲವು ಖಾಸಗೀ ಮಾಧ್ಯಮಗಳು ಕೂಡ ಇದನ್ನು ಭಿತ್ತರಿಸಿದ್ದು ಡಾ ಬ್ರೋ ತಿಂಗಳಿಂದ ವಿಡಿಯೋ ಅಪ್ಲೋಡ್ ಮಾಡಿಲ್ಲ ಎಂದು ಕಳವಳವ್ಯಕ್ತಪಡಿಸಿವೆ. ಕೆಲವರು ಈ ವಿಡಿಯೋಗಳನ್ನು ಇಟ್ಟುಕೊಂಡು ಚೀನಾದವರು ಏನೋ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಯಾಕೆಂದರೆ ಬ್ರೋ ಅವರು ಕೊನೆಯದಾಗಿ ಚೀನಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು.

Advertisement

ಆದರೆ ಈ ಕುರಿತು ಯಾವುದೇ ಸ್ಪಷ್ಟೀಕರಣ ಇಲ್ಲ. ಕೆಲವರು ಇದು ಊಹಾಪೂಹ, ಡಾ ಬ್ರೋಗೆ ಏನೂ ಆಗಿಲ್ಲ, ಹುಷಾರಾಗಿದ್ದಾರೆ ಎನ್ನುತ್ತಿದ್ದಾರೆ. ಆದರೂ ಕೂಡ ದಿನಂಪ್ರತಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಡಾ ಬ್ರೋ ತಿಂಗಳಾದರೂ ವಿಡಿಯೋ ಅಪ್ಲೋಡ್ ಮಾಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Bigg boss kannada: ಕನ್ನಡ ಬಿಗ್ ಬಾಸ್ ವಿರುದ್ಧ FIR ದಾಖಲು !! ಶೋನಿಂದ ಕಿಚ್ಚ ಸುದೀಪ್ ಹೊರಕ್ಕೆ ?!!

Advertisement
Advertisement
Advertisement