ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Parliment attack: ಪಾರ್ಲಿಮೆಂಟ್ ದಾಳಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಆರೋಪಿ ಮಂಪರು ಪರೀಕ್ಷೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!!

12:46 PM Jan 14, 2024 IST | ಹೊಸ ಕನ್ನಡ
UpdateAt: 12:47 PM Jan 14, 2024 IST
Advertisement

Parliment attack: ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಲೋಕಸಭೆಯೊಳಗಿನ ಆಗಂತುಕರ ದಾಳಿಗೆ(Parliment attack) ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ದಾಳಿಯ ಮಾಸ್ಟರ್ ಮೈಂಡ್ ಆದ ಮನೋರಂಜನ್'ಗೆ ನಡೆಸಿದ ಮಂಪರು ಪರೀಕ್ಷೆಯಲ್ಲಿ ಸ್ಪೋಟಕ ಸತ್ಯವೊಂದು ಬಯಲಾಗಿದೆ.

Advertisement

ಹೌದು, ಸಂಸತ್'ನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಐವರು ಆರೋಪಿಗಳನ್ನು ಪಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ದೆಹಲಿಗೆ ಮರಳಿ ಕರೆತರಲಾಗಿದೆ. ಇದಾದ ಒಂದು ದಿನದ ನಂತರ, ಮನೋರಂಜನ್(Manoranjan) ಈ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಎನ್ನುವ ಸ್ಪೋಟಕ ಸತ್ಯ ಬಯಲಾಗಿದೆ.

ಇದನ್ನೂ ಓದಿ:Metro Offer: ಫ್ರೀ ಫ್ರೀ ಫ್ರೀ, ಮೆಟ್ರೋ ಕೂಡ ಉಚಿತ! ಗುಡ್ ನ್ಯೂಸ್ ಕೊಟ್ಟ ಮೆಟ್ರೋ ಸಂಸ್ಥೆ!

Advertisement

ಅಂದಹಾಗೆ ಪೊಲೀಸ್ ಮೂಲಗಳ ಪ್ರಕಾರ, ನೀಲಂ ಹೊರತುಪಡಿಸಿ ಉಳಿದ ಐವರನ್ನು ಪಾಲಿಗ್ರಾಫ್ ಪರೀಕ್ಷೆಗಾಗಿ ಡಿಸೆಂಬರ್ 8 ರಂದು ಗುಜರಾತ್ಗೆ ಕರೆದೊಯ್ಯಲಾಯಿತು. ನ್ಯಾಯಾಲಯದ ಮುಂದೆ ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲು ನೀಲಂ ಒಪ್ಪಿರಲಿಲ್ಲ. ಸಾಗರ್ ಮತ್ತು ಮನೋರಂಜನ್ ಹೆಚ್ಚುವರಿಯಾಗಿ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಗಾಗಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಇನ್ನು ಮುಂದಿನ ತನಿಖೆಯಿಂದ ಹಲವು ವಿಚಾರಗಳು ಬಯಲಾಗಬೇಕಿದೆ.

ಇದರೊಂದಿಗೆ ಈ ಆರೋಪಿಗಳೆಲ್ಲರೂ ನಿರುದ್ಯೋಗ, ಮಣಿಪುರ ಬಿಕ್ಕಟ್ಟು ಮತ್ತು ರೈತರ ಪ್ರತಿಭಟನೆಯ ಸಮಸ್ಯೆಗಳ ಬಗ್ಗೆ ಆರೋಪಿಗಳು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಡಿ.13 ರಂದು ಸಾಗ‌ರ್ ಶರ್ಮಾ ಮತ್ತು ಮನೋರಂಜನ್ ಸಂಸತ್‌ ಒಳಗೆ ಹಳದಿ ಸ್ಕೋಕ್ ಬಾಂಬ್ ಸಿಡಿಸಿದರೆ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಕೆಂಪು ಮತ್ತು ಹಳದಿ ಸ್ಕೋಕ್ ಬಾಂಬ್ ಸಿಡಿಸಿದ್ದರು. ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಮೂಲದವರು. ಲಲಿತ್ ಝಾ ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ಮೊಬೈಲ್ ಜೊತೆಗೆ ಅಲ್ಲಿಂದ ಪರಾರಿಯಾಗಿದ್ದ. ಮನೋರಂಜನ್, ಇತರರು ಸಂಸತ್ತಿನ ಒಳಗೆ ಹಾಗೂ ಹೊರಗೆ ಹೊಗೆಬಾಂಬ್ ಸಿಡಿಸಿ, ನಿರುದ್ಯೋಗ ಸಮಸ್ಯೆ, ಸರ್ವಾಧಿಕಾರತ್ವಕ್ಕೆ ಬೇಸತ್ತು ಹೀಗೆ ಮಾಡಿದ್ದಾಗಿ ಹೇಳಿದ್ದರು.

Advertisement
Advertisement