For the best experience, open
https://m.hosakannada.com
on your mobile browser.
Advertisement

D K Shivkumar-Mallikharjun Kharge: ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಮಲ್ಲಿಕಾರ್ಜುನ ಖರ್ಗೆ - ಕಾಂಗ್ರೆಸ್ ಅಧ್ಯಕ್ಷರು ಹೀಗೆ ಮಾಡಲು ಏನು ಕಾರಣ !!

10:36 PM Dec 12, 2023 IST | ಹೊಸ ಕನ್ನಡ
UpdateAt: 10:41 PM Dec 12, 2023 IST
d k shivkumar mallikharjun kharge  ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಮಲ್ಲಿಕಾರ್ಜುನ ಖರ್ಗೆ   ಕಾಂಗ್ರೆಸ್ ಅಧ್ಯಕ್ಷರು ಹೀಗೆ ಮಾಡಲು ಏನು ಕಾರಣ
Advertisement

D K Shivkumar-Mallikharjun Kharge: ಕರ್ನಾಟಕದಲ್ಲಿ ಕಾಂಗ್ರೆಸ್(Congress) ಅಧಿಕಾರ ಹಿಡಿಯಲು ಪ್ರಮುಖ ಕಾರಣೀಕರ್ತರು ಹಾಗೂ ಸದ್ಯ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjun Kharge) ಗರಂ ಆಗಿದ್ದಾರೆ.

Advertisement

ಹೌದು, ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಹಲವು ಪ್ರಮುಖ ವಿದೇಯಕಗಳು ಮಂಡನೆಯಾಗಿವೆ. ಈ ವೇಳೆ ರಾಜ್ಯಸಭೆಯಲ್ಲಿ(Rajyasabha) ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿ ವಿಚಾರವೂ ಸದ್ದು ಮಾಡಿದೆ. ಆಗ ಇದರ ಕುರಿತು ಚರ್ಚೆ ನಡೆಯುವಾಗ ಬಿಜೆಪಿ ಕಾಂಗ್ರೆಸ್ ನಡೆಸೋ ಜಾತಿಜಣತಿಗೆ ವಿರೋಧ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 'ವರದಿ ಬಿಡುಗಡೆಗೆ ಶಿವಕುಮಾರ್(D K Shivkumar) ವಿರೋಧಿಸುತ್ತಿದ್ದಾರೆ. ನೀವು (ಬಿಜೆಪಿ) ವಿರೋಧಿಸುತ್ತಿದ್ದೀರಿ. ಈ ವಿಷಯದಲ್ಲಿ ಪ್ರಬಲ ಜಾತಿಗಳ ಜನರೆಲ್ಲ ಒಗ್ಗಟ್ಟಾಗಿದ್ದಾರೆ. ಈ ವಿಷಯದಲ್ಲಿ ಪ್ರಬಲ ಜಾತಿಯ ಜನರು ಆಂತರಿಕವಾಗಿ ಒಗ್ಗಟ್ಟಾಗುತ್ತಾರೆ’ ಎಂದಿದ್ದು, ಬಿಜೆಪಿ ಜೊತೆಗೆ ತಮ್ಮ ಪಕ್ಷದ ಪ್ರಬಲ ನಾಯಕನನ್ನೂ ಜಾಡಿಸಿದ್ದಾರೆ.

ಅಂದಹಾಗೆ ಸ್ವಪಕ್ಷ ನಾಯಕ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರ ಹಿಡಿಯಲು ಪ್ರಮುಖ ಕಾರಣರಾದ ಡಿಕೆಶಿ ವಿರುದ್ಧವೇ ಮಲ್ಲಿಕಾರ್ಜುನ ಖರ್ಗೆ ಮಾತನಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

Advertisement

ಇದನ್ನು ಓದಿ: Money Tips: ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದೆಂಬ ಆಸೆಯೇ? ಇದೊಂದು ಹಾರ ಧರಿಸಿ, ಎಂದೂ ಆರ್ಥಿಕ ಸಮಸ್ಯೆ ತಪ್ಪಿಸಿ !!

ಡಿಕೆಶಿ ಮೇಲೆ ಖರ್ಗೆ ಗರಂ ಆಗಲು ಕಾರಣ?
ರಾಜ್ಯದಲ್ಲಿ ಕಾಂಗ್ರೆಸ್ ಜಾತಿಗಣತಿ ನಡೆಸಿ ವರದಿ ಸಿದ್ದಪಡಿಸಿದೆ. ಇದಕ್ಕೆ ಪ್ರಬಲ ಸಮುದಾಯಗಳು ವಿರೋಧಿಸಿ ಪತ್ರ ಬರೆದಿವೆ. ಅಂತೆಯೇ ಒಕ್ಕಲಿಗ ಸಮುದಾಯ ಕೂಡ ಇದನ್ನು ವಿರೋಧಿಸಿದೆ. ಇದಕ್ಕೆ ಬೆಂಬಲಿಸಿ ಡಿಕೆಶಿ ಅವರು ಸಹಿ ಮಾಡಿದ್ದಾರೆ. ಇದಕ್ಕಾಗಿ ಖರ್ಗೆ ಅವರು ಡಿಕೆಶಿ ವಿರುದ್ಧ ಗರಂ ಆಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು ನಮ್ಮ ಸಮುದಾಯದ ಮನವಿಗೆ ನಾನು ಸಹಿ ಮಾಡಬಾರದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಜಾತಿ ಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನನ್ನ ಅಭಿಮತ’ ಎಂದಿದ್ದಾರೆ.

Advertisement
Advertisement
Advertisement