ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Karnataka Politics: ರಾಜ್ಯದಲ್ಲಿ ಕಾಂಗ್ರೆಸ್'ಗೆ 20+ ಸ್ಥಾನ ?!

Karnataka Politics: ಲೋಕಸಭೆ ಚುನಾವಣೆಯಲ್ಲಿ 20+ ಸ್ಥಾನಗಳನ್ನು ಗೆಲ್ಲುವ ಜೊತೆಗೆ ಪರಿಷತ್‌ನಲ್ಲಿಯೂ ನಾವು ಹೆಚ್ಚು ಸ್ಥಾನ ಪಡೆಯಬೇಕು.
06:07 AM May 10, 2024 IST | ಸುದರ್ಶನ್
UpdateAt: 09:12 AM May 10, 2024 IST

Karnataka Politics: ದೇಶದಲ್ಲಿ ಲೋಕಸಭಾ ಚುನಾವಣೆ ಹಂತ ಹಂತವಾಗಿ ನೆರವೇರುತ್ತಿದೆ. ಇದೀಗ ಕರ್ನಾಟಕದಲ್ಲಿ ನಯಬೇಕಿದ್ದ ಎರಡು ಹಂತಗಳ ಚುನಾವಣೆಯು ಮುಕ್ತಾಯವಾಗಿದ್ದು ರಾಜ್ಯದ ನಾಯಕರು ರಿಲೀಫ್ ಮೂಡ್ ನಲ್ಲಿ ಇದ್ದಾರೆ. ಅಲ್ಲದೆ ಫಲಿತಾಂಶದ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ.

Advertisement

ಇದನ್ನೂ ಓದಿ: SSLC-Result 2023-24: SSLC ಪರೀಕ್ಷೆ ಪಾಸಾದರು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-02, ಪರೀಕ್ಷೆ-03 ಬರೆಯಲು ಅವಕಾಶ : ಉತ್ತರ ಪತ್ರಿಕೆ ಪಡೆಯಲು ಮೇ 14 ಕೊನೆಯ ದಿನ

ಲೋಕಸಭಾ ಚುನಾವಣೆಯೇನೋ(Parliament Election) ಮುಗಿಯಿತು. ಆದರೆ ಮುಂದೆ ನಡೆಯಬೇಕಿರುವ ವಿಧಾನ ಪರಿಷತ್ ಚುನಾವಣೆಯನ್ನು ಚುನಾವಣಾ ಆಯೋಗ(Election Commission) ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ತಯಾರಿಯನ್ನು ಮತ್ತೆ ಆರಂಭಿಸಬೇಕಿದೆ. ಆದರೆ ಈ ಮೊದಲೇ ಈ ಚುನಾವಣೆಯ ಲೆಕ್ಕಾಚಾರಗಳೂ ಶುರುವಾಗಿ ಬಿಟ್ಟಿದೆ.

Advertisement

ಇದನ್ನೂ ಓದಿ: IPL-2024: ಲಕ್ನೋ ಸೂಪರ್‌ ಜೈಂಟ್ಸ್‌ ಭೀಕರ ಸೋಲು :  ಕೆಎಲ್‌ ರಾಹುಲ್ ವಿರುದ್ದ ಲಕ್ನೋ ಮಾಲೀಕ ಕೋಪ

ಹೌದು, ಚುನಾವಣಾ ಆಯೋಗ ಕರ್ನಾಟಕ ವಿಧಾನ ಪರಿಷತ್‌ನ(Karnataka Vidhana Parishath) 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಘೋಷಿಸಿದೆ. ಜೂನ್‌ 3ರಂದು ಮತದಾನ ನಡೆಯಲಿದ್ದು, ಜೂನ್‌ 6ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿದಾನ ಪರಿಷತ್ ಚುನಾವಣೆಯಲ್ಲೂ ಕೂಡ ಭಾರೀ ಪೈಪೋಟಿ ನಡೆಯಲಿದೆ. ಏಕೆಂದರೆ ಇದು ಮೈತ್ರಿ ಪಕ್ಷಗಳಿಗೆ ಅಧಿಕಾರ ಉಳಿಸಿಕೊಳ್ಳಲು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪರಿಷತ್ ಅಧಿಕಾರ ಪಡೆಯಲು ತುಂಬಾ ಮುಖ್ಯವಾದ ಚುನಾವಣೆ ಆಗಿದೆ.

ಅಂದಹಾಗೆ ಈಗಾಗಲೇ ಕಾಂಗ್ರೆಸ್(Congress) ನಾಯಕರೊಬ್ಬರು ಪರಿಷತ್ ಚುನಾವಣೆ ಲೆಕ್ಕಾಚಾರದ ಕುರಿತು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಜೊತೆಗೆ ಪರಿಷತ್‌ನಲ್ಲಿಯೂ ನಾವು ಹೆಚ್ಚು ಸ್ಥಾನ ಪಡೆಯಬೇಕು. ಪರಿಷತ್‌ನಲ್ಲಿ ನಮ್ಮ ಸದಸ್ಯ ಬಲ 8 ರಿಂದ 9 ಹೆಚ್ಚಾದರೆ ನಾವು ಸುಲಭವಾಗಿ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಬಹುದು. ಅಲ್ಲದೇ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸಬಹುದು. ಅದಕ್ಕಾಗಿಯೇ ಪರಿಷತ್ ಚುನಾವಣೆ ಮೇಲೆಯೂ ಹೆಚ್ಚು ಗಮನ ನೀಡಲಾಗಿದೆ ಎಂದಿದ್ದಾರೆ. ಹೀಗಾಗಿ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಆಗುವ ಮೊದಲೇ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳು ಕಾಂಗ್ರೆಸ್ ಗೆ ದೊರಕಲಿವೆ ಎಂದಿರುವುದು ಭಾರೀ ಕುತೂಹಲ ಕೆರಳಿಸಿದೆ.

ಕರ್ನಾಟಕ ವಿಧಾನಪರಿಷತ್ ಸದ್ಯದ ಬಲಾಬಲ :

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಲ 75. ಸದ್ಯ ಬಿಜೆಪಿ(BJP) 32, ಕಾಂಗ್ರೆಸ್ 29 ಮತ್ತು ಜೆಡಿಎಸ್‌(JDS)ನ 7 ಸದಸ್ಯರು ಇದ್ದಾರೆ. ಉಳಿದ ಸ್ಥಾನಗಳು ಖಾಲಿ ಇವೆ. ಬಿಜೆಪಿ-ಜೆಡಿಎಸ್ ಸೇರಿದರೆ ಸಾಮಾನ್ಯ ಬಹುಮತ 39 ಸದಸ್ಯರು ಇದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ತೊಂದರೆ ಆಗುತ್ತಿದೆ. ಅಲ್ಲದೇ ಸಭಾಪತಿ ಸ್ಥಾನ ಬಿಜೆಪಿ ಕೈಯಲ್ಲಿ ಇದೆ. ಸದ್ಯ ಮುಂದೆ ನಡೆಯುವ ಚುನಾವಣೆ ಮೂಲಚ ಕಾಂಗ್ರೆಸ್ ನ ಸದಸ್ಯ ಬಲ 8 ರಿಂದ 9 ಹೆಚ್ಚಾದರೆ ಸುಲಭವಾಗಿ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಬಹುದು. ಅಲ್ಲದೇ ಸಭಾಪತಿ ಸ್ಥಾನವನ್ನೂ ಪಡೆಯಬಹುದು.

Advertisement
Advertisement
Next Article