For the best experience, open
https://m.hosakannada.com
on your mobile browser.
Advertisement

Ration Card: ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ - ಸಚಿವರಿಂದ ಹೊಸ ಘೋಷಣೆ!!

10:15 AM Dec 12, 2023 IST | ಕಾವ್ಯ ವಾಣಿ
UpdateAt: 10:15 AM Dec 12, 2023 IST
ration card  ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್   ಸಚಿವರಿಂದ ಹೊಸ ಘೋಷಣೆ
Advertisement

Ration Card: ವಿಧಾನ ಪರಿಷತ್ ನಲ್ಲಿ ಸೋಮವಾರ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರು ಪಡಿತರ (Ration Card) ಸೌಲಭ್ಯ ಗುಣಮಟ್ಟದ ಬಗ್ಗೆ ಪ್ರಸ್ತಾಪಿಸಿದ್ದು, ಅದರಂತೆ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಮೂರು ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡಲಾಗುತ್ತಿದೆ. ಆದರೆ ಗುಣಮಟ್ಟದ ರಾಗಿ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

Advertisement

ಈ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಹೆಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಗಿ ದಾಸ್ತಾನು ವೇಳೆ ಭಾರಿ ಅವ್ಯವಹಾರ ನಡೆದು ಕಳಪೆ ಗುಣಮಟ್ಟದ ರಾಗಿ ದಾಸ್ತಾನು ಮಾಡಲಾಗಿತ್ತು. ಈಗ ನಾವು ಗುಣಮಟ್ಟದ ಆಹಾರ ಧಾನ್ಯ ಸಂಗ್ರಹಿಸಿ ವಿತರಿಸುತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಡಿತರ ದಾಸ್ತಾನು ಗೋದಾಮುಗಳಲ್ಲಿ ಪ್ರತಿ ವಾರಕ್ಕೆ ಒಮ್ಮೆ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಪಡಿತರ ಅಕ್ರಮ, ಕಳ್ಳ ಸಾಗಣೆ ತಡೆಗೆ ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ರಚಿಸಲು ಪರಿಶೀಲನೆ ನಡೆದಿದೆ ಎಂದು ತಿಳಿಸಿದ್ದಾರೆ .

Advertisement

ಇದನ್ನೂ ಓದಿ: New Criminal Laws: ಭಾರತೀಯ ನ್ಯಾಯ ಸಂಹಿತಾ ಬಿಲ್ ಜೊತೆಗೆ 3 ಕ್ರಿಮಿನಲ್ ಕಾನೂನು ಮಸೂದೆಗಳನ್ನು ಹಿಂಪಡೆದ ಕೇಂದ್ರ !!

Advertisement
Advertisement
Advertisement