Kolar School Management : 40 ಮಕ್ಕಳನ್ನು ಶಾಲೆಯಲ್ಲೇ ಕೂಡಿ ಹಾಕಿ ವಿಕೃತಿ ಮೆರೆದ ಶಾಲಾ ಆಡಳಿತ ಮಂಡಳಿ - ವಿದ್ಯೆ ನೀಡೋ ಸಂಸ್ಥೆಯೇ ಹೀಗೆ ಮಾಡಿದ್ಯಾಕೆ ?!
Kolar School Management: ಕೋಲಾರದಲ್ಲಿ (Kolar)ವ್ಯಾನ್ ಫೀಸ್ ಕಟ್ಟಿಲ್ಲವೆಂದು ಶಾಲಾ ಆಡಳಿತ ಮಂಡಳಿಯೊಂದು (Kor-In School Kolar) 40 ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಬಿಡದೆ ತಡೆದ ಅಮಾನವೀಯ ಘಟನೆ ವರದಿಯಾಗಿದೆ.
ಕೋಲಾರ ತಾಲೂಕಿನ ವಡಗೂರು ಗೇಟ್ ಬಳಿಯ ಕೊರ್ ಇನ್ ಶಾಲೆಯಲ್ಲಿ( Kolar School Management)ನಿನ್ನೆ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಾಲಾ ಮಕ್ಕಳು ತೆರಳುವ ವ್ಯಾನ್ ಫೀಸ್ ಕಟ್ಟಿಲ್ಲ ಎಂದು ಶಾಲಾ ಆಡಳಿತ ಮಂಡಳಿಯ ಸೂಚನೆಯ ಮೇರೆಗೆ ಶಾಲೆಯ ಪ್ರಾಂಶುಪಾಲರು ವ್ಯಾನ್ ಸೌಲಭ್ಯ ನಿಲ್ಲಿಸಿದ್ದಾರೆ. ಈ ಕುರಿತಂತೆ ಪೋಷಕರಿಗೆ ಯಾವುದೇ ಮಾಹಿತಿಯೂ ನೀಡದೆ, ಮಕ್ಕಳನ್ನ ನಿನ್ನೆ ಮಧ್ಯಾಹ್ನ 3.30 ಕ್ಕೆ ಶಾಲೆ ಮುಗಿದರೂ ಕೂಡ ರಾತ್ರಿ 7 ರವರಿಗೆ ಮನೆಗೆ ಕಳುಹಿಸದೆ ಶಾಲೆಯಲ್ಲಿಯೇ ಇರಿಸಲಾಗಿದೆ.
ಈ ರೀತಿ,ಕೊರ್ ಇನ್ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿ ಅಮಾನವೀಯವಾಗಿ ನಡೆದುಕೊಂಡ ಹಿನ್ನೆಲೆ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ಆಕ್ರೋಶಗೊಂಡ ಬಳಿಕ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟ ನಂತರ ಶಾಲಾ ಮಕ್ಕಳನ್ನ ಪುನಃ ಶಾಲಾ ಬಸ್‌ನಲ್ಲೇ ಶಾಲಾ ಆಡಳಿತ ಮಂಡಳಿ ವಾಪಾಸ್ ಮನೆಗೆ ಕಳಿಸಿದೆ. ಹೀಗಾಗಿ ರಾತ್ರಿ 7 ಗಂಟೆಯ ನಂತರ ಮಕ್ಕಳು ಮನೆಗೆ ಹಿಂತಿರುಗಿದ ಘಟನೆ ವರದಿಯಾಗಿದೆ.
ಇದನ್ನೂ ಓದಿ: Jagadish Shetter: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಜಗದೀಶ್ ಶೆಟ್ಟರ್ !!