For the best experience, open
https://m.hosakannada.com
on your mobile browser.
Advertisement

HSRP: ವಾಹನಗಳ ನಂಬರ್ ಪ್ಲೇಟ್ ಕುರಿತು ಹೊರಬಿತ್ತು ಮತ್ತೊಂದು ಹೊಸ ಆದೇಶ- ಈ ಕೆಲಸ ಕಡ್ಡಾಯ

11:50 AM Nov 30, 2023 IST | ಅಶ್ವಿನಿ ಹೆಬ್ಬಾರ್
UpdateAt: 11:50 AM Nov 30, 2023 IST
hsrp  ವಾಹನಗಳ ನಂಬರ್ ಪ್ಲೇಟ್ ಕುರಿತು ಹೊರಬಿತ್ತು ಮತ್ತೊಂದು ಹೊಸ ಆದೇಶ  ಈ ಕೆಲಸ ಕಡ್ಡಾಯ
Image source: linkdin

HSRP Number Plates : ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates-HSRP) ಕಡ್ಡಾಯವಾಗಿ ಅಳವಡಿಸಬೇಕು. ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plates)ಅಳವಡಿಕೆಗೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ವಾಹನ ಸವಾರರು ಎಚ್ಎಸ್ಆರ್ಪಿ ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ಅಳವಡಿಸಿದ ಮಾಡಿದ ಹಿನ್ನೆಲೆ ಈ ನಂಬರ್ ಪ್ಲೇಟ್ ಅಳವಡಿಕೆಗಿದ್ದ ಅವಧಿಯನ್ನು 2024ರ ಫೆಬ್ರವರಿ 17 ರವರೆಗೆ ವಿಸ್ತರಣೆ ಮಾಡಲಾಗಿದೆ.

Advertisement

ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (HSRP) ಕಡ್ಡಾಯವಾಗಿ ಅಳವಡಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ವಾಹನ ಮಾಲೀಕರು ತಮ್ಮ ವಾಹನಗಳಿಗೆ ಫೆಬ್ರವರಿ 17, 2024 ರೊಳಗಾಗಿ ನೋಂದಣಿ ಫಲಕ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಹಳೆಯ/ಅಸ್ತಿತ್ವದಲ್ಲಿರುವ ವಾಹನಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಹಾಗೂ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್‌, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: BBK 10: ಇಂತವರು 'ಬೆಡ್' ಅಲ್ಲಿ ಗುಡ್ ಅಂತೆ !! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಹೊಸ ಪ್ರಯೋಗ- ಬಾಯ್ಬಾಯಿ ಬಿಟ್ಟ ವೀಕ್ಷಕರು

Advertisement

Advertisement
Advertisement