KSRTC: ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಡಿಸೆಂಬರ್ ನಲ್ಲಿ ಎದುರಾಯ್ತು ಹೊಸ ಸಂಕಷ್ಟ- ಇದು ಸರ್ಕಾರ ತಂದ ಹೊಸ ರೂಲ್ಸ್'ನ ಅವಾಂತರ !!
KSRTC: KSRTC ಬಸ್ಸಿನಲ್ಲಿ ಸರ್ಕಾರದ ಶಕ್ತಿ ಯೋಜನೆ ಮೂಲಕ ಫ್ರೀಯಾಗಿ ಓಡಾಡೋ ಮಹಿಳೆಯರಿಗೆ, ದುಡ್ಡು ಕೊಟ್ಟು ಪ್ರಯಾಣಿಸೋ ಪುರುಷರಿಗೂ ಡಿಸೆಂಬರ್ ನಲ್ಲಿ ಹೊಸ ಸಮಸ್ಯೆಯೊಂದು ಎದುರಾಗಿದೆ. ಈ ತಿಂಗಳು ಎಲ್ಲಾ ಬಸ್ ಫುಲ್ ರಶ್ಶೋ, ರಶ್ಶು..!! ಯಾಕೆಂದರೆ ಶೈಕ್ಷಣಿಕ ಪ್ರವಾಸ ವಿಚಾರವಾಗಿ ಸರ್ಕಾರ ತಂದ ಈ ಒಂದು ಹೊಸ ರೂಲ್ಸ್ ಈ ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ.
ಹೌದು, ವರ್ಷಾಂತ್ಯದ ಹಾಗೂ ಆರಂಭದ ತಿಂಗಳುಗಳಲ್ಲಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಎಲ್ಲರಿಗೂ ತಿಳಿದಿದೆ. ಆದರೆ ಜನವರಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡ ಬೇಕಿರುವುದರಿಂದ ಡಿಸೆಂಬರ್ ಅಂತ್ಯ ದೊಳಗೆ ಶೈಕ್ಷಣಿಕ ಪ್ರವಾಸ ಪೂರ್ಣ ಗೊಳಸಬೇಕು ಎಂದು ಶಿಕ್ಷಣ ಇಲಾಖೆಯು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಹೀಗೆ ಏಕಾಏಕಿ ಬಂದ ಸೂಚನೆಯನ್ನು ಪಾಲಿಸಲು ರಾಜ್ಯದ ಹಲವು ಶಾಲೆಗಳಲ್ಲಿ ಡಿಸೆಂಬರ್ ಒಳಗೆ ಪ್ರವಾಸ ಮುಗಿಸಲು ಯೋಜನೆ ರೂಪಿಸಲಾಗಿದೆ.
ಇದರೊಂದಿಗೆ ಇಷ್ಟು ವರ್ಷ ಹೆಚ್ಚಾಗಿ ಎಲ್ಲಾ ಶಾಲೆಗಳಲ್ಲೂ ಖಾಸಗಿ ವಾಹನಗಳಲ್ಲೇ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ವರ್ಷದಿಂದ ಸರ್ಕಾರಿ ಬಸ್ ನಲ್ಲಿ ಮಾತ್ರ ಎಲ್ಲಾ ಶಾಲೆಗಳು ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಬೇಕೆಂದು ಸರ್ಕಾರ ಹೊಸ ಆದೇಶವನ್ನೂ ಹೊರಡಿಸಿದೆ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಯೋಜನೆಯನ್ನು ಶಾಲೆಗಳಲ್ಲಿ ಸರಿಯಾಗಿ ಮಾಡದೇ ಇರುವುದರಿಂದ, ಏಕಾಕಿ ಸರ್ಕಾರ ಹೊಸ ರೂಲ್ಸ್ ತಂದ ಕಾರಣ, ಪ್ರವಾಸಕ್ಕೆ ಸರ್ಕಾರಿ ಬಸ್ ಗಳನ್ನು ಕಳಿಸುವ ಕಾರಣ ಡಿಸೆಂಬರ್‌ನಲ್ಲಿ ಏಕಾಏಕಿ ಎಲ್ಲಾ ಸರ್ಕಾರಿ ಬಸ್ ಗಳು ರಶ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ: Jagadish Shetter: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಜಗದೀಶ್ ಶೆಟ್ಟರ್ !!