ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Yuvanidhi Scheme: ಮತ್ತೊಂದು ಗ್ಯಾರಂಟಿ ಜಾರಿಗೆ ಸದ್ದಿಲ್ಲದೆ ನಡೆಯುತ್ತಿದೆ ತಯಾರಿ- ಇವರಿಗಂತೂ ಸಿಗಲಿ ಭರ್ಜರಿ ಲಾಭ

ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ (Yuvanidhi Scheme)ತರಲು ಭರದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
10:29 AM Sep 22, 2023 IST | ಅಶ್ವಿನಿ ಹೆಬ್ಬಾರ್
UpdateAt: 07:19 AM Nov 21, 2023 IST
Image source: Rsdc. India.in

Yuvanidhi Scheme: ಚುನಾವಣಾ ಪೂರ್ವ ಕಾಂಗ್ರೆಸ್(Congress)ನೀಡಿದ್ದ ಪಂಚ ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತರಲು ಹರಸಾಹಸ ಪಡುತ್ತಿದೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ (Yuvanidhi Scheme)ತರಲು ಭರದ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

Advertisement

ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 5 ನೇ ಗ್ಯಾರಂಟಿಯಾದ ಡಿಪ್ಲೋಮಾ(Diploma), ಪದವೀಧರರಿಗೆ ನೀಡುವ 1,500 ರೂ. ಹಾಗೂ 3000 ರೂ. ನೀಡುವ ಯುವ ನಿಧಿ ಯೋಜನೆಯನ್ನು (Yuva Nidhi)ಡಿಸೆಂಬರ್ ಇಲ್ಲವೇ ಜನವರಿ 2024 ರಲ್ಲಿ ಜಾರಿಯಾಗುವ ಸಂಭವದ ಕುರಿತು ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ಮಾಹಿತಿ ನೀಡಿದ್ದರು.

ರಾಜ್ಯ ಸರ್ಕಾರವು ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಿದೆ. ಡಿಸೆಂಬರ್ ಕೊನೆಯಲ್ಲಿ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ತಯಾರಿ ನಡೆಯುತ್ತಿದೆ. ಇದೀಗ, ಯುವನಿಧಿ ಯೋಜನೆ ಕುರಿತು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

Advertisement

ಯುವ ನಿಧಿ ಯೋಜನೆ 2022-23ರಲ್ಲಿ ಪಾಸ್ ಆದ ಪದವೀಧರ ನಿರುದ್ಯೋಗಿಗಳಿಗೆ ಅನ್ವಯವಾಗಲಿದ್ದು, ಈ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3000 ಸಾವಿರ ರೂಪಾಯಿ ಮತ್ತು ಡಿಪ್ಲೋಮಾ ಆಗಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂಪಾಯಿಗಳನ್ನು ನಿರುದ್ಯೋಗ ಭತ್ಯೆಯಾಗಿ 24 ತಿಂಗಳು ನೀಡುವುದಾಗಿ ತಿಳಿಸಲಾಗಿದೆ. ಡಿಪ್ಲೋಮಾ ಹಾಗೂ ಪದವೀಧರರಿಗೆ ಮಾಸಿಕ 1,500 ರೂ.ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಈ ವರ್ಷದ ಅಂತ್ಯ ಡಿಸೆಂಬರ್ ನಲ್ಲಿ ಜಾರಿಗೆ ತರಲಾಗುವ ಕುರಿತು ಮಾಹಿತಿ ನೀಡಿದ್ದಾರೆ. 2023ರಲ್ಲಿ ತೇರ್ಗಡೆಯಾಗಿ 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಹೋದರೆ, ಅಂತಹ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ಸಿಗಲಿದೆ. ಈ ಭತ್ಯೆಯನ್ನು ಉದ್ಯೋಗ ಸಿಗುವವರೆಗೂ ಗರಿಷ್ಠ 2 ವರ್ಷಗಳ ಕಾಲ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: KPSC ಯಿಂದ 40 ಕ್ಕೂ ಹೆಚ್ಚು ವಿವಿಧ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ!

Advertisement
Advertisement
Next Article