Gruha Lakshmi Yojana: ಯಜಮಾನಿಯರೇ 'ಗೃಹಲಕ್ಷ್ಮೀ'ಗೆ ಆಗಸ್ಟ್ 15ಕ್ಕೂ ಮೊದಲು ಅರ್ಜಿ ಸಲ್ಲಿಸಿದ್ದೀರಾ ?! ಹಾಗಿದ್ರೆ ಮಿಸ್ ಮಾಡ್ದೆ ಈ ಕೆಲಸ ಮಾಡ್ಲೇಬೇಕು!! ಇಲ್ಲಾಂದ್ರೆ ಹಣ ಕ್ಯಾನ್ಸಲ್
Gruhalakshmi Scheme: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಕೂಡ ಒಂದಾಗಿದ್ದು, ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಇನ್ನೂ ಕೆಲವರ ಅಕೌಂಟ್ಗೆ ಜಮೆ ಆಗಿಲ್ಲ. ಈ ಹಿನ್ನಲೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯ ಆರಂಭವಾಗಿ ನಾಲ್ಕು ತಿಂಗಳು ಕಳೆದಿದ್ದು, ಈಗಾಗಲೇ ಮೂರು ಕಂತಿನ ಹಣ ವರ್ಗಾವಣೆಯಾಗಿದೆ. ಆಗಸ್ಟ್ 15ನೇ ತಾರೀಖಿನ ಮೊದಲು ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರ ಖಾತೆಗೆ 6,000 ಹಣ ಜಮಾ ಮಾಡಲಾಗುವ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನೀವು ಆಗಸ್ಟ್ 15ಕ್ಕಿಂತ ಮೊದಲೆ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿ ಹಣ ಬಂದಿಲ್ಲ ಅಂದರೆ ದೂರು ಸಲ್ಲಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭ ಮಾಡಿದೆ.
ಹೀಗಾಗಿ, ನೀವು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಅವರು ತಕ್ಷಣವೇ ನಿಮ್ಮ ಖಾತೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸಲಿದ್ದಾರೆ. ಗೃಹಲಕ್ಷ್ಮಿ ಹಣ ಬಾರದೆ ಇರುವ ಮಹಿಳೆಯರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ.ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ 2,000 ತಲುಪಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ
ಇದನ್ನೂ ಓದಿ: Dr Bro: ಖ್ಯಾತ ಯೂಟ್ಯೂಬರ್ ಡಾ. ಬ್ರೋ ನಾಪತ್ತೆ ?