Anna Bhagya Yojana: ನವೆಂಬರ್ ತಿಂಗಳ ಅನ್ನಭಾಗ್ಯ ದುಡ್ಡು ಜಮಾ- ನಿಮ್ಮ ಖಾತೆಗೂ ಬಂತಾ ಹಣ ?! ಈಗಲೇ ಚೆಕ್ ಮಾಡಿ
Anna Bhagya Yojana: ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ(Anna Bhagya Yojana) ಸರ್ಕಾರವು ಪ್ರತಿ ಕೆಜಿಗೆ 34 ರೂ. ದರದಲ್ಲಿ ಜನರಿಗೆ ನಗದು ನೀಡುತ್ತಿತ್ತು. ಈ ಪ್ರಯೋಜನವು ಬಡತನ ರೇಖೆಗಿಂತ ಕೆಳಗಿರುವ (BPL) ಮತ್ತು ಅಂತ್ಯೋದಯ ಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯವಾಗಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ(Ration Card Holder)ನವಂಬರ್ ತಿಂಗಳಿಗೆ ಅನ್ವಯವಾಗುವಂತೆ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗಿದೆ. ಇದೀಗ ನವೆಂಬರ್ ತಿಂಗಳ ಹೆಚ್ಚುವರಿ ಅಕ್ಕಿಯ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಪಡೆದುಕೊಳ್ಳಲು https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಬಹುದು.
ಚೆಕ್ ಮಾಡುವುದು ಹೇಗೆ?
ಆಹಾರ https://ahara.kar.nic.in/ ಭೇಟಿ ನೀಡಿ, ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಲಿದ್ದು, ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಬಳಿಕ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳಲಿದೆ. ಇದರ ನಂತರ ಆರ್ ಸಿ ನಂಬರನ್ನು ನಮೂದಿಸಿಕೊಂಡು ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು.ಇದರ ಜೊತೆಗೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ತಿಳಿಯಬಹುದು.
ಇದನ್ನೂ ಓದಿ: HSRP: ವಾಹನಗಳ ನಂಬರ್ ಪ್ಲೇಟ್ ಕುರಿತು ಹೊರಬಿತ್ತು ಮತ್ತೊಂದು ಹೊಸ ಆದೇಶ- ಈ ಕೆಲಸ ಕಡ್ಡಾಯ