ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Yuvanidhi Scheme: 'ಯುವನಿಧಿ' ಜಾರಿ ದಿನಾಂಕ ಘೋಷಣೆ !!

05:10 PM Dec 10, 2023 IST | ಕಾವ್ಯ ವಾಣಿ
UpdateAt: 05:11 PM Dec 10, 2023 IST

Yuvanidhi Scheme: ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳ ಪೈಕಿ, ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಿದೆ . ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ (Yuvanidhi Scheme) ಜಾರಿಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೌದು, ಡಿಸೆಂಬರ್ 21 ರಿಂದ ನೋಂದಣಿ ಆರಂಭವಾಗಲಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

Advertisement

ಯುವನಿಧಿ ಯೋಜನೆ ಪ್ರಕಾರ, ಡಿಪ್ಲೋಮಾ ಹಾಗೂ ಪದವೀಧರರಿಗೆ ಮಾಸಿಕ 1,500 ರೂ. ಹಾಗೂ 3,000 ರೂ. ಭತ್ಯೆ ನೀಡಲಾಗುತ್ತದೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಯೋಜನೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಯೋಜನೆಗೆ ಚಾಲನೆ ನೀಡುವ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು. ಸದ್ಯ ಸುಮಾರು ಐದು ಲಕ್ಷ ಯುವಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.

ಸದ್ಯ 2022-2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ತಿಳಿಸಲಾಗಿದ್ದು, ಇದಕ್ಕಿಂತ ಹಿಂದೆ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರಿಗೆ ಭತ್ಯೆ ಸಿಗಲ್ಲ ಎಂದು ವರದಿಯಾಗಿದೆ.

Advertisement

ಯುವನಿಧಿ ಯೋಜನೆ ಪ್ರಯೋಜನ ಪಡೆಯಲು ಬೇಕಾದ ದಾಖಲೆಗಳು ಇಂತಿವೆ:
ಆಧಾರ್ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಡಿಪ್ಲೊಮಾ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಆದಾಯ ಪ್ರಮಾಣಪತ್ರ, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು, ಸೆಲ್ಫ್ ಡಿಕ್ಲರೇಷನ್‌ ಪ್ರತಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಭಾವಚಿತ್ರ ಬೇಕಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ - ವೇತನದಲ್ಲಿ 17% ಏರಿಕೆ !! ಈ ತಿಂಗಳಿಂದಲೇ ಜಾರಿ

Advertisement
Advertisement
Next Article