Ration Shop: ರೇಷನ್ ಅಂಗಡಿಯ ಮಾಲೀಕರು ನೀವಾಗಬೇಕೆ - ಹಾಗಿದ್ರೆ ಈ ಕೂಡಲೇ ನ್ಯಾಯಬೆಲೆ ಅಂಗಡಿ ತೆರೆಯಲು ಹೀಗೆ ಅರ್ಜಿ ಸಲ್ಲಿಸಿ, ಅಧಿಕ ಲಾಭ ಗಳಿಸಿ
Fair price shop: ರಾಜ್ಯ ಸರಕಾರದ(Government)ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ(Anna Bhagya Scheme) ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.
ಅನ್ನಭಾಗ್ಯ ಯೋಜನೆ (Annabhagya Yojana)ಅಡಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ನೀಡಲಾಗುತ್ತಿದೆ. ಪಡಿತರ ವಸ್ತುಗಳನ್ನು ನೀಡುವ ನ್ಯಾಯಬೆಲೆ ಅಂಗಡಿಗಳ (Fair price shop) ಕೊರತೆ ಉಂಟಾಗಿದ್ದು ಅಲ್ಲಿಯ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ. ನೀವು ಸ್ಥಳೀಯರಾಗಿದ್ದರೆ ಅರ್ಜಿ ಸಲ್ಲಿಸಿ ನ್ಯಾಯಬೆಲೆ ಅಂಗಡಿಯನ್ನು ಪ್ರಾರಂಭ ಮಾಡಬಹುದು. ಆರಂಭಿಕ ಬಂಡವಾಳವನ್ನು (Investment) ನೀವು ಹೂಡಿಕೆ ಮಾಡಿದರು ಕೂಡ ಸರ್ಕಾರದಿಂದ ಪ್ರಯೋಜನ ಪಡೆಯಬಹುದು.
ಪ್ರಾಥಮಿಕ ಕೃಷಿ ಸಹಕಾರಿ ಸಂಘ, ತೋಟಗಾರಿಕಾ ಸಂಘ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಂಘ ಸಂಸ್ಥೆಗಳು, ಕಂಪನಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಾನ್ಯತೆ ಪಡೆದುಕೊಂಡಿರುವ ಸ್ವ ಸಹಾಯ ಗುಂಪುಗಳು ಮೊದಲಾದ ಸಂಘ-ಸಂಸ್ಥೆಗಳಿಗೆ ನ್ಯಾಯಬೆಲೆ ಅಂಗಡಿ (Ration Shop) ಪ್ರಾರಂಭ ಮಾಡಲು ಮೊದಲ ಆದ್ಯತೆ ನೀಡಬೇಕಾಗುತ್ತದೆ.
ನವೆಂಬರ್ ತಿಂಗಳ ಒಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನೀವು ಸಂಬಂಧ ಪಟ್ಟ ಅರ್ಜಿ ನಮೂನೆ ಎ ಹಾಗೂ ಸಂಬಂಧಪಟ್ಟ ದೃಢೀಕರಣ ಪ್ರಮಾಣ ಪತ್ರಗಳನ್ನು ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಹೋಗಿ ಪಡೆದು, ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
* 18 ವರ್ಷ ಮೇಲ್ಪಟ್ಟವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ನ್ಯಾಯಬೆಲೆ ಅಂಗಡಿ ಆರಂಭಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ (computer knowledge is mandatory) ಇರುವುದು ಕಡ್ಡಾಯವಾಗಿದೆ.
* ಪಡಿತರ ವಿತರಣೆ ಮಾಡಿದ ಬಳಿಕ ಗಣಕೀಕರಣ ಮಾಡುವ ಅಗತ್ಯವಿರುವ ಕಂಪ್ಯೂಟರ್ ಅರಿವಿರಬೇಕು.
* ನ್ಯಾಯಬೆಲೆ ಅಂಗಡಿ ಆರಂಭಿಸಲು ಅರ್ಜಿ ಸಲ್ಲಿಸುವ ಮೊದಲಿಗೆ ಆಹಾರ ಇಲಾಖೆಯ (official website) ಆಗಿರುವ https://ahara.kar.nic.in/Home/Home ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು.
ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯ ಮಾರಾಟಕ್ಕೆ ಒಂದಿಷ್ಟು ಕಮಿಷನ್ ನೀಡಲಾಗುತ್ತದೆ. ಇನ್ನು ಕೆಲ ಕಡೆ ತಿಂಗಳ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಇದರ ಜೊತೆಗೆ ಆ ಭಾಗದ ರೇಷನ್ ಕಾರ್ಡ್ ದಾರರ (Ration Card Holders) ಆಧಾರದ ಮೇಲೆ ಹೆಚ್ಚುವರಿ ಬೋನಸ್ ಕೂಡ ನೀಡಲಾಗುತ್ತದೆ.
ಇದನ್ನೂ ಓದಿ : ಗೃಹಲಕ್ಷ್ಮೀಯ ಬರೋಬ್ಬರಿ 59 ಕಂತಿನ ಹಣವನ್ನೂ ಒಬ್ಬರಿಗೇ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್- ಯಾರಿಗೆ, ಯಾಕಾಗಿ ಗೊತ್ತಾ ?!