For the best experience, open
https://m.hosakannada.com
on your mobile browser.
Advertisement

Karnataka Rain: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾರಾಂತ್ಯಕ್ಕೆ ವರುಣನ ಆಗಮನ

Karnataka Rain: ರಾಜ್ಯದ ವಿವಿಧೆಡೆ ವಾರಾಂತ್ಯಕ್ಕೆ ಸಾಧಾರಣ ಮಳೆ ಆಗುವ ಎಲ್ಲಾ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯೊಂದನ್ನು ನೀಡಿದೆ.
09:33 AM Apr 02, 2024 IST | ಮಲ್ಲಿಕಾ ಪುತ್ರನ್
UpdateAt: 09:36 AM Apr 02, 2024 IST
karnataka rain  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾರಾಂತ್ಯಕ್ಕೆ ವರುಣನ ಆಗಮನ
Image Credit Source: Mint

Karnataka Rain: ಕರ್ನಾಟಕದಾದ್ಯಂತ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತಾಪಮಾನಕ್ಕೆ ಜನ ಒಂದು ಕಡೆ ಸೊರಗಿ ಹೋಗಿದ್ದರೆ, ಒಂದು ಕಡೆ ಕುಡಿಯಲು ನೀರಿನ ಸಮಸ್ಯೆಯನ್ನು ಬೆಂಗಳೂರಿನ ಜನತೆ ಅನುಭವಿಸುತ್ತಿದ್ದಾರೆ. ಇದೀಗ ವಾರಾಂತ್ಯದಲ್ಲಿ ವರುಣ ಈ ಕೆಳಗೆ ನೀಡಿದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡೆ ಬಿರುಸಿನ ಮಳೆಯ ಸಂಭವನೀಯತೆಯನ್ನು ಹವಾಮಾನ ಇಲಾಖೆ ಹೇಳಿದೆ.

Advertisement

ರಾಜ್ಯದ ವಿವಿಧೆಡೆ ವಾರಾಂತ್ಯಕ್ಕೆ ಸಾಧಾರಣ ಮಳೆ ಆಗುವ ಎಲ್ಲಾ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯೊಂದನ್ನು ನೀಡಿದೆ.

ಇದನ್ನೂ ಓದಿ: Sullia: ಸುಳ್ಯ; ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲು, ಆರೋಪಿ ಪರಾರಿ

Advertisement

ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳ ಕೆಲವು ಕಡೆ ಎಪ್ರಿಲ್‌ 6 ರಂದು ಹಗುರ ಮಳೆಯಾಗುವ ಸಂಭವವಿದೆ. ಕರಾವಳಿಯ ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಬೀದರ್‌ ಹಾವೇ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ, ಯಾದಗಿರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಕೊಡಗು, ದಾವಣಗೆರೆ ತುಮಕೂರು, ವಿಜಯಪುರ, ಮಂಡ್ಯ, ಮೈಸೂರು, ದಕ್ಷಿಣ ಒಳನಾಡಿದ ಯಾದಗಿರಿ ಇಲ್ಲೆಲ್ಲ ಎಪ್ರಿಲ್ 7 ರಂದು ಮಳೆಯಾಗುವ ಸಂಭವನೀಯತೆ ಕುರಿತು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Rice Price : ಅಕ್ಕಿ ಬೆಲೆಯಲ್ಲಿ 10 ರೂ ಇಳಿಕೆ !!

Advertisement
Advertisement