ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Electric Sewing Machine: ಮಹಿಳೆಯರೆ ಸರ್ಕಾರದಿಂದ ಸಿಗ್ತಿದೆ ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ - ತಕ್ಷಣ ಅರ್ಜಿ ಸಲ್ಲಿಸಿ, ಹೊಲಿಗೆಯಂತ್ರ ನಿಮ್ಮದಾಗಿಸಿ

12:22 PM Nov 28, 2023 IST | ಅಶ್ವಿನಿ ಹೆಬ್ಬಾರ್
UpdateAt: 12:22 PM Nov 28, 2023 IST
Advertisement

Electric Sewing Machine: ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿರುವ ಕರಕುಶಲ ವೃತ್ತಿ (craftmanship) ತೊಡಗಿಸಿಕೊಂಡಿರುವ 2023- 24 ಸರ್ಕಾರ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.

Advertisement

ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ 2023- 2024ನೆ ಸಾಲಿನ, ಜಿಲ್ಲಾ ಪಂಚಾಯತ್‌ (Jilla panchayat) ಮೂಲಕ ಜನತೆಗೆ ಉಚಿತವಾಗಿ ಸಲಕರಣೆ ಸರಬರಾಜು ಮಾಡುವ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ (loan without interest) ಸಬ್ಸಿಡಿ (subsidy Loan) ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ.

ಗ್ರಾಮೀಣ ಭಾಗದ ವೃತ್ತಿಪರ ಕುಶಲಕರ್ಮಿಗಳಿಗೆ ಈ ಯೋಜನೆಯನ್ನು ಮೀಸಲಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಕುಶಲ ಕರ್ಮಿ ವೃತ್ತಿಪರರಿಗೆ ಸಹಾಯಧನವನ್ನು ಯೋಜನೆಯಡಿಯಲ್ಲಿ ಒದಗಿಸಲಾಗುತ್ತದೆ. ಕಮ್ಮಾರರು, ಎಲೆಕ್ನಿಷಿಯನ್, ದೋಬಿ, ಕ್ಷೌರಿಕ ಮೊದಲಾದಂತೆ ಯೋಜನೆಯ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಮಹಿಳೆಯರಿಗೆ ಎಲ್ಲ ವಿದ್ಯುತ್ ಚಾಲಿತ ಹೊಲಿಗೆ (electric sewing machine) ಕೂಡ ನೀಡಲಾಗುತ್ತದೆ.

Advertisement

ರಾಜ್ಯಾದ್ಯಂತ ಕೆಲವು ಜಿಲ್ಲೆಗಳಿಗೆ ಮಾತ್ರ ಉಚಿತ ಎಲೆಕ್ಟಿಕ್ ಹೊಲಿಗೆ ಯಂತ್ರ ಮತ್ತು ಕುಶಲಕರ್ಮಿ ಸಹಾಯಧನ ಪ್ರಯೋಜನ ಅನುವು ಮಾಡಿಕೊಡಲಾಗುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಅತೀ ಶೀಘ್ರದಲ್ಲೇ ಈ ಯೋಜನೆ ವಿಸ್ತರಿಸಲಾಗುತ್ತದೆ. ಈಗ ಯಾವ ಜಿಲ್ಲೆಗಳಿಗೆ ಅನುವು ಮಾಡಿಕೊಡಲಾಗುತ್ತದೆ.
*ಮೈಸೂರು
*ಮಂಡ್ಯ
*ಚಿಕ್ಕಬಳ್ಳಾಪುರ
* ಚಾಮರಾಜನಗರ
* ಬೀದರ್
* ಬೆಂಗಳೂರು
*ಕೋಲಾರ
* ಹಾಸನ
* ಯಾದಗಿರಿ
* ಗದಗ
* ರಾಯಚೂರು.
ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಹೊರಡಿಸಿರುವ ಅದೇ ಸೂಚನೆಯ ಪ್ರಕಾರ ಕೊನೆಯ ದಿನಾಂಕವನ್ನು ತೀರ್ಮಾನ ಕೈಗೊಳ್ಳಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?
* ಪ್ರತಿ ಜಿಲ್ಲೆಗೆ ಪ್ರತ್ಯೇಕ ವೆಬ್ ಪೋರ್ಟಲ್ (separate Web Portal for every district) ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.
* ಆ ಬಳಿಕ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ.
* ಇದಾದ ಬಳಿಕ, ಯಾವ ಯೋಜನೆಗೆ ನೆರವು ಪಡೆಯಲು ಬಯಸಿದ್ದೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
* ಈ ವಿವರಗಳನ್ನು ಭರ್ತಿ ಮಾಡಿದ ಬಳಿಕ ಘೋಷಣಾ ಪತ್ರದಲ್ಲಿ I agree ಎನ್ನುವುದನ್ನು ಆಯ್ಕೆ ಮಾಡಿದರೆ ಮಾತ್ರ ನೀವು ಮುಂದಿನ ಪ್ರಕ್ರಿಯೆ ನಡೆಸಬಹುದು.
* attach annexure ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
* ಇದಾದ ಬಳಿಕ, ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಅಪ್ಲಿಕೇಶನ್ ಸಲ್ಲಿಕೆಯಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Needed documents) ಹೀಗಿವೆ:
ಹೊಲಿಗೆ ಯಂತ್ರ ಪಡೆದುಕೊಳ್ಳಲು ಪಾಸ್ಪೋರ್ಟ್ ಸೈಜ್ ಫೋಟೋ ,ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಹೊಲಿಗೆ ತರಬೇತಿ ಪ್ರಮಾಣ ಪತ್ರ ಬೇಕಾಗುತ್ತವೆ. ಕುಶಲಕರ್ಮಿ ವೃತ್ತಿಪರರು ಆಯಾ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಂದ ದೃಢೀಕರಣ ಪ್ರಮಾಣ ಪತ್ರ ಇಲ್ಲವೇ ಕಾರ್ಮಿಕ ಇಲಾಖೆಯಿಂದ ವಿತರಿಸಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದರ ಜೊತೆಗೆ ಸಹಾಯಧನ ಪಡೆದುಕೊಳ್ಳಲು (Bank Account Details) ವಿವರ ನೀಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Baba Vanga 2024 Predictions: 2024ರಲ್ಲಿ ಏನೆಲ್ಲಾ ಸಂಭವಿಸುತ್ತೆ ಗೊತ್ತಾ?! ಹೊರಬಿತ್ತು ಭಯ ಹುಟ್ಟಿಸೋ ಬಾಬಾ ವಂಗರ ಆತಂಕಕಾರಿ ಭವಿಷ್ಯ !!

Related News

Advertisement
Advertisement